ಪಪ್ಪಾಯಿ ಎಲೆಯ ಔಷಧಿ ಗುಣಗಳು!

ಡೆಂಗ್ಯೂ ಜ್ವರದ ಹತೋಟಿಗೆ ಪಪ್ಪಾಯಿ ಗಿಡದ ಎಲೆಗಳೇ ಸಾಕು ಪಪ್ಪಾಯಿಯಲಿರುವ ಕಾರ್ಪಾಯ್ನ್ ಎಂಬ ಹೆಸರಿನ ಒಂದು ವಿಶಿಷ್ಟ ಆಲ್ಕಲಾಯ್ಡು ಕ್ಯಾನ್ಸರ್ ಕಾಯಿಲೆಗೆ ನೀಡಲಾಗುವ ಔಷಧಿಗಳ ಅಡ್ಡಪರಿಣಾಮಗಳಿಂದ ರಕ್ಷಿಸುತ್ತದೆ. ಪಪ್ಪಾಯಿ ಎಲೆಯ ರಸ ಕಹಿಯಾಗಿರಬಹುದು, ಆದರೆ ಇದರ ಗುಣಗಳು ಇನ್ನೂ ಬೇಕಾದಷ್ಟಿವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ..

#ಕೂದಲಿನ ಬೆಳವಣಿಗೆ: ಪಪ್ಪಾಯಿ ಎಲೆಯ ರಸವನ್ನು ತಲೆಗೆ ಹಚ್ಚಿ, ತಲೆಗೂದಲು ಮತ್ತು ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ, ಅದನ್ನು ಸಾಬೀತು ಪಡಿಸುವ ಸಾಕ್ಷ್ಯಗಳು ಬಹಳ ಕಡಿಮೆ. ಅಧ್ಯಯನಗಳ ಪ್ರಕಾರ ದೇಹದಲ್ಲಿ ಉತ್ಕರ್ಷಣ ನಿರೋಧಕ ಒತ್ತಡ ಅಧಿಕವಾಗಿರುವ ಕಾರಣ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಆದ್ದರಿಂದ ಉತ್ಕರ್ಷಣ ನಿರೋಧಕ ಭರಿತ ಆಹಾರ ಸೇವನೆಯು ಒತ್ತಡವನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ ಹಣ್ಣಿನ ರಸದಲ್ಲಿ ಶಿಲೀಂಧ್ರ ವಿರೋಧಿ ಗುಣಗಳಿದ್ದು, ಇದು ಮಲಸ್ಸೆಜಿಯಾ ಎಂಬ ಶಿಲೀಂಧ್ರವನ್ನು ನಿಯಂತ್ರಿಸುವಲ್ಲಿ ಸಹಕಾರಿ.

#ಈ ರಸವನ್ನು ನಿಯಮಿತವಾಗಿ ಕುಡಿಯುತ್ತಾ ಬರುವ ಮಹಿಳೆಯರಲ್ಲಿ ಮಾಸಿಕ ದಿನಗಳು ಕ್ರಮಬದ್ಧವಾಗಿರಲು ಹಾಗೂ ನಂತರದ ದಿನಗಳ ನೋವು ಹಾಗೂ ಮಾನಸಿಕ ವಿಕ್ಷೋಭೆ ಕಡಿಮೆಯಾಗಲು ನೆರವಾಗುತ್ತದೆ.

#ಆಯುರ್ವೇದ ತಜ್ಞರ ಪ್ರಕಾರ, ಮಧುಮೇಹಿಗಳು ಕೂಡ ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ಲಾಭ ಪಡೆಯಬಹುದು. ಏಕೆಂದರೆ ಇದರಲ್ಲಿರುವ ಗುಣಗಳು ಮೇದೋಜೀರಕ ಗ್ರಂಥಿಯಲ್ಲಿನ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

#ಕೆಲವು ವಿಧದ ಕ್ಯಾನ್ಸರ್ ತಡೆಗಟ್ಟಲು ಚಿಕಿತ್ಸೆಗಾಗಿ ಪಪ್ಪಾಯಿ ಎಲೆಯನ್ನು ಸಾಂಪ್ರದಾಯಿಕ ಔಷಧವಾಗಿ ಬಳಸಲಾಗುತ್ತದೆ. ಪಪ್ಪಾಯಿ ಎಲೆಗಳ ಸಾರವು ಪರೀಕ್ಷಾ-ಟ್ಯೂಬ್ ಅಧ್ಯಯನಗಳಲ್ಲಿ ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ ಎಂದು ಕಂಡುಬಂದಿದೆ.

#ಕೆರಳಿಸುವ ಕರುಳಿನ ಸಹಲಕ್ಷಣ ಹೊಂದಿರುವ ಜನರಲ್ಲಿ ಮಲಬದ್ಧತೆ, ಎದೆಯುರಿ ಮತ್ತು ರೋಗಲಕ್ಷಣಗಳನ್ನು ನಿವಾರಿಸುವಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದು ಸಹಾಯ ಮಾಡುತ್ತದೆ. ಆದರೆ ಈ ಅಂಶಗಳು ಅನುಭವದಿಂದ ಮಾತ್ರವೇ ಪರಿಗಣಿಸಲ್ಪಟ್ಟಿವೆಯೇ ಹೊರತು ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ ಎಂಬುದನ್ನು ಯಾವುದೇ ಅಧ್ಯಯನಗಳು ಸಾಬೀತುಪಡಿಸಿಲ್ಲ. ಆದರೂ, ಯಾವುದೇ ನಷ್ಟವಿಲ್ಲದ ಕಾರಣ ಈ ತೊಂದರೆಗಳಿರುವ ವ್ಯಕ್ತಿಗಳು ಒಮ್ಮೆ ಪ್ರಯತ್ನಿಸಲು ಅಡ್ಡಿಯೇನಿಲ್ಲ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group