ಬಿಲ್ವಪತ್ರೆಯ ಈ ಅದ್ಭುತ ಪ್ರಯೋಜನ ತಿಳಿಯಿರಿ!

ಇಂದಿನ ಜೀವನಶೈಲಿಯಲ್ಲಿ (lifestyle)ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಅನುಸರಿಸುತ್ತಿರುವ ಜೀವನಶೈಲಿಯ ಕಾರಣದಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ (Health problem). ಇದರಲ್ಲಿ ಮಧುಮೇಹ (diabetes), ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ. ಇಂತಹ ಪರಿಸ್ಥಿತಿಯಲ್ಲಿ ಬಿಲ್ವ ಪತ್ರೆ ತಿನ್ನುವ ಮೂಲಕ, ಅಂತಹ ಕಾಯಿಲೆಗಳನ್ನು ದೂರ ಮಾಡಬಹುದು
#ಚರ್ಮದ ಸಮಸ್ಯೆಗಳು : ದೇಹದ ಚರ್ಮದ ದುರ್ಗಂಧವನ್ನು ನಿವಾರಿಸಲು ತಾಜಾ ಬಿಲ್ವಪತ್ರೆ ರಸವನ್ನು ಪ್ರತಿದಿನ ಮೈಗೆ ಚೆನ್ನಾಗಿ ಲೇಪಿಸಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಬೇಕು. ದೇಹದ ಮೇಲೆ ಕುರುಗಳು ಇದ್ದಾಗ ಬಿಲ್ವ ವೃಕ್ಷದ ಬೇರನ್ನು ನಿಂಬೆರಸದಲ್ಲಿ ತೇಯ್ದು ಲೇಪಿಸುತ್ತಿರಬೇಕು..
#ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ :ಹೊಟ್ಟೆಯನ್ನು ಸ್ವಚ್ಛಗೊಳಿಸುವಲ್ಲಿಯೂ ಈ ಎಲೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಲ್ಯಾಕ್ಟೆಸಿವ್ ಪ್ರಾಪರ್ಟಿಯನ್ನು ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ (how to improve digestion). ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಬಿಲ್ವ ಪತ್ರೆಯನ್ನು ಬಳಸಬಹುದು.
#ತಲೆಕೂದಲಿನ ಸಮಸ್ಯೆಗಳು : ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ನಂತರ ಅದರ ತಿರುಳನ್ನು ತೆಗೆದು ನುಣ್ಣಗೆ ಅರೆದು ತಲೆಗೆ ಲೇಪಿಸಿ ಅರ್ಧ ಗಂಟೆಯ ನಂತರ ತೊಳೆಯಬೇಕು. ಇದನ್ನು ದಿನಕ್ಕೊಮ್ಮೆಯಂತೆ ಹದಿನೈದು ದಿನಗಳ ಕಾಲ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ತಲೆ ಸ್ನಾನವನ್ನು ಮಾಡುವ ಅರ್ಧಗಂಟೆಯ ಮೊದಲು ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಿಕೊಳ್ಳಬೇಕು. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಅಕಾಲ ನರೆಕೂಡಲು ಸಮಸ್ಯೆ ನಿವಾರಣೆಯಾಗುತ್ತದೆ.
#ಬಿಲ್ವಪತ್ರೆಯು ಕಿವುಡುತನವನ್ನು ಹೋಗಲಾಡಿಸುತ್ತದೆ.ಬಿಲ್ವಪತ್ರೆ ಎಲೆಯ ಎಣ್ಣೆಯನ್ನು ತಯಾರಿಸಿ, 3 ರಿಂದ 4 ಡ್ರಾಪ್ ಎಣ್ಣೆಯನ್ನು ಕಿವಿಗೆ ಬಿಡುವುದರಿಂದ ಕಿವುಡುತನ ಕಡಿಮೆಯಾಗುತ್ತದೆ.
#ಎಲೆಗಳಲ್ಲಿ ನೋವು ನಿವಾರಕ, ನಂಜು ನಿವಾರಕ, ಮತ್ತು ಜ್ವರಹರ ಮತ್ತು ಕ್ಯಾನ್ಸರ್ ಗುಣಪಡಿಸುವ ಗುಣಗಳಿವೆ. ಎಲೆ ಹೈಪರ್‌ಥೈರಾಡಿಸಮ್‌ನಲ್ಲಿ ಪರಿಣಾಮಕಾರಿಯಾದ ಔಷಧಿಯಾಗಿದೆ.