ಬೋರೆ ಹಣ್ಣಿನ ಈ ಪ್ರಯೋಜನಗಳನ್ನು ತಿಳಿಯಿರಿ.

ಬೋರೆ ಹಣ್ಣು ಹುಳಿ ಮಿಶ್ರಿತ ಸಿಹಿ ಹಣ್ಣು ಆಗಿರುವುದರಿಂದ ಬೋರೆ ಹಣ್ಣು ವಿಭಿನ್ನವಾದ ರುಚಿಯನ್ನು ಹೊಂದಿರುತ್ತದೆ ಹಾಗೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಬಗ್ಗೆ ಈ ಲೇಖನದಲ್ಲಿಂದು ತಿಳಿಯೋಣ ಬನ್ನಿ.

#ಇದರ ಬೀಜದ ಸಾರವು ಕ್ಷಯರೋಗ, ಕ್ಯಾನ್ಸರ್ ಮತ್ತು ಏಡ್ಸ್ ಚಿಕಿತ್ಸೆಯಲ್ಲಿ ಸಹ ಸಹಾಯ ಮಾಡುತ್ತದೆ, ಈ ಬೀಜವು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

#ಎಲೆಗಳು ಜ್ವರನಿವಾರಕ (ಜ್ವರ ಚಿಕಿತ್ಸೆಗಾಗಿ ಬಳಸಲಾಗುತ್ತದೆ). ಈ ಹಣ್ಣನ್ನು ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಕ್ಷಯರೋಗಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದರ ಬೀಜಗಳು ಕಣ್ಣಿನ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹೆಚ್ಚು ಬಾಯಾರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

#ಈ ಹಣ್ಣು ವಿಟಮಿನ್ ಎ ವಿಟಮಿನ್ ಸಿ ಹಾಗೂ ಅಪಾರ ಪ್ರಮಾಣದ ಕಬ್ಬಿಣದ ಅಂಶವನ್ನು ಹೊಂದಿರುತ್ತದೆ ರಕ್ತದ ವೃದ್ಧಿಗೆ ಇದು ಅತ್ಯದ್ಭುತವಾಗಿ ಕೆಲಸ ಮಾಡುತ್ತದೆ ಹಾಗೇನೇ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಮಾನಸಿಕ ಶಕ್ತಿಯನ್ನು ಹೆಚ್ಚು ಮಾಡುವುದಕ್ಕೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.

#ತಲೆಕೂದಲು ಉದುರುತ್ತಿದ್ದಲ್ಲಿ ಬಾರೆ ಹಣ್ಣಿನ ಎಲೆಗಳ ರಸವನ್ನು ಹಚ್ಚಿಕೊಂಡು ತಲೆ ತೊಳೆದುಕೊಳ್ಳಬೇಕು.ಈ ಹಣ್ಣುಗಳ ಸೇವನೆ ರಕ್ತ ಶುದ್ಧಿ ಮಾಡುತ್ತದೆ.

#ವಾಂತಿಯಾಗುತ್ತಿದ್ದಲ್ಲಿ ಬಾರೆ ಹಣ್ಣು ಮತ್ತು ಕಾಳು ಮೆಣಸು ಸೇರಿಸಿ ಕಷಾಯ ತಯಾರಿಸಿ ಅದಕ್ಕೆಕಲ್ಲು ಸಕ್ಕರೆ ಬೆರೆಸಿ ಕುಡಿಯಬೇಕು.

#ಚರ್ಮದ ಮೇಲೆ ತೀವ್ರ ತುರಿಕೆ ಅಥವಾ ಉರಿ ಕಾಣಿಸಿದರೆ ಈ ಹಣ್ಣಿನ ರಸವನ್ನು ಹಚ್ಚುವ ಮೂಲಕ ಮುಕ್ತಿ ಪಡೆಯುತ್ತಿದ್ದರು ಈ ಹಣ್ಣು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ವಾತ ಪಿತ್ತ ಕಫ ದೋಷಗಳನ್ನು ನಿವಾರಣೆ ಮಾಡುವ ಈ ಹಣ್ಣನ್ನು ವರ್ಷಕ್ಕೆ ಒಂದೇ ಬಾರಿ ಸೇವಿಸಿದರೂ ಸಾಕು ನೀವು ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ಪಡೆಯಬಹುದು. ನಮ್ಮ ಪರಿಸರದಲ್ಲಿ ಸಿಗುವ ಇಂತಹ ಹಣ್ಣುಗಳನ್ನು ತಿಂದು ಆರೋಗ್ಯವನ್ನು ವೃದ್ದಿಸಿಕೊಳ್ಳಲು ಪ್ರಯತ್ನಿಸಿ ಜೊತೆಗೆ ಈ ಪ್ರಾದೇಶಿಕ ಹಣ್ಣಿನ ಗಿಡಗಳನ್ನು ಕಾಪಾಡೋಣ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group