ರಾಸ್ ಬೆರ್ರಿ ಹಣ್ಣಿನ ಈ ಪ್ರಯೋಜನ ತಿಳಿಯಿರಿ!

ದೇಹದ ತೂಕವನ್ನು ಇಳಿಸುವಲ್ಲಿ ಕೆಲವೊಂದು ಹಣ್ಣುಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. ಬ್ಲ್ಯಾಕ್ ಬೆರಿ, ದ್ರಾಕ್ಷಿ, ಸ್ಟ್ರಾಬರಿ, ರಾಸ್ ಬೆರ್ರಿ ಈ ರೀತಿಯ ಹಣ್ಣುಗಳು ದೇಹದ ಆರೋಗ್ಯವನ್ನು ಹೆಚ್ಚಿಸಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಇಲ್ಲಿ ನಾವು ರಾಸ್ ಬೆರಿ ತಿಂದರೆ ಹೇಗೆ ದೇಹದ ತೂಕ ಕಡಿಮೆಯಾಗುತ್ತದೆ ಎಂದು ವಿವರಿಸಲಾಗಿದೆ ನೋಡಿ:ಬೆರ್ರಿ ತಿಂದರೆ ಏನೆಲ್ಲ ಪ್ರಯೋಜನಗಳಿವೆ ವಿವರಿಸಲಾಗಿದೆ ನೋಡಿ:

#ಲಿವರ್ ಹಾನಿಯಾಗಿದ್ದರೆ ಗುಣ ಪಡಿಸಬಹುದು: ಪ್ರತಿದಿನ ರಾಸ್ ಬೆರಿ ತಿಂದರೆ ಲಿವರ್ ನಲ್ಲಿ ಹಾನಿಯಾದ ಕಣ್ಣುಗಳನ್ನು ಸರಿಪಡಿಸಿ ಲಿವರ್ ನ ಆರೋಗ್ಯವನ್ನು ಹೆಚ್ಚಿಸಬಹುದು.ಓದಿ

#ರಾಸ್ಪ್ ಬೆರ್ರಿ ಪಾಲಿಫಿನಾಲ್‌ಗಳು, ಕ್ಯಾರೊಟಿನಾಯ್ಡ್‌ಗಳಂಥ ಫೈಟೊ-ರಾಸಾಯನಿಕಗಳನ್ನು ಹೊಂದಿರುತ್ತದೆ, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಲ್ಲದೆ, ಇದರಲ್ಲಿ ಕರಗುವ ಪೆಕ್ಟಿನ್ ಫೈಬರ್, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

#ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಇದರಲ್ಲಿರುವ ಇಲಾಜಿಕ್ ಆಸಿಡ್ (Ellagic acid) ಹೃದಯಾಘಾತ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಅಧಿಕ ರಕ್ತದ ಒತ್ತಡವನ್ನು ನಿಯತ್ರಣದಲ್ಲಿಡುತ್ತದೆ. ಇದರಿಂದಾಗಿ ಹೃದಯದ ಆರೋಗ್ಯ ಹೆಚ್ಚಾಗುವುದು.

#ತ್ವಚೆ ಆರೋಗ್ಯಕ್ಕೆ ಒಳ್ಳೆಯದು: ಇದರಲ್ಲಿ ವಿಟಮಿನ್ ಮತ್ತು antioxidants ಅಂಶ ಅಧಿಕವಿರುವುದರಿಂದ ಅಕಾಲಿಕ ನೆರಿಗೆ ಬೀಳುವುದನ್ನು ತಪ್ಪಿಸುತ್ತದೆ ಹಾಗೂ ತ್ವಚೆಯ ಕಾಂತಿ ಹೆಚ್ಚಿಸುತ್ತದೆ.

#ಅಲ್ಲದೆ ಈ ಹಣ್ಣಿನಲ್ಲಿ ನಾರಿನಂಶ ಮತ್ತು ಮ್ಯಾಗ್ನಿಸೆ ಅಧಿಕವಿರುತ್ತದೆ. ಇದರಿಂದಾಗಿ ಈ ಹಣ್ಣುಗಳನ್ನು ತಿಂದರೆ ಬೇಗನೆ ಹೊಟ್ಟೆ ತುಂಬುತ್ತದೆ ಹಾಗೂ ಈ ಎರಡು ಅಂಶಗಳು ದೇಹದಲ್ಲಿ ಪಚನ ಕ್ರಿಯೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಇದು ದೇಹದಲ್ಲಿ ರಕ್ತದಂಶವನ್ನು ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

#ಇನ್ನು ದೇಹದಲ್ಲಿರುವ ಕ್ಯಾನ್ಸರ್ ಕಣಗಳನ್ನು ನಿಷ್ಕ್ರಿಯಗೊಳಿಸಲು ರೋಸ್ ಬೆರಿ ಹಣ್ಣು ಸಹಕಾರಿಯಾಗಿದೆ. ಇದರ ಮೂಲಕ ನಮಗೆ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇಷ್ಟೇ ಅಲ್ಲದೆ ಮೂತ್ರಪಿಂಡದಲ್ಲಿ ಕಲ್ಲು ಇದ್ದವರು ಕೂಡ ಇದನ್ನು ಸೇವಿಸುವುದರ ಮೂಲಕ ಮೂತ್ರಪಿಂಡದಲ್ಲಿರುವ ಕಲ್ಲನ್ನು ಕರಗಿಸಿಕೊಳ್ಳಬಹುದು. ಇನ್ನು ಈ ಹಣ್ಣಿನಲ್ಲಿನ ಅಂಶ ಹೆಚ್ಚಾಗಿರುವುದರಿಂದ ಇದು ಮಲಬದ್ಧತೆಯ ತೊಂದರೆ ಕಡಿಮೆಯಾಗಿದೆ.

#ಕಣ್ಣುಗಳಿಗೆ ಒಳಿತು:ವಿಟಮಿನ್ ಸಿ ಜೊತೆಗೆ, ವಿಟಮಿನ್ ಎ ಸಹ ಹೆಚ್ಚಿನ ಪ್ರಮಾಣದಲ್ಲಿರುತ್ತದೆ, ಇದು ಕಣ್ಣಿನ ಆರೋಗ್ಯ, ದೃಷ್ಟಿ ಹೆಚ್ಚಿಸುತ್ತದೆ. ಇದು ಕಬ್ಬಿಣವನ್ನು ಸಹ ಹೊಂದಿರುತ್ತದೆ, ಇದು ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group