ಇಲಾಚಿ ಹಣ್ಣಿನ ಈ ಪ್ರಯೋಜನಗಳು ತಿಳಿದಿದೆಯೇ?

ಹಲವಾರು ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಅಂತಹ ಹಣ್ಣುಗಳನ್ನು ಬರೀ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಇನ್ನು ಕೆಲವು ಹಣ್ಣುಗಳು ಕಾಡುಗಳಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತದೆ. ಆದರೆ ಇಂತಹ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇಲಾಚಿ ಹಣ್ಣಿನ ನ್ಯೂಟ್ರಿಷನ್ ಬಗ್ಗೆ ಹೇಳುವುದಾದರೆ ಇದರಲ್ಲಿ ಪ್ರೋಟೀನ್, ಫ್ಯಾಟ್, ಕಾರ್ಬೋ, ಫೈಬರ್ ಹಾಗೂ ಕ್ಯಾಲ್ಸಿಯಂ, ಐರನ್, ಸೋಡಿಯಂ, ಪೊಟ್ಯಾಶಿಯಂ, ವಿಟಮಿನ್ ಎ, ವಿಟಮಿನ್ ಸಿ ಅನ್ನು ಒಳಗೊಂಡಿದೆ. ಈಗ ಈ ಇಲಾಚಿ ಹಣ್ಣಿನ ಪ್ರಯೋಜನಗಳು ಯಾವುವು ಎಂದೂ ತಿಳಿಯೋಣ!

#ಇದನ್ನು ಸಾಂಪ್ರದಾಯಿಕ ಔಷಧೀಯ ಪದ್ದತಿಗಳಲ್ಲಿ ಅನೇಕ ಕಡೆ ವಿವಿಧ ಉಪಯೋಗಳಿಗಾಗಿ ಬಳಕೆಯಾಗುತ್ತಿದೆ. ಭಾರತದಲ್ಲಿ ಇದರ ತೊಗಟೆ ಕಷಾಯವನ್ನು ಜ್ವರಹಾರಿಯಾಗಿಯೂ ಹಾಗೂ ಉರಿಯೂತವನ್ನು ಕಡಿಮೆಮಾಡಲೂ ಬಳಸಲಾಗುತ್ತದೆ.

#ಇಲಾಚಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿ(Immunity Booster)ಯನ್ನು ಹೆಚ್ಚಿಸುತ್ತದೆ. ಇದನ್ನು ಪ್ರಚಂಡ ರೋಗನಿರೋಧಕ ವರ್ಧಕ ಎಂದೂ ಕರೆಯುತ್ತಾರೆ. ಈ ಕೊರೋನಾ ಯುಗದಲ್ಲಿ ನಮಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಾಯಕವಾಗಿದೆ.

#ಈ ಹಣ್ಣಿನಲ್ಲಿ ವಿಟಮಿನ್ ಬಿ ಹೆಚ್ಚಾಗಿರುವ ಕಾರಣ ಇದು ನಿಮ್ಮ ದೇಹದಲ್ಲಿ ಇರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಯಾವುದೇ ರೀತಿಯ ಸೋಂಕು ಅಥವಾ ರೋಗಗಳು ಬಾರದಂತೆ ತಡೆಯಲು ಸಹಾಯ ಮಾಡುತ್ತದೆ.

#ಕಣ್ಣುಗಳಿಗೆ ಪ್ರಯೋಜನಕಾರಿ:ಇಲಾಚಿ​ ಹಣ್ಣು ಚರ್ಮದ ಕಾಯಿಲೆ ಮತ್ತು ಕಣ್ಣಿ(Eye)ನ ಸಮಸ್ಯೆಗಳಿಗೆ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಈ ಮರದ ಎಲೆಗಳ ರಸವು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

#ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ:ಕಾಡು ಜಿಲೇಬಿ ಹಣ್ಣು ಸೇವನೆ ರಕ್ತದ ಕೆಟ್ಟ LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೂ ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಪೊಟ್ಯಾಸಿಯಮ್ ಹೃದಯದ ಆರೋಗ್ಯ ಕಾಪಾಡಲು ಕೆಲಸ ಮಾಡುತ್ತದೆ. ಕಾಡು ಜಿಲೇಬಿ ಹಣ್ಣು ಹೃದ್ರೋಗಿಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಿವೆ ಅಧ್ಯಯನಗಳು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group