ಜೀರಿಗೆ ನೀರಿನ ಅದ್ಭುತ ಆರೋಗ್ಯ ಲಾಭಗಳು:

ಜೀರಿಗೆ ಅನ್ನೋದು ಬರಿ ಅಡುಗೆಗೆ ಮಾತ್ರ ಸೀಮಿತವಾಗಿಲ್ಲ ಮನುಷ್ಯನ ಆರೋಗ್ಯವನ್ನು ವೃದ್ಧಿಸುವಲ್ಲಿ ತುಂಬಾನೇ ಸಹಕಾರಿಯಾಗಿದೆ… ಜೀರಿಗೆ ನೀರಿನಿಂದ ಸಿಗುವಂತ ಆರೋಗ್ಯಕಾರಿ ಲಾಭಗಳನ್ನು ನಾವು ನಿಮಗೆ ತಿಳಿಸುತ್ತ ಹೋಗುತ್ತೇವೆ ನೋಡಿ.
#ಆಸ್ತಮಾ ಮತ್ತು ಶೀತವನ್ನು ನಿವಾರಿಸುತ್ತದೆ:ಜೀರಿಗೆಯ ಆಂಟಿಬ್ಯಾಕ್ಟೀರಿಯಾ ಮತ್ತು ಆಂಟಿಇಂಫ್ಲಾಮೇಟರಿ ಗುಣಲಕ್ಷಣಗಳ ಕಾರಣ, ಜೀರಿಗೆ ಬೀಜಗಳು ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ಅದ್ಭುತ ಮನೆಮದ್ದಾಗಿದೆ. ಇದು ಕೆಮ್ಮು, ಜ್ವರ, ಶೀತವನ್ನು ಬೇಗನೇ ಕಡಿಮೆ ಮಾಡುತ್ತದೆ.
#ಜೀರಿಗೆ ನೀರು ನಿಮ್ಮ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜೀರ್ಣಕ್ರಿಯೆಯನ್ನು ಸುಧಾರಿಸಲೂ ಜೀರಿಗೆ ನೀರು ಸಹಾಯ ಮಾಡುತ್ತದೆ. ಚಯಾಪಚಯವನ್ನು ಸುಧಾರಿಸುವುದರ ಜತೆಗೆ ಕಾರ್ಬೋಹೈಡ್ರೇಟ್‌ಗಳು, ಗ್ಲೂಕೋಸ್ ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡಲಿದೆ. ಇದು ಪಿತ್ತಜನಕಾಂಗದಲ್ಲಿ ಪಿತ್ತರಸ ಆಮ್ಲದ ಉತ್ಪಾದನೆ ಪ್ರಕ್ರಿಯೆಯನ್ನುಬಲ ಪಡಿಸುತ್ತದೆ. ಕರುಳಿನ ಆರೋಗ್ಯ ಜತೆಗೆ ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
#ದೇಹದ ಬೊಜ್ಜು ಇಳಿಸಲು ಜೀರಿಗೆ ಹಾಗೂ ನಿಂಬೆ ನೀರು ಸೇವನೆ ಮತ್ತೊಂದು ಸುಲಭ ವಿಧಾನವಾಗಿದೆ. ಎರಡು ಟೇಬಲ್ ಚಮಚದಷ್ಟು ಜೀರಿಗೆ ಕಾಳುಗಳನ್ನು ರಾತ್ರಿ ನೀರಿಗೆ ಬೆರೆಸಿ ಇಡಬೇಕು. ಬೆಳಗ್ಗೆ ಈ ನೀರನ್ನು ಕುದಿಸಿ ಇದಕ್ಕೆ ಒಂದು ನಿಂಬೆ ಹಣ್ಣಿನ ರಸ ಸೇರಿಸಬೇಕು. ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನಿಂಬೆ ಹಾಗೂ ಜೀರಿಗೆ ನೀರು ಸೇವಿಸುತ್ತಿದ್ದರೆ ಅತಿ ಶೀಘ್ರ ಆರೋಗ್ಯಕರ ಪರಿಣಾಮಗಳನ್ನು ನೀವು ಕಾಣಬಹುದು.
#ಜೀರಿಗೆ ನೀರು ನಿಮ್ಮ ಉಸಿರಾಟದ ಕ್ರೀಯೆಯನ್ನು ವ್ಯವಸ್ಥಿತವಾಗಿಡಲು ಸಹಾಯಕಾರಿ. ಇದರಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಲಕ್ಷಣಗಳಿದ್ದು, ಎದೆಯಲ್ಲಿ ಹೆಪ್ಪುಗಟ್ಟುವ ಕಫವನ್ನು ಕೂಡ ತಡೆಗಟ್ಟುತ್ತದೆ.
#ಜೀರಿಗೆ ನೀರು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಕಾರ್ಬೋಹೈಡ್ರೇಟ್‌ಗಳು, ಗ್ಲುಕೋಸ್ ಮತ್ತು ಕೊಬ್ಬನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಪಿತ್ತಜನಕಾಂಗದಲ್ಲಿ ಪಿತ್ತರಸ ಆಮ್ಲಗಳ ಉತ್ಪಾದನೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಅಜೀರ್ಣವನ್ನು ತಡೆಗಟ್ಟಲು ಸಹಾಯಕವಾಗಿದೆ.