ಕಬ್ಬಿನ ಹಾಲು ಸೇವನೆಯ ಆರೋಗ್ಯಕಾರಿ ಪ್ರಯೋಜನಗಳು!

ಮೊದಲಿಗೆ ಕಬ್ಬಿನ ಹಾಲು ಸೇರಿಸುವ ಸರಿಯಾದ ವಿಧಾನ ಬಗ್ಗೆ ತಿಳಿಯೋಣ ಒಬ್ಬ ಆರೋಗ್ಯವಂತ ವ್ಯಕ್ತಿ ದಿನದಲ್ಲಿ ಎರಡು ಗ್ಲಾಸ್ ಗಿಂತ ಹೆಚ್ಚಾಗಿ ಕಬ್ಬಿನ ಹಾಲನ್ನು ಸೇವಿಸಬಾರದು ಹಾಗೆ ರಾತ್ರಿ ಸಮಯದಲ್ಲಿ ಸೇವನೆ ಮಾಡಬಾರದು ಇನ್ನು ಊಟಕ್ಕೆ ಮೊದಲು ಕಬ್ಬಿನ ಹಾಲು ಕುಡಿದರೆ ಅದರಿಂದ ಹಸಿವು ಹೆಚ್ಚಾಗುತ್ತದೆ ಹಾಗೆ ಊಟದ ನಂತರ ಇದರ ಸೇವನೆ ಮಾಡಿದರೆ ಜೀವನ ಶಕ್ತಿ ಹೆಚ್ಚಾಗುತ್ತದೆ ಇನ್ನು 15, 20 ನಿಮಿಷ ಬಿಟ್ಟು ಇದನ್ನು ಕುಡಿಯಬೇಡಿ ಇದರಿಂದ ಯಾವುದೇ ಲಾಭ ಸಿಗುವುದಿಲ್ಲ ಇನ್ನು ಕಬ್ಬಿನ ಹಾಲಿನ ಸೇವನೆ ಯಾವೆಲ್ಲ ಸಮಸ್ಯೆಗಳಿಗೆ ಉತ್ತಮ ಎಂದು ನೋಡೋಣ.
#ಮಲಬದ್ಧತೆಯಲ್ಲಿ:ಕಬ್ಬಿನ ರಸವು ವಿರೇಚಕ ಗುಣಗಳನ್ನು ಹೊಂದಿದೆ . ಇದು ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
#ಕಬ್ಬಿನ ಹಾಲಿನಲ್ಲಿ ನಾರಿನಂಶ ಮತ್ತು ನೈಸರ್ಗಿಕ ಸಕ್ಕರೆ ಇದ್ದು ಇದು ಕೃತಕ ಸಿಹಿಕಾರಕಗಳು ಮತ್ತು ಕೊಬ್ಬಿನ ಆಹಾರ ಪದಾರ್ಥಗಳಿಂದ ದೂರವಿರಲು ಸಹಾಯ ಮಾಡುತ್ತದೆ
#ಇದಲ್ಲದೆ ಕಬ್ಬಿನ ಹಾಲಿನ ಸೇವನೆಯು ಯಕೃತ್ತಿನ ಆರೋಗ್ಯವನ್ನು ವೃದ್ಧಿಸಿ ಡಿಟೊಕ್ಸಿಫಿಕೇಷನ್ ಪ್ರೋಸೆಸ್ ಅನ್ನು ಹೆಚ್ಚು ಮಾಡುತ್ತದೆ. ಅದಲ್ಲದೆ ಕ್ಯಾನ್ಸರ್, ಹೃದ್ರೋಗ, ಮಧುಮೇಹದಂತಹ ಹತ್ತು ಹಲವು ಖಾಯಿಲೆಗಳು ಬಾರದಂತೆ ತಡೆಗಟ್ಟುತ್ತದೆ.
#ಪಿತ್ತಜನಕಾಂಗದ ಆರೋಗ್ಯಕ್ಕೆ ಕಬ್ಬಿನ ಹಾಲು :ನಿಮ್ಮ ಯಕೃತ್ತು ಆರೋಗ್ಯ(Health)ವಾಗಿರಲು, ಒಂದು ಲೋಟ ಕಬ್ಬಿನ ರಸದಲ್ಲಿ ನಿಂಬೆ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿ. ಕಬ್ಬಿನ ರಸವು ದೇಹದಲ್ಲಿನ ಹಿಟ್ ಅನ್ನೂ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಯಕೃತ್ತು ಹಾಳಾಗದಂತೆ ತಡೆಯುತ್ತದೆ.
#ದಂತ ಕುಳಿ ಮತ್ತು ದುರ್ವಾಸನೆಯುಕ್ತ ಉಸಿರಿನ ನಿವಾರಣೆ:ಕಬ್ಬಿನ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಪರಸ್‍ನಂತಹ ಮಿನರಲ್‍ಗಳಿದ್ದು, ಅವು ದಂತ ಕವಚವನ್ನು ಬಲಪಡಿಸುತ್ತದೆ ಹಾಗೂ ಹಲ್ಲು ಕೊಳೆಯುವುದನ್ನು ತಪ್ಪಿಸುತ್ತದೆ. ಪೋಷಕಾಂಶಗಳ ಕೊರತೆಯಿಮದ ಉಂಟಾಗುವ ಉಸಿರಿನ ದುರ್ವಾಸನೆಯ ವಿರುದ್ಧ ಹೋರಾಡಲು , ಕಬ್ಬಿನ ಹಾಲಿನಲ್ಲಿರುವ ಅತ್ಯಧಿಕ ಪ್ರಮಾಣದ ಪೋಷಕಾಂಶಗಳು ಸಹಾಯ ಮಾಡುತ್ತವೆ.