ಬೇಲದ ಹಣ್ಣಿನ ಅದ್ಭುತ ಪ್ರಯೋಜನ ಏನೇನು?

ಈ ಹಣ್ಣನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ,ಹಾಗೂ ಮಲಬದ್ಧತೆಗಳಂತ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಟ್ಟೆಯಲ್ಲಾಗುವ ಅಲ್ಸರ್ಗಳಿಗೆ ಇದು ರಾಮ ಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿನ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನುಹೆಚ್ಚಿಸುತ್ತದೆ. ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ
#ಹೊಟ್ಟೆಯ ಕರುಳನ್ನು ಸ್ವಚ್ಛಗೊಳಿಸಲು ಉತ್ತಮ ಆಯ್ಕೆಯಾಗಿದೆ. ನಿಯಮಿತವಾಗಿ ಸೇವಿಸಿದರೆ, ಇದು ಹೊಟ್ಟೆಯ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ತಿರುಳನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಬಹುದು
#ಆಸ್ತಮಾ ವಿರೋಧಿ ಗುಣಲಕ್ಷಣಗಳಿಂದ ಕೂಡಿದ ಬೇಲದ ಹಣ್ಣು, ನೆಗಡಿ, ಕೆಮ್ಮು ಮತ್ತು ಜ್ವರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಪ್ರಯೋಜನ ನೀಡುತ್ತದೆ. ಬ್ರಾಂಕೈಟಿಸ್ ಮತ್ತು ಆಸ್ತಮಾ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಹ ಇದು ಮುಖ್ಯವಾಗುತ್ತದೆ.
#ಕಿವಿಗಳಿಗೆ ಬೇಲದ ಹಣ್ಣು:ಇದು ಬೇಲದ ಹಣ್ಣಿನ ಪ್ರಯೋಜನಗಳಲ್ಲಿ ಒಂದಾಗಿದೆ. ಆದರೆ ಪರಿಣಾಮಕಾರಿ ಫಲಿತಾಂಶಗಳನ್ನು ಪಡೆಯುವಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಬೇಲದ ಹಣ್ಣಿನ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸೋಂಕುಗಳಿಗೆ ಚಿಕಿತ್ಸೆ ನೀಡಲು ಮತ್ತು ಕಿವಿಯಿಂದ ಘನೀಕೃತ ಮೇಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಹೀಗಾಗಿ, ಶ್ರವಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ.
#ಬೇಲದ ಹಣ್ಣಿನ ಪಾನಕ ಅತಿಸಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿಸಾರ ಸೋಂಕಿನ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತುರಿಕೆ ಮತ್ತು ತಲೆಹೊಟ್ಟು ಮುಂತಾದ ವಿವಿಧ ಕೂದಲಲಿನ ಸಮಸ್ಯೆಗೆ ಇದರ ಸೋಪ್ಪಿನ ಕಷಾಯ ದಲ್ಲಿ ತಲೆತೊಳೆದರೆ ಉತ್ತಮ ಪರಿಣಾಮ ಕಾರಿ. ಚರ್ಮದ ದದ್ದು ಮತ್ತು ತುರಿಕೆಶಗಳಿಗೂ ಇದು ಪ್ರಯೋಜನಕಾರಿ
#ಬೇಲದ ಕಾಯಿ ತಿರುಳನ್ನು (ಬೀಜ ಸಹಿತ) ಚೆನ್ನಾಗಿ ಕುಟ್ಟಿ ತಿನ್ನುವುದರಿಂದ ಆಮಶಂಕೆ ಮತ್ತು ಅತಿಸಾರ ನಿಲ್ಲುವುದು. ಬೇಲದ ಹಣ್ಣಿನ ತಿರುಳನ್ನು ಸಕ್ಕರೆ ಜೊತೆ ಸೇರಿಸಿ ಹಸುವಿನ ಹಾಲಿನ ಜೊತೆ ತೆಗೆದುಕೊಂಡರೆ ಪಿತ್ತ ಶಮನವಾಗುವುದು.