ಬಾಳೆ ಹಣ್ಣಿನ ಸಿಪ್ಪೆಯ ಆರೋಗ್ಯಕರ ಪ್ರಯೋಜನಗಳು!

ಬಾಳೆ ಹಣ್ಣಿನ ಸಿಪ್ಪೆಯೂ ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಅದರಿಂದ ಸಾಕಷ್ಟು ಉಪಯೋಗಗಳಿವೆ. ಬಾಳೆ ಹಣ್ಣಿನಂತೆ ಇದರ ಸಿಪ್ಪೆಯಲ್ಲೂ ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿದ್ದು, ನಾರಿನಂಶ, ಮೆಗ್ನೀಷಿಯಂ, ಪೊಟಾಷಿಯಂ ಅನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ಇಂತಹ ಹಲವು ಪ್ರಯೋಗಳು ನಿತ್ಯ ಬಾಳೆಹಣ್ಣಿನ ಸಿಪ್ಪೆಯಿಂದ ಪಡೆಬಹುದಾಗಿದೆ. ಇಂತಹ ಕೆಲವು ಪ್ರಯೋಜನಗಳ ಬಗ್ಗೆ ಮಾಹಿತಿ ನಿಮಗಾಗಿ ನೀಡಲಾಗಿದೆ.
#ನೀವು ದಿನಾ ಹಲ್ಲುಜ್ಜುತ್ತಿರಾ ಅಲ್ವಾ.. ಆದರೆ ಕೆಲವೊಮ್ಮೆ ಹಲ್ಲು ಹಳದಿ ಇರುತ್ತದೆ.ಇದಕ್ಕೆ ಸುಲಭವಾದ ಪರಿಹಾರವಿದೆ.ಬಾಳೆಹಣ್ಣಿನ ಸಿಪ್ಪೆಯನ್ನು ಹಲ್ಲಿನ ಮೇಲೆ ಉಜ್ಜಿ ಹೀಗೆ 2 ವಾರ ಮಾಡಿ.ಮತ್ತೊಮ್ಮೆ ನಿಮ್ಮ ಹಲ್ಲು ಹಳದಿಯಾಗದು.
#ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಮುಖದ ಮೇಲೆ ಅನ್ವಯಿಸುವುದರಿಂದ ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ತ್ವಚೆಯ ಮೇಲಿನ ಸೂಕ್ಷ್ಮವಾದ ರೇಖೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
#ಬಾಳೆಹಣ್ಣಿನ ಸಿಪ್ಪೆಯು ನಿಮ್ಮ ಮುಖದ ಮೇಲಿರುವ ಮೊಡವೆ ಮತ್ತು ಕಲೆಗಳನ್ನು ಹಂತ ಹಂತವಾಗಿ ತೊಡೆದು ಹಾಕುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ಉತ್ಪನ್ನಗಳನ್ನು ನೀವು ಬಳಸಿ ಸುಸ್ತಾಗಿದ್ದರೆ, ಬಾಳೆಹಣ್ಣಿನ ಸಿಪ್ಪೆಯನ್ನು ಒಮ್ಮೆ ಬಳಸಿ. ಇದರಿಂದ ಚರ್ಮದ ಮೇಲಿರುವ ಕಪ್ಪು ಕಲೆಯನ್ನು ಕೂಡ ಶಮನ ಮಾಡಿಕೊಳ್ಳಬಹುದು.
#ಸುಕ್ಕುಗಳು: ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಮೇಲೆ ಅದ್ಭುತಗಳನ್ನು ಮಾಡಬಹುದು. ಸಿಪ್ಪೆಯ ಒಳಭಾಗದಿಂದ ಮುಖವನ್ನು ಉಜ್ಜಿಕೊಳ್ಳಿ ಮತ್ತು ಮುಖವನ್ನು ಚೆನ್ನಾಗಿ ತೊಳೆಯುವ ಮೊದಲು ಅರ್ಧ ಘಂಟೆಯವರೆಗೆ ಕಾಯಿರಿ. ಸ್ವಲ್ಪ ಸಮಯದ ನಂತರ, ಹೆಚ್ಚು ಸುಕ್ಕು ನಿವಾರಣೆಯಾಗಿರುವುದನ್ನು ಗಮನಿಸಬಹುದು!
#ಬಾಳೆಹಣ್ಣಿನ ಸಿಪ್ಪೆಯು ನಿಮ್ಮ ದೇಹದಲ್ಲಿರುವ ಕೆಂಪು ರಕ್ತ ಕಣಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಹಸಿರು ಬಾಳೆಹಣ್ಣಿನ ಸಿಪ್ಪೆಗಳು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತವೆ.