ಕಫ ಹೋಗಲಾಡಿಸಲು ಆರೋಗ್ಯಕರವಾದ ಮನೆಮದ್ದು!

ಕಷಾಯ ಕಾಯಿಲೆ ಬೀಳದಂತೆ ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ. ಶೀತ, ಕೆಮ್ಮು, ಜ್ವರ ಈ ರೀತಿಯ ಕಾಯಿಲೆಗಳನ್ನು ಗುಣ ಪಡಿಸುವ ಶಕ್ತಿ ಕಷಾಯಕ್ಕೆ ಇದೆ.ಅನೇಕ ರೀತಿಯಲ್ಲಿ ಕಷಾಯ, ಮಾಡಬಹುದು. ಇಲ್ಲಿ ನಾವು ಕಫ ಹೋಗಲಾಡಿಸಲು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವಂತಹ ಪದಾರ್ಥಗಳನ್ನು ಬಳಸಿ ಮಾಡುವ ಆರೋಗ್ಯಕರವಾದ ಮನೆಮದ್ದುಗಳನ್ನು ನೀಡಿದ್ದೇವೆ ನೋಡಿ:
#ಹೆಚ್ಚು ಕಫದ ಸಮಸ್ಯೆ ಕಾಡುತ್ತಿದ್ದರೆ ನಿಂಬೆ ಹಣ್ಣಿನ ರಸಕ್ಕೆ ಕಪ್ಪು ಉಪ್ಪು ಅಥವಾ ಸೈಂಧವ ಉಪ್ಪು ಸೇರಿಸಿ ಅದರೊಂದಿಗೆ ಕರಿಮೆಣಸಿನ ಪುಡಿ ಮಿಶ್ರಣ ಮಾಡಿ ಆ ರಸವನ್ನು ಸೇವಿಸಿದ್ರೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.
#ನಿಮ್ಮ ಗಂಟಲಿನಲ್ಲಿ ಕಫ ಹೆಚ್ಚಾಗಿರುವಾಗ ನೀವು ಹಸಿ ಕ್ಯಾರೆಟ್ ಜ್ಯೂಸ್ ಮಾಡಿ ಅದಕ್ಕೆ ಜೇನುತುಪ್ಪ ಮಿಶ್ರಣ ಮಾಡಿಕೊಂಡು ಸೇವನೆ ಮಾಡುವುದರಿಂದ ಕಫದ ಸಮಸ್ಯೆ ದೂರವಾಗುತ್ತದೆ.
#ನಮ್ಮ ಮನೆಯಂಗಳಲ್ಲಿ ಸಾಂಬ್ರಾಣಿ ಸೊಪ್ಪು ಮತ್ತು ತುಳಸಿ ಗಿಡ ನೆಟ್ಟರೆ ಸಾಕಷ್ಟಾಯಿತು. ಸಾಂಬ್ರಾಣಿ ಸೊಪ್ಪಿನ ಹೊಗೆ ಮಕ್ಕಳಿಗೆ ನೀಡುವುದೂ ಶೀತವಾಗಬಾರದೆಂಬ ಕಾರಣಕ್ಕೆ. ಇದೇ ಸಾಂಬ್ರಾಣಿ ಸೊಪ್ಪನ್ನು ಬಾಡಿಸಿ, ಅದರ ರಸ ತೆಗೆದು, ಸ್ವಲ್ಪ ಜೇನು ತುಪ್ಪ ಸೇರಸಿ ಕುಡಿಯುವುದರಿಂದ ಚಿಕ್ಕ ಮಕ್ಕಳಲ್ಲಿ ಕಫ ನಿವಾರಣೆಯಾಗುತ್ತದೆ.
#ಹಸಿ ಶುಂಠಿಯನ್ನು ಕುದಿಸಿ ಅದಕ್ಕೆ ಚಕ್ಕೆ ಸೇರಿಸಿ ಕಷಾಯ ಮಾಡಿ ದಿನಕ್ಕೆ 2-3 ಬಾರಿ ಕುಡಿಯುವುದರಿಂದ ಸಹ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.
#ಕರಿಮೆಣಸಿನ ಪುಡಿಗೆ ಜೇನುತುಪ್ಪ ಸೇರಿಸಿ ದಿನಕ್ಕೆ 4 ರಿಂದ 5 ಬಾರಿ ಸ್ವಲ್ಪ ಸ್ವಲ್ಪ ಸೇವಿಸಿದರೆ ಗಂಟಲ ಕಫ ಕರಗುತ್ತದೆ.
#ಉಪ್ಪು ನೀರು:ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರೆಸಿ ಅದರಿಂದ ಗಂಟಲನ್ನು ಗುಳು ಗುಳು (ಬಾಯಿ ಮುಖಳಿಸುವುದು)ಮಾಡಿದರೆ ಗಂಟಲು ನೋವು ಕಡಿಮೆಯಾಗುವುದರೊಂದಿಗೆ ಕಟ್ಟಿದ ಕಫವನ್ನು ಹೊರಹಾಕಲು ಸಹಕಾರಿ.
ಗಮನಿಸಿ :ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.