ಹುಣಸೆ ಹಣ್ಣಿನ ಬೀಜಗಳನ್ನು ಬಿಸಾಡುವ ಮುನ್ನ ಪ್ರಯೋಜನ ತಿಳಿಯಿರಿ!

ಹುಣಸೆ ಹಣ್ಣಿನ ಜೊತೆಗೆ, ಇದರ ಬೀಜಗಳು ಪ್ರಯೋಜನಕಾರಿ ಪದಾರ್ಥಗಳನ್ನು ಸಹ ಒಳಗೊಂಡಿರುತ್ತವೆ, ಇದು ನಿಮ್ಮ ಒಟ್ಟಾರೆ ಆರೋಗ್ಯ(Health)ವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಈಗ ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ.
#ಹಲ್ಲು:ಹಲ್ಲುಗಳು ತುಂಬಾ ದುರ್ಬಲವಾಗಿದ್ದರೆ ಆಗ ಹುಣಸೆ ಬೀಜದ ಹುಡಿಯನ್ನು ಒಸಡು ಮತ್ತು ಹಲ್ಲುಗಳಿಗೆ ಹಚ್ಚಿಕೊಳ್ಳಿ. ಅತಿಯಾಗಿ ಧೂಮಪಾನ ಮಾಡುವಂತಹ ವ್ಯಕ್ತಿಗಳಲ್ಲಿ ನಿಕೋಟಿನ್ ಜಮೆಯಾಗಿರುವುದು ಅಥವಾ ಬಾಯಿಯ ಸ್ವಚ್ಛತೆ ಸರಿಯಾಗಿ ಮಾಡದೆ ಇದ್ದರೆ, ಅತಿಯಾಗಿ ತಂಪು ಪಾನೀಯ ಸೇವನೆಯಿಂದ ಪದರವು ನಿರ್ಮಾಣವಾಗುವುದು. ಇದು ಕಾಫಿ, ಚಾ, ಸೋಡಾ ಮತ್ತು ಧೂಮಪಾನದಿಂದ ಉಂಟಾಗಿರುವ ಕಲೆಗಳನ್ನು ನಿವಾರಿಸುವುದು. ಹುಣಸೆ ಹಣ್ಣಿನ ಹುಡಿಯು ಎಲ್ಲಾ ರೀತಿಯ ದಂತ ಸಮಸ್ಯೆ ನಿವಾರಣೆ ಮಾಡುವುದು ಮತ್ತು ಹಲ್ಲಿನಲ್ಲಿರುವಂತಹ ನಿಕೋಟಿನ್ ನ್ನು ತೆಗೆದುಹಾಕುವುದು. ಹುರಿದ ಅಥವಾ ಕರಿದ ಹುಣಸೆ ಬೀಜಗಳನ್ನು ಹುಡಿ ಮಾಡಿಕೊಂಡು ಅದು ಮೆತ್ತಗೆ ಆದ ಬಳಿಕ ಅದರಿಂದ ಹಲ್ಲುಜ್ಜಿಕೊಳ್ಳಿ.
#ಕೀಲು ನೋವುಗಳಿಂದ ಬಳಲುತ್ತಿರುವವರು ಹುಣಸೆ ಹಣ್ಣಿನ ಬೀಜ ಉತ್ತಮ ಔಷಧವಾಗಿದೆ. ಹುಣಸೆ ಬೀಜಗಳನ್ನು ಚೆನ್ನಾಗಿ ತೊಳೆದು 2-3 ದಿನಗಳ ಕಾಲ ನೀರಿನಲ್ಲಿ ನೆನೆಸಿಡಿ. ಪ್ರತಿನಿತ್ಯವೂ ಸಹ ನೀರು ಬದಲಾಯಿಸುತ್ತಿರಿ. ನಂತರ ಮೇಲಿನ ಕೆಂಪು ಬಣ್ಣದ ಸಿಪ್ಪೆಯನ್ನು ಬಿಡಿಸಿ, ಒಳಗಿರುವ ಮತ್ತೊಂದು ಬೀಜವನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ನೆರಳಿನಲ್ಲಿ ಒಣ ಹಾಕಿ. ನಂತರ ಒಣಗಿದ ಬೀಜಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಗಾಜಿನ ಪಾತ್ರೆಯಲ್ಲಿ ಶೇಖರಿಸಿಟ್ಟುಕೊಳ್ಳಿ. ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಅರ್ಧ ಚಮಚ ಪುಡಿಯನ್ನು ಸೇವಿಸುವುದರಿಂದ ಕೀಲು ನೋವು ಅಥವಾ ಮೊಣಕಾಲು ನೋವು ಬಹು ಬೇಗ ಗುಣವಾಗುತ್ತದೆ.
#ಹುಣಸೆ ಬೀಜಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ.ಅವು ಕ್ಯಾನ್ಸರ್ ತಡೆಗಟ್ಟುವ ಜೊತೆಗೆ, ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.ಇದರಲ್ಲಿ ಇರುವ ಆಹಾರದ ನಾರಿನ ಕಾರಣದಿಂದಾಗಿ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಕಡಲೆ ಕಾಳುಗಳಲ್ಲಿನ ಪೊಟ್ಯಾಸಿಯಮ್ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.
#ವಯಸ್ಸಾದ ಮತ್ತು ಕೃತಕ ಉತ್ಪನ್ನಗಳಿಂದ ಚರ್ಮವು ಸಡಿಲವಾಗಬಹುದು. ನಿಮ್ಮ ಗಲ್ಲದ ಮತ್ತು ಅದರ ಸುತ್ತಲಿನ ಚರ್ಮವು ಸಡಿಲವಾಗಿರುವುದನ್ನು ನೀವು ಗಮನಿಸಿದರೆ, ಹುಣಸೆಹಣ್ಣುಗಳ ಬೀಜವನ್ನು ಬಳಸಿ. ಫೇಸ್ ಮಾಸ್ಕ್ ತಯಾರಿಸಿ ಮತ್ತು ಪಪ್ಪಾಯಿ ಬೀಜಗಳ ಪುಡಿಯನ್ನು ತಯಾರಿಸಿ. ಅದಕ್ಕೆ ಶುದ್ಧ ಜೇನುತುಪ್ಪವನ್ನು ಸೇರಿಸಿ ಚರ್ಮಕ್ಕೆ ಹಚ್ಚಿ. ವಾರದಲ್ಲಿ ಮೂರು ದಿನ ನೀವು ಹುಣಸೆ ಹಣ್ಣಿನ ಪುಡಿಯನ್ನು ಬಳಸಿ ಮಾಡಿದ ಒಂದು ಕಪ್ ಚಹಾವನ್ನು ಕುಡಿಯಬಹುದು.
#ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ:ಹುಣಸೆ ಬೀಜವನ್ನು ಪುಡಿಮಾಡಿ ನೀರಿನಲ್ಲಿ ಹಾಕಿ ಕುಡಿಯುವುದರಿಂದ ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ಸಹಜವಾಗಿ ಕಡಿಮೆ ಮಾಡುತ್ತದೆ. ಮತ್ತು ಹುಣಸೆ ಬೀಜ ಇನ್ಸುಲಿನ್ ಉತ್ಪತ್ತಿ ಮಾಡುವ ಕೋಶದ ಗಾತ್ರವನ್ನು ಹಿಗ್ಗಿಸಿ ಮೇದೋಜೀರಕ ಗ್ರಂಥಿಯನ್ನು ರಕ್ಷಿಸುತ್ತದೆ.