ಒಂದು ವೀಳ್ಯದೆಲೆಯ ಹಲವು ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ!

ಇದು ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ. ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ ಈಗ ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ

#ಎಲೆಯ ರಸ (ಅರ್ಧ ಟೀ ಚಮಚ), ಶುಂಠಿ ರಸ (ಅರ್ಧ ಟೀ ಚಮಚ) ಮಿಶ್ರ ಮಾಡಿ, 1 ಟೀ ಚಮಚ ಜೇನಿನೊಂದಿಗೆ ಕುಡಿಯಲು ನೀಡುವುದರಿಂದ ಎದೆ ರೋಗಗಳು, ಶ್ವಾಸಕೋಶದ ತೊಂದರೆ ನಿವಾರಿಸುತ್ತದೆ.

#ವಿಳ್ಳೆದೆಲೆಯ ಉಪಯೋಗ ಎಂದರೆ ಇದು ಸುಟ್ಟ ಗಾಯಕ್ಕೂ ಹೇಳಿ ಮಾಡಿಸಿದ ಔಷಧಿ ಈ ವಿಳ್ಳೆದೆಲೆ. ವಿಳ್ಳೆದೆಲೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ ಅದನ್ನು ಸಣ್ಣಗೆ ರುಬ್ಬಿ ಸಾವಯವ ಜೇನುತುಪ್ಪ ಬೆರಸಿ ಸುಟ್ಟ ಜಾಗಕ್ಕೆ ಹಚ್ಚಿಕೊಳ್ಳಿ ಇದರಿಂದ ಸುಟ್ಟ ಉರಿ ಕಡಿಮೆಯಾಗಿ ಹಿತವೆನಿಸುತ್ತದೆ.

#ಪುಟ್ಟ ಮಕ್ಕಳಲ್ಲಿ ಹೊಟ್ಟೆ ಉಬ್ಬರ ಉಂಟಾಗಿ ಅಳುತ್ತಿದ್ದರೆ, ವೀಳ್ಯದೆಲೆಗೆ ಹರಳೆಣ್ಣೆ ಸವರಿ ಬೆಚ್ಚಗೆ ಮಾಡಿ ಅದರಿಂದ ಮಗುವಿನ ಹೊಟ್ಟೆಗೆ ಶಾಖ ನೀಡಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ ಗುಣವಾಗುತ್ತದೆ.

#ಹಲ್ಲು ಕೊಳೆಯದಂತೆ, ಸವೆಯದಂತೆ ಮತ್ತು ಒಸಡುಗಳನ್ನು ಬಲಪಡಿಸಲು ವೀಳ್ಯದ ಎಲೆಯನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತದೆ. ಆದ್ದರಿಂದ ವೀಳ್ಯದ ಎಲೆಗಳನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ನಂತರ ಆ ನೀರಿನಲ್ಲಿ ನಿಮ್ಮ ಬಾಯಿಯನ್ನು ತೊಳೆಯಿರಿ. ಹಾಗೆಯೇ ಬಾಯಿಯಿಂದ ಕೆಟ್ಟ ದುರ್ವಾಸನೆ ಬರುತ್ತಿದ್ದರೆ ಊಟದ ನಂತರ ವೀಳ್ಯದ ಎಲೆ ಅಗಿಯಲು ಪ್ರಾರಂಭಿಸಿ. ಆಗ ಬಾಯಿ ರಿಫ್ರೆಶ್ ಆಗುತ್ತದೆ ಮತ್ತು ರೋಗಾಣುಗಳನ್ನು ಕೊಲ್ಲುತ್ತದೆ.

#ಒಂದು ವೀಳ್ಯದೆಲೆ, ಸ್ವಲ್ಪ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ 2 ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group