ಸೌತೆಕಾಯಿ ಜ್ಯೂಸ್ ಸೇವನೆಯ ಆರೋಗ್ಯಕರ ಪ್ರಯೋಜನಗಳು!

ಸೌತೆಕಾಯಿಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಾವೆಲ್ಲರೂ ಅರಿತೇ ಇದ್ದೇವೆ. ಶರೀರಕ್ಕೆ ಹೊರಗಿನಿಂದಲೂ ಒಳಗಿನಿಂದಲೂ ನೀಡುವ ಪೋಷಣೆ ಅಪಾರವಾಗಿದೆ. ಬಹುತೇಕ ನೀರೇ ತುಂಬಿರುವ ಸೌತೆಯಲ್ಲಿ ವಿಟಮಿನ್ನುಗಳಾದ ವಿಟಮಿನ್ ಕೆ, ಸಿ ಮತ್ತು ಎ ಸಹಾ ಇದೆ. ಇದರ ಜೊತೆ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಸಹಾ ಇವೆ. ಹಸಿಯಾಗಿಯೂ ತಿನ್ನಬಹುದಾದ ಸೌತೆಯನ್ನು ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ಇದರಲ್ಲಿರುವ ಕರಗುವ ನಾರಿನ ಪ್ರಯೋಜನವನ್ನು ಗರಿಷ್ಟ ಪ್ರಮಾಣದಲ್ಲಿ ಪಡೆಯಬಹುದು. ಅಲ್ಲದೇ ಜ್ಯೂಸ್ ಮೂಲಕ ಸೇವಿಸಿದ ಸೌತೆಯಿಂದ ಪೋಷಕಾಂಶಗಳೂ ಪರಿಪೂರ್ಣವಾಗಿ ಲಭಿಸುತ್ತವೆ ಹಾಗೂ ಜೀರ್ಣಾಂಗದ ಎಲ್ಲಾ ಹಂತಗಳಲ್ಲಿ ಹೀರಲ್ಪಡುತ್ತವೆ. ಈಗ ಸೌತೆ ಕಾಯಿ ಜ್ಯೂಸನ್ನ ಇನ್ನಷ್ಟು ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
#ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ:ಸೌತೆಯಲ್ಲಿರುವ ಅಪಾರ ಪ್ರಮಾಣದ ನೀರಿನಂಶವೇ ಇದನ್ನೊಂದು ಕಲ್ಮಶ ನಿವಾರಕ ಆಹಾರವಾಗಿಸಲು ಪ್ರಮುಖ ಕಾರಣವಾಗಿದೆ. ಒಂದು ವೇಳೆ ನಿಮಗೆ ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ನೀವು ಸೌತೆಕಾಯಿಯ ಜ್ಯೂಸ್ ಸೇವಿಸುವುದು ಅನಿವಾರ್ಯ. ನಿಯಮಿತವಾಗಿ ಸೌತೆಕಾಯಿಯ ಜ್ಯೂಸ್ ಸೇವಿಸುತ್ತಾ ಬರುವ ಮೂಲಕ ದೇಹದಿಂದ ಕಲ್ಮಶಗಳ ನಿವಾರಣೆಯಾಗುವುದು ಮಾತ್ರವಲ್ಲ, ಆರೋಗ್ಯವೂ ವೃದ್ದಿಸುತ್ತದೆ.
- ಸೌತೆಕಾಯಿ ಜ್ಯೂಸ್ ಮಾಡುವ ವಿಧಾನ:
ಬೇಕಾಗುವ ಸಾಮಗ್ರಿ- ಮುಳ್ಳುಸೌತೆಕಾಯಿ, ಚಿಟಿಕೆಯಷ್ಟು ಉಪ್ಪು, ನೀರುಮಾಡುವ ವಿಧಾನ- ಮುಳ್ಳು ಸೌತೆಕಾಯಿಯ ಬೀಜ, ಸಿಪ್ಪೆ ಬೇರ್ಪಡಿಸಿ ತುರಿಯಿರಿ. ಇದನ್ನು ಮಿಕ್ಸಿಯಲ್ಲಿ ಹಾಕಿ ತಿರುಗಿಸಿ. ರಸ ಬೇರ್ಪಿಸಿ. ಚಿಟಿಕೆಯಷ್ಟು ಉಪ್ಪು ಸೇರಿಸಿ. ಉಪ್ಪು ಇಷ್ಟವಿಲ್ಲದವರು ಕೊಂಚ ಸಕ್ಕರೆಯನ್ನೂ ಸೇರಿಸಬಹುದು. ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ಕುಡಿದರೆ ತಾಜಾ ಅನುಭೂತಿ. ಬೇಸಗೆಗೆ ಉತ್ತಮ.
#ತೂಕ ನಷ್ಟ ಮಾಡಿಕೊಳ್ಳಲು ಸೌತೆಕಾಯಿ ಜ್ಯೂಸ್ ತುಂಬಾ ಸಹಕಾರಿ. ಸೌತೆಕಾಯಿ, ಪಾಲಕ ಎಲೆ, ಶುಂಠಿಯನ್ನು ಸಣ್ಣದಾಗಿ ಹೆಚ್ಚಿ, ಬ್ಲೆಂಡರ್‌ನಲ್ಲಿ ಹಾಕಿ ಮಿಶ್ರಣ ಮಾಡಿ. ನಂತರ ನಿಂಬೆ ರಸ, ಕಲ್ಲುಪ್ಪು ಸೇರಿಸಿ ಸೇವಿಸಿರಿ.
#ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ, ಮೆಗ್ನೀಸಿಯಂ, ಪೊಟ್ಯಾಸಿಯಂ ಮತ್ತು ಸತುವಿನ ಅಂಶಗಳಿವೆ. ಇದನ್ನು ಇಲ್ಲವೇ ಇದರ ಜ್ಯೂಸ್ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ.