ಸಾಮಾನ್ಯ ಶೀತಕ್ಕೆ ಈ ಮನೆಮದ್ದು!

ಸಾಮಾನ್ಯ ಕೆಮ್ಮು ಮತ್ತು ಶೀತಕ್ಕೂ ತೆಗೆದುಕೊಳ್ಳುವ ಸುಲಭವಾಗಿ ಲಭ್ಯವಿರುವ ಮಾತ್ರೆಗಳೂ ಕೆಲವೊಮ್ಮೆ ವಿಪರೀತವಾದ ಪರಿಣಾಮವನ್ನು ಬೀರಬಹುದು. ಈ ಸಮಯದಲ್ಲಿ ನೈಸರ್ಗಿಕ ಚಿಕಿತ್ಸೆಯೇ ಉತ್ತಮವಾಗಿದ್ದು ಈ ಮನೆಮದ್ದುಗಳನ್ನು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಅನುಸರಿಸುತ್ತಾ ಬಂದಿದ್ದಾರೆ. ಆಯುರ್ವೇದ ಈ ಚಿಕ್ಕ ಪುಟ್ಟ ಕಾಯಿಲೆಗಳಿಗೆ ಹಲವಾರು ಚಿಕಿತ್ಸೆಗಳನ್ನು ಸೂಚಿಸಿದ್ದು ಇವು ಅದ್ಭುತ ಎನ್ನುವಂತಹ ಪರಿಣಾಮವನ್ನು ನೀಡುತ್ತಾ ಬಂದಿವೆ. ಬನ್ನಿ, ಶೀತ ಮತ್ತು ಕೆಮ್ಮು ಮೊದಲಾದ ಸಾಮಾನ್ಯ ತೊಂದರೆಗಳಿಗೆ ಆಯುರ್ವೇದ ಸೂಚಿಸುವ ಪ್ರಮುಖವಾದ ಕೆಲವು ಮನೆಮದ್ದುಗಳನ್ನು ನೋಡೋಣ
#ಮೂಗಿನಲ್ಲಿ ಶೀತ ಹರಿಯುತ್ತಿದ್ದರೆ ಹಸುವಿನ ತುಪ್ಪವನ್ನು ಮೂಗಿನ ಹೊಳ್ಳೆಗೆ ಹಚ್ಚಿ ಅಥವಾ ಬೇಬಿ ಪೌಡರ್/ಕುಂಕುಮವನ್ನು ಬಿಸಿ ಮಾಡಿ ನೆತ್ತಿಗೆ ಹಾಕಿ.ಮೂಗು ಕಟ್ಟಿ, ಮಗು ನಿದ್ದೆ ಮಾಡಲು ತೊಂದರೆ ಪಡುತ್ತಿದೆ ಎಂದಾದರೆ ಮೂಗಿನ ಬಳಿ ಕರ್ಪೂರವನ್ನು ಹಿಡಿದು, ಮೂಸಲು ಬಿಡಿ. ಇದರಿಂದ ಕಟ್ಟಿದ ಮೂಗು ತೆರೆಯುವುದು.
#ಸ್ಟೌ ಮೇಲೆ ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇಟ್ಟು ನೀರಿನಿಂದ ಬರುವ ಆವಿಯನ್ನು ಮೂಗು ಮತ್ತು ಬಾಯಿಯ ಮೂಲಕ ಒಳಗೆ ತೆಗೆದುಕೊಳ್ಳುವುದರಿಂದ ಮೂಗು ಕಟ್ಟುವಿಕೆ ಮತ್ತು ಎದೆ ಕಟ್ಟುವಿಕೆ ಸಮಸ್ಯೆ ದೂರವಾಗುತ್ತದೆ.ಬೇಕೆಂದರೆ ಈ ಸಮಯದಲ್ಲಿ ನೀವು ನೀರಿಗೆ ಒಂದೆರಡು ಹನಿಗಳಷ್ಟು ನೀಲಗಿರಿ ತೈಲವನ್ನು ಹಾಕಿ ಮಿಶ್ರಣ ಮಾಡಬಹುದು. ತಜ್ಞರ ಪ್ರಕಾರ ನಾಲ್ಕರಿಂದ ಏಳು ನೀಲಗಿರಿ ಹನಿಗಳು ನಿಮ್ಮ ಆರೋಗ್ಯಕ್ಕೆ ಸುರಕ್ಷಿತ
#ಅರಿಶಿನ ಬೆರೆಸಿದ ಹಾಲು:ಇದು ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಭಾರತದ ನೆಚ್ಚಿನ ಮನೆಮದ್ದಾಗಿದ್ದು ಶೀತ ಮತ್ತು ನೆಗಡಿ ಎಂದಾಕ್ಷಣ ಮೊದಲಾಗಿ ಮಾಡಿ ಕೊಡಲಾಗುತ್ತದೆ. ಅರಿಶಿನದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಮತ್ತು ಇದರಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ಬಿಸಿಹಾಲಿನೊಂದಿಗೆ ಕುಡಿಯುವ ಮೂಲಕ ಶೀತದ ವಿರುದ್ಧ ರಕ್ಷಣೆ ಒದಗಿಸಿ ಶೀಘ್ರ ಚೇತರಿಕೆಗೆ ನೆರವಾಗುತ್ತದೆ.
#ಅಮೃತಬಳ್ಳಿ ಕಷಾಯವು ಸಾಂಕ್ರಾಮಿಕ ಕಾಯಿಲೆಗಳಿಂದ ಜ್ವರ ಮತ್ತು ಶೀತಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಅಮೃತಬಳ್ಳಿ ಕಷಾಯ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ.