ಮಲಬದ್ಧತೆ ನಿವಾರಣೆಗೆ ಅಗತ್ಯ ಮನೆಮದ್ದು!

ಈ ಸಮಸ್ಯೆ ಪರಿಹಾರಕ್ಕೆ ಜೀವನಶೈಲಿಯ ಬದಲಾವಣೆಯ ಜೊತೆಗೆ ಮನೆಮದ್ದಿನ ಸಹಾಯದಿಂದಲೂ ಪರಿಹಾರ ಕಂಡುಕೊಳ್ಳಬಹುದು. ಈ ಮನೆಮದ್ದಿನ ಸೇವನೆಯಿಂದ ತಕ್ಷಣಕ್ಕೆ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಅಂತಹ ಕೆಲವು ಆಹಾರ ಪದಾರ್ಥಗಳು ಹಾಗೂ ಅವುಗಳ ಉಪಯೋಗ ಇಲ್ಲಿದೆ.

#ನೀರು ಹೆಚ್ಚಾಗಿ ಕುಡಿಯಬೇಕು: ಮಲಬದ್ಧತೆಗೆ ಮೂಲ ಕಾರಣ ದೇಹದಲ್ಲಿ ನೀರಿನಂಶ ಇಲ್ಲದಿರುವುದು ಅಥವಾ ಕಡಿಮೆಯಾಗುವುದು. ದಿನಪೂರ್ತಿ ದಣಿದು ಕೆಲಸ ಮಾಡಿ, ಊಟ ಮುಗಿಸಿ ಒಂದು ಲೋಟ ನೀರು ಕುಡಿದು ಉಳಿದ ಸಮಯದಲ್ಲಿ ನೀರನ್ನು ಸೇವಿಸದಿದ್ದರೆ, ನಿಗದಿತ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಮಲಬದ್ಧತೆಯ ಸಮಸ್ಯೆ ಕಾಡುತ್ತದೆ. ನಾವು ಸೇವಿಸುವ ಆಹಾರ ಶೇಕಡ 50 ಇರಬೇಕು. ಶೇಕಡ 25ರಷ್ಟು ನೀರು ಇರಬೇಕು. ಇನ್ನುಳಿದ ಶೇಕಡ 25 ಹೊಟ್ಟೆ ಖಾಲಿ ಇರಬೇಕು. ಹೀಗಿದ್ದರೆ ಮಾತ್ರ ದೇಹದ ಜೀರ್ಣಾಂಗ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತದೆ.

#ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿದು ಮಲಗುವುದರಿಂದ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಬಹುದು.

#ನಿಂಬೆರಸ:ನಿಂಬೆರಸದಲ್ಲಿರುವ ಸಿಟ್ರಿಕ್‌ ಆಸಿಡ್‌ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಒತ್ತಾಯಪೂರ್ವಕವಾಗಿ ದೇಹದಿಂದ ಮಲವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆ ನಿವಾರಣೆಗೆ ನೈಸರ್ಗಿಕ ಔಷಧಿಯೂ ಹೌದು. ಪ್ರತಿನಿತ್ಯ ಬೆಳಗಿನ ವೇಳೆ ಒಂದು ಲೋಟ ನೀರಿಗೆ ನಿಂಬೆರಸ ಸೇರಿಸಿ ಕುಡಿಯಬಹುದು. ಟೀಯೊಂದಿಗೂ ನಿಂಬೆರಸವನ್ನು ಸೇರಿಸಿ ಕುಡಿಯಬಹುದು.

#ಅಂಜೂರವನ್ನು ಸೇವಿಸಿ: ಮಲಬದ್ಧತೆಗೆ ಹೆಚ್ಚು ಸಮರ್ಪಕವಾದ ಕಣ್ಣಿಂದ ಅಂಜರದ ಹಣ್ಣು. ಇದು ಹಸಿಯಾಗಿದ್ದಾಗಲೂ ತಿನ್ನಬಹುದು ಮತ್ತು ಒಣಗಿದ ಹಣ್ಣನ್ನು ಕೂಡ ತಿನ್ನಬಹುದು. ಅಂಜೂರದ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರು ಕುಡಿಯುವುದರಿಂದಲೂ ಹೆಚ್ಚಿನ ಉಪಯೋಗವನ್ನು ಪಡೆಯಬಹುದು.

#ಶುಂಠಿ: ಜೀರ್ಣಕ್ರಿಯೆಯಲ್ಲಿ ಶುಂಠಿಯು ಅತ್ಯಂತ ಪರಿಣಾಮಕಾರಿ ಪರಿಹಾರ ಒದಗಿಸುತ್ತಿದ್ದು ನಿಮ್ಮ ಕಿಬ್ಬೊಟ್ಟೆಯಲ್ಲಿನ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ. ನೀವು ಮಲಬದ್ಧತೆ ಹೊಂದಿರುವಾಗ ಕರುಳಿನ ಚಲನೆಯನ್ನು ಸುಲಲಿತಗೊಳಿಸಲು ಇದು ಸಹಕಾರಿಯಾಗಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group