ಮೊಸರು ಸೇವನೆಯ ಅದ್ಭುತ ಪ್ರಯೋಜನಗಳು!

ಮಳೆ ಇರಲಿ, ಚಳಿ ಇರಲಿ ಕೆಲವರಿಗಂತೂ ಊಟಕ್ಕೆ ಸದಾ ಕಾಲ ಮಜ್ಜಿಗೆ ಅಥವಾ ಮೊಸರು ಇರಲೇಬೇಕು. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡಾ ಮೊಸರು ಸಾಮಾನ್ಯ ಆಹಾರವಾಗಿದೆ. ಮೊಸರು ಸೇವಿಸುವುದರಿಂದ ವೈಜ್ಞಾನಿಕವಾಗಿ ಮಾತ್ರವಲ್ಲದೆ ವೈದ್ಯಕೀಯವಾಗಿಯೂ ಅನೇಕ ಪ್ರಯೋಜನಗಳಿವೆ. ಅಂತಹ ಪ್ರಯೋಜನಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.

#ಮೊಸರು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಇನ್ನು ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಮೊಸರು ನಮ್ಮನ್ನು ರಕ್ಷಿಸುತ್ತದೆ.

#ಜೀರ್ಣಕ್ರಿಯೆಗೆ ಸಹಕರಿಸುತ್ತದೆ: ಮೊಸರು ಈ ಮೊದಲೇ ಅರ್ಧಕ್ಕಿಂತ ಹೆಚ್ಚು ಜೀರ್ಣವಾಗಿರುವುದರಿಂದ ಜಠರದಲ್ಲಿಯೇ ಸಂಪೂರ್ಣವಾಗಿ ಜೀರ್ಣಗೊಳ್ಳುತ್ತದೆ. ಇದರಿಂದ ಜಠರರಸ ಮತ್ತು ಕರುಳಿನ ರಸಗಳು ಇತರ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮರ್ಥವಾಗುತ್ತವೆ. ಇದರಿಂದಾಗಿ ಒಟ್ಟಾರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಭಾರತೀಯ ಅಡುಗೆಗಳಲ್ಲಿ ಸಾಂಬಾರ ಪದಾರ್ಥಗಳ ಉಪಯೋಗ ಹೆಚ್ಚಿರುವುದರಿಂದ ಹಾಗೂ ಈ ಸಾಂಬಾರ ಪದಾರ್ಥಗಳು ಸುಲಭವಾಗಿ ಜೀರ್ಣವಾಗದುದರಿಂದ ಜೊತೆಯಲ್ಲಿ ಮೊಸರು ಸೇವಿಸುವುದು ಅವಶ್ಯವಾಗಿದೆ. ಒಣಮೆಣಸು ಹಾಕಿ ಮಾಡಿದ ಸಾರು, ಮೀನು ಸಾರು, ಕರಿದ ಮೀನು ಮೊದಲಾದವುಗಳನ್ನು ಸೇವಿಸಿದ ಬಳಿಕ ಮೊಸರು ಸೇವಿಸದೇ ಇದ್ದರೆ ಮರುದಿನ ಮಲವಿಸರ್ಜನೆಯ ಸಮಯದಲ್ಲಿ ಉರಿಯುಂಟಾಗುವುದು ಇದೇ ಕಾರಣದಿಂದ. ಬದಲಿಗೆ ಊಟದ ಬಳಿಕ ಮೊಸರನ್ನು ಸೇವಿಸಿದರೆ ಉರಿ ಉಂಟಾಗುವುದಿಲ್ಲ.

#ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ:ಮೊಸರಿನಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಅಂಶವಿದೆ ಮತ್ತು ಮೂಳೆಗಳು ಆರೋಗ್ಯವಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯ. ಇದು ಮೂಳೆಗಳ ಬೆಳವಣಿಗೆಗೂ ಕಾರಣವಾಗುತ್ತದೆ. ಹಲ್ಲು, ಉಗುರುಗಳು, ಸ್ನಾಯುಗಳನ್ನು ಆರೋಗ್ಯವಾಗಿರಿಸುತ್ತದೆ. ನೀವು ನಿಯಮಿತವಾಗಿ ಮೊಸರು ಸೇವಿಸುವುದರಿಂದ ಕೀಲು ನೋವಿನಿಂದ ದೂರವಿರಬಹುದು.

#ಉರಿಯೂತದಿಂದ ಬಳಲುತ್ತಿರುವ ಜೀರ್ಣಾಂಗ ವ್ಯವಸ್ಥೆಯನ್ನು ಶಮನಗೊಳಿಸುತ್ತದೆ ಮತ್ತು ಕೆಟ್ಟಿರುವ ಹೊಟ್ಟೆಗೆ ಚಿಕಿತ್ಸೆ ನೀಡುವ ವೈದ್ಯನಂತೆ ಕೆಲಸ ಮಾಡುತ್ತದೆ.

#ಮೃದುತ್ವ ತ್ವಚೆಗಾಗಿ ಗಟ್ಟಿ ಮೊಸರು:ಮೊಸರು ಸೇವನೆಯಿಂದ ತ್ವಚೆಯ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ದಿನನಿತ್ಯ ಮೊಸರು(Curd) ಸೇವನೆಯಿಂದ ಒಣ ಚರ್ಮವು (Dry Skin) ಮೃದತ್ವವನ್ನು ಪಡೆದುಕೊಳ್ಳುತ್ತದೆ. ಜಠರದ ಸಮಸ್ಯೆಗಳಿಂದಾಗಿ ಬಹಳಷ್ಟು ಜನರು ಮೊಡವೆಗಳಿಂದ ಬಳಲುತ್ತಿದ್ದಾರೆ. ಅಂತವರು ಮೊಸರನ್ನು ಬಳಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಮೊಸರು ಕರುಳಿನ ಆರೋಗ್ಯವನ್ನು ಕಾಪಡುತ್ತದೆ. ಅದಲ್ಲದೆ ಮೊಸರು ಆರೋಗ್ಯಕರ ಚರ್ಮಕ್ಕೆ ಕಾರಣವಾಗಿದ್ದು, ಫೇಸ್ ಪ್ಯಾಕ್’ಗಳಿಗೆ (Face pack) ಅತ್ಯುತ್ತಮವಾದ ಸೌಂದರ್ಯವರ್ಧಕ ಅಂಶವಾಗಿದೆ. ಏಕೆಂದರೆ ಇದು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು ಅದು ಎಕ್ಸ್ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಕಲೆಗಳನ್ನು ಗುಣಪಡಿಸುತ್ತದೆ.

#ತಲೆಹೊಟ್ಟು ( dandruff ) ಕೂದಲು ಉದುರುವಿಕೆಗೆ ಕಾರಣವಾಗಿದೆ. ಹುಳಿ ಮೊಸರನ್ನು ನೆತ್ತಿ ಮತ್ತು ಕೂದಲಿಗೆ ಹೇರ್ ಪ್ಯಾಕ್ (hair Pack )ಆಗಿ ವಾರಕ್ಕೊಮ್ಮೆ ಹಾಕಿಕೊಳ್ಳುವುದರಿಂದ ತಲೆಹೊಟ್ಟು ಉಂಟಾಗುವುದನ್ನು ತಡೆಯುತ್ತದೆ. ಇದರ ಔಷಧೀಯ ತತ್ವಗಳನ್ನು ಹೆಚ್ಚಿಸಲು ನೀವು ನೆನೆಸಿದ ಮೆಂತ್ಯ ಬೀಜಗಳ ಪೇಸ್ಟ್ ಅಥವಾ ಬೇವಿನ ಎಲೆಯ (Neem ) ರಸವನ್ನು ಬೆರೆಸಬಹುದು. ಈ ಹೇರ್ ಪ್ಯಾಕ್ ನೆತ್ತಿಯನ್ನು ಪೋಷಿಸುವುದಲ್ಲದೆ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group