ಒಂದೆಲಗ ಸೊಪ್ಪಿನ ಔಷಧೀಯ ಗುಣಗಳು!

ಒಂದೆಲಗ ಸೇವನೆ ಮಾಡುವುದರಿಂದ ನಮ್ಮ ದೇಹಾರೋಗ್ಯಕ್ಕೆ ಯಾವೆಲ್ಲ ರೀತಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಲಾಭಗಳು ಇದ್ದಾವೆ ಎಂದು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ

#ಒಂದೆಲಗದ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಅದರಿಂದ ರಸ ತೆಗೆದು ಅದನ್ನು ಜೇನುತುಪ್ಪದ ಜೊತೆ ಬೆರಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

#ಮಾನಸಿಕ ಒತ್ತಡವು ಹೆಚ್ಚಾದರೆ ಅದು ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಬ್ರಾಹ್ಮಿ ಉತ್ತಮ ಪರಿಹಾರ. ಇದು ನರವ್ಯವಸ್ಥೆಯನ್ನು ಸುಧಾರಣೆ ಮಾಡಿ ಮೆದುಳಿನ ಕಾರ್ಯವನ್ನು ಉತ್ತಮಪಡಿಸುತ್ತದೆ.

#ಗಾಯ ಹಾಗೂ ಸುಟ್ಟ ಗಾಯ ಶಮನ:ವೈಜ್ಞಾನಿಕವಾಗಿ ಸೆಂಟೆಲ್ಲಾ ಏಷಿಯಾಟಿಕಾ ಎಂದು ಕರೆಯಲ್ಪಡುವಂತಹ ಈ ಗಿಡಮೂಲಿಕೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದಾಗಿ ಈ ಗಿಡಮೂಲಿಕೆಯನ್ನು ಗಾಯ, ಸುಟ್ಟ ಗಾಯ, ಸೋರಿಯಾಸಿಸ್, ಡರ್ಮಟೈಟಿಸ್ ಇತ್ಯಾದಿಗಳ ಚಿಕಿತ್ಸೆಗೆ ಬಳಸಬಹುದು. ಇದು ಗಾಯ, ಸುಟ್ಟಗಾಯ ಶಮನ ಮಾಡುವುದು. ಯಾಕೆಂದರೆ ಇದು ಬಾಧಿತ ಜಾಗಕ್ಕೆ ರಕ್ತಸಂಚಾರ ಹೆಚ್ಚಿಸಿ, ಆ್ಯಂಟಿಆಕ್ಸಿಡೆಂಟ್ ಮಟ್ಟ ವೃದ್ಧಿಸುವುದು. ಆ್ಯಂಟಿಆಕ್ಸಿಡೆಂಟ್ ಗಳು ಹೆಚ್ಚಾದರೆ ಆಗ ನಾರಿನ ಉತ್ಪತ್ತಿಯು ಹೆಚ್ಚಾಗುವುದು. ನಾರು ಕಾಲಜನ್ ನ್ನು ಸಂಶ್ಲೇಷಣೆ ಮಾಡಿ ಚರ್ಮದಲ್ಲಿ ಮೂಡಿರುವಂತಹ ಗಾಯದ ಗುರುತುಗಳನ್ನು ತೆಗೆಯಲು ನೆರವಾಗುವುದು.

#ಕೆಲವರಿಗೆ ಮೂತ್ರ ಮಾಡುವಾಗ ಉರಿ ಕಾಣಿಸಿಕೊಂಡಾಗ ಮತ್ತು ಮೂತ್ರದಲ್ಲಿ ಇನ್ಫೆಕ್ಷನ್ ಆದಾಗ ಒಂದೆಲಗದ ರಸ 4 ಚಮಚ, ಕೊತ್ತಂಬರಿ ಬೀಜದ ಪುಡಿ 1/2 ಚಮಚವನ್ನು ಎಳೆನೀರಿಗೆ ಬೆರಸಿ ಕುಡಿಯುವುದರಿಂದ ಉರಿಮೂತ್ರ ಮತ್ತು ಮೂತ್ರದಲ್ಲಿನ ಇನ್ಫೆಕ್ಷನ್ ಕಡಿಮೆಯಾಗುವುದು.

#ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ನಿವಾರಿಸುವುದು:ಈ ಗಿಡಮೂಲಿಕೆಯನ್ನು ಸಾಮಾನ್ಯ ಶೀತ, ಮೂತ್ರನಾಳದ ಸೋಂಕು, ಸರ್ಪಸುತ್ತು, ಕ್ಷಯರೋಗ, ಕುಷ್ಟರೋಗ, ಹಂದಿಜ್ವರ, ಭೇದಿ, ಕಾಲರಾ ಇತ್ಯಾದಿಗಳ ಚಿಕಿತ್ಸೆಗೆ ಬಳಸಿಕೊಳ್ಳಬಹುದು. ಮನುಷ್ಯರಲ್ಲಿ ಕಾಣಿಸುವ ವೈರಲ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ಸೋಂಕಿಗೆ ಇದನ್ನು ಬಳಸಲಾಗುವುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group