ಅತಿಯಾಗಿ ಶುಂಠಿಯನ್ನು ಸೇವಿಸುವುದರ ಅಡ್ಡ ಪರಿಣಾಮಗಳು!

ಶುಂಠಿಯು ವಿವಿಧ ಪಾಕ ಪದ್ಧತಿಗಳಲ್ಲಿ ಬಳಸುವ ಜನಪ್ರಿಯ ಮಸಾಲೆಯಾಗಿದೆ. ಈ ಮೂಲ ತರಕಾರಿ ಪರಿಮಳ ಮತ್ತು ಅನೇಕ ಚಿಕಿತ್ಸಕ ಗುಣಗಳನ್ನು ಹೊಂದಿದೆ. ಅದಕ್ಕಾಗಿಯೇ ನೆಗಡಿ, ಕೆಮ್ಮು, ಜೀರ್ಣ ಸಮಸ್ಯೆಗಳು, ಹೊಟ್ಟೆ ನೋವು ಮತ್ತು ದೈಹಿಕ ನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳಂತಹ ಸಾಮಾನ್ಯ ಕಾಯಿಲೆಗಳನ್ನು ಗುಣಪಡಿಸಲು ಶುಂಠಿಯನ್ನು ಅನೇಕ ಮನೆಮದ್ದುಗಳಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಅನೇಕ ಜನರು ಹೆಚ್ಚು ಶುಂಠಿಯನ್ನು ಸೇವಿಸುತ್ತಾರೆ. ಇದು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತಹ ಸಮಸ್ಯೆಗಳ ಪಟ್ಟಿ ಇಲ್ಲಿದೆ ನೋಡಿ!
#ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ಶುಂಠಿ ಚಹಾವನ್ನು ಸೇವನೆ ಮಾಡಬಾರದು ಮತ್ತು ಶುಂಠಿಯೂ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆಮಾಡುವುದರಿಂದ ಮಧುಮೇಹಿಗಳು ಇದನ್ನು ಅಧಿಕ ಪ್ರಮಾಣದಲ್ಲಿ ಬಳಕೆ ಮಾಡಬಾರದು ಒಂದು ವೇಳೆ ನೀವು ಶುಂಠಿ ಚಹಾವನ್ನು ಸೇವನೆ ಮಾಡುತ್ತಿದ್ದರೆ ಮಿತಿಯಾಗಿ ಸೇವನೆ ಮಾಡಬೇಕು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ತೆಗೆದುಕೊಳ್ಳಬೇಕೆ ಹೊರತು ಅದನ್ನು ಅತಿಯಾಗಿ ತೆಗೆದುಕೊಳ್ಳಬಾರದು.
#ಹೆಚ್ಚು ಶುಂಠಿ ಸೇವಿಸಿದರೆ ಅದು ಆಮ್ಲೀಯತೆ ಉಂಟು ಮಾಡುತ್ತದೆ. ದೇಹದಲ್ಲಿ ಅಧಿಕ ಆಮ್ಲ ರೂಪುಗೊಳ್ಳಲು ಇದು ಕಾರಣವಾಗುತ್ತದೆ. ಆಮ್ಲೀಯತೆ, ನಂತರ ಅನೇಕ ಇತರೆ ರೋಗಗಳು ಉಂಟಾಗುತ್ತವೆ. ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ ಇರುವವರಿಗೆ ಹೆಚ್ಚು ಶುಂಠಿ ಸೇವನೆ ಮಾಡವುದು ಅಡ್ಡ ಪರಿಣಾಮ ಬೀರುತ್ತದೆ.
#ಮಧುಮೇಹ ಇರುವವರು ಅಗತ್ಯ ಪ್ರಮಾಣದ ಶುಂಠಿ ಸೇವನೆಯಿಂದ ರಕ್ತದೊತ್ತಡ ಪ್ರಮಾಣವನ್ನು ಕಡಿಮೆ ಮಾಡಬಹುದು . ದಿನವೊಂದಕ್ಕೆ ಮೂರು ಗ್ರಾಂ ನಷ್ಟು ಶುಂಠಿ ಸೇವನೆ ಇದಕ್ಕೆ ಸೂಕ್ತವಾಗಿದೆ .ಪ್ರತಿದಿನ ಮೂರು ಗ್ರಾಂ ಶುಂಠಿಯನ್ನು, ಮೂರು ತಿಂಗಳವರೆಗೆ ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುವುದು. ಆದರೆ ಯಾವುದನ್ನು ವೈದ್ಯರ ಸಲಹೆಯಿಲ್ಲದೆ ಪ್ರಯತ್ನಿಸಬೇಡಿ.
#ಹೃದಯದ ತೊಂದರೆಗಳು: ಹೃದಯದ ಮೇಲೆ ಶುಂಠಿಯ ಋಣಾತ್ಮಕ ಪರಿಣಾಮಗಳಲ್ಲಿ ಒಂದಾಗಿದೆ. ಶುಂಠಿಯು ಹೃದಯ ಬಡಿತ, ದೃಷ್ಟಿ ಮಂದವಾಗುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ನಿದ್ರಾಹೀನತೆಯನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. ಇದು ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಈ ಬೇರನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಹೆಚ್ಚು ಸೂಕ್ತ.
#ಅತಿಸಾರ ಸಮಸ್ಯೆ: ನಾವು ಶುಂಠಿಯನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ, ಅದು ನಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜನರು ದಿನವಿಡೀ ಹಲವಾರು ಬಾರಿ ಶುಂಠಿ ಚಹಾವನ್ನು ಸೇವಿಸಿದರೆ ಅತಿಸಾರದ ಸಮಸ್ಯೆ ಕಾಣಿಸಿಕೊಳ್ಳಬಹುದು.