ದಾಳಿಂಬೆ ಹಣ್ಣಿನ ಸಿಪ್ಪೆಯ ಪ್ರಯೋಜನಗಳೇನು?

ದಾಳಿಂಬೆ ಹಣ್ಣಿನ ಸಿಪ್ಪೆ ಕೂಡ ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದ್ದು, ಪ್ರಮುಖವಾಗಿ ದಾಳಿಂಬೆ ಹಣ್ಣಿನ ಸಿಪ್ಪೆಯ ಚಹಾ ಸೇವನೆಯಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ದಾಳಿಂಬೆ ಹಣ್ಣಿನ ಸಿಪ್ಪೆಯ ಪ್ರಯೋಜನ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
#ವಯಸ್ಸಾಗುವಿಕೆಯನ್ನು ತಡೆಯುತ್ತದೆಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಸಣ್ಣ ವಯಸ್ಸಿಗೆಯೇ ಮುಖದ ಚರ್ಮದ ಮೇಲೆ ಸುಕ್ಕುಗಳು ಕಂಡು ಬರುವ ಕಾರಣ ವಯಸ್ಸಾದವರ ಹಾಗೆ ಕಾಣುತ್ತಾರೆ. ಆದರೆ ಈ ಸಮಸ್ಯೆಗೆ ದಾಳಿಂಬೆ ಸಿಪ್ಪೆಗಳು ಪರಿಹಾರ ಒದಗಿಸುತ್ತವೆ. ಸಣ್ಣ ವಯಸ್ಸಿನಲ್ಲಿ ವಯಸ್ಸಾದವರ ಹಾಗೆ ಕಾಣುವ ಪ್ರಕ್ರಿಯೆಯನ್ನು ಇದು ದೂರ ಮಾಡುತ್ತದೆ.
#ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡುವ ಮೂಲಕ ದಾಳಿಂಬೆಯ ಸಿಪ್ಪೆ ಮೊಡವೆ, ಕೀವುಗುಳ್ಳೆ ಸೂಕ್ಷ್ಮಗೆರೆಗಳು ಮೊದಲಾದ ತೊಂದರೆಗಳಿಂದ ತ್ವಚೆಯನ್ನು ರಕ್ಷಿಸುತ್ತದೆ. ದಾಳಿಂಬೆಯ ಸಿಪ್ಪೆಯಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣವಿದ್ದು ಬ್ಯಾಕ್ಟೀರಿಯಾ ಸಹಿತ ಇನ್ನೂ ಹಲವಾರು ಬಗೆಯ ಸೋಂಕುಕಾರಕ ಕ್ರಿಮಿಗಳನ್ನು ದೂರವಿರಿಸುತ್ತದೆ.
#ಗಂಭೀರ ಕಾಯಿಲೆಗಳಿಗೆ ದಾಳಿಂಬೆ ಸಿಪ್ಪೆಯ ಮನೆಮದ್ದು:ಮಧುಮೇಹ, ಹೃದಯಸ ಸಮಸ್ಯೆಗಳಿಗೂ ದಾಳಿಂಬೆ ಸಿಪ್ಪೆಯನ್ನು ಮನೆಮದ್ದಾಗಿ ಬಳಸಬಹುದು. ಒಂದು ಅಧ್ಯಯನದ ಪ್ರಕಾರ ದಾಳಿಂಬೆ ಸಿಪ್ಪೆ ಉರಿಯೂತದ ಸಮಸ್ಯೆ ಕಡಿಮೆ ಮಾಡಲು ಸಹಕಾರಿ. ಯಾರು ಅತ್ಯಧಿಕ ಮೈ ತೂಕ ಹೊಂದಿದ್ದು ಮಧುಮೇಹ ಹಾಗೂ ಕೊಲೆಸ್ಟ್ರಾಲ್ ಸಮಸ್ಯೆ ಹೊಂದಿದ್ದಾರೂ ಅವರು ದಿನಾ 1000 mg ದಾಳಿಂಬೆ ಸಿಪ್ಪೆಯ ಪುಡಿ ಬಳಸಿದರೆ ಕೊಲೆಸ್ಟ್ರಾಲ್ ಹಾಗೂ ಮಧುಮೇಹ ನಿಯಂತ್ರಣದಲ್ಲಿರುತ್ತದೆ.
#ದಾಳಿಂಬೆ ಸಿಪ್ಪೆಗಳನ್ನು ಸನ್ ಕ್ರೀಮ್ನಂತೆ ಅನ್ವಯಿಸಬಹುದು. ಒಣ ಸಿಪ್ಪೆಯನ್ನು ಯಾವುದೇ ಎಣ್ಣೆಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಸನ್ ಟ್ಯಾನಿಂಗ್ ಸಮಸ್ಯೆಯನ್ನು ದೂರ ಮಾಡಬಹುದು.
#ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಕಂಡುಬರುವ ಅಜೀರ್ಣದ ಸಮಸ್ಯೆಗೆ ದಾಳಿಂಬೆ ಸಿಪ್ಪೆಯು ಉತ್ತಮ ಔಷಧವಾಗಿದ್ದು, ಅತಿಸಾರ ಭೇದಿ ಉಂಟಾದಾಗ ಅಥವಾ ರಕ್ತ ಭೇದಿ ಸಮಸ್ಯೆ ಉಂಟಾದಾಗ ಒಣಗಿಸಿದ ದಾಳಿಂಬೆಯ ಸಿಪ್ಪೆಯನ್ನು ಲಿಂಬೆ ಹಣ್ಣಿನಲ್ಲಿ ತೇದಿ ಚೂರ್ಣವಾಗಿ ಮಾಡಿ ಸೇವಿಸುವುದರಿಂದ ಅತಿಸಾರದ ಸಮಸ್ಯೆ ಶೀರ್ಘವಾಗಿ ಗುಣಮುಖವಾಗುತ್ತದೆ.
#ಬಾಯಿಯಲ್ಲಿ ಹರಡುವ ರೋಗಾಣು ವಿರುದ್ಧ ಹೋರಾಟ: ದಾಳಿಂಬೆ ಸಿಪ್ಪೆಗಳಲ್ಲಿ ಪಾಲಿಫೆನಾಲಿಕ್ ಫ್ಲೇವನಾಯ್ಡ್ಗಳಿವೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿರುತ್ತದೆ. ಬಾಯಿಯಲ್ಲಿ ಹರಡುವ ರೋಗಾಣುಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ.