ಹುಣಸೆ ಹಣ್ಣಿನಲ್ಲಿ ಸಿಗುವ ಆರೋಗ್ಯಕರ ಪ್ರಯೋಜನಗಳು!

ಈ ಮರದ ಹಣ್ಣನ್ನು ವಿವಿಧ ಅಡುಗೆ ಹಾಗೂ ಪಾಕಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಇದನ್ನು ಎಲ್ಲಾ ಕಡೆ ಬೆಳೆಯಲಾಗುತ್ತದೆ. ಇದೊಂದು ಸಿಹಿ ಹುಳಿ ಮಿಶ್ರಿತ ಹಣ್ಣು. ಇದರಲ್ಲಿರುವ ಟಾರ್ಟಾರಿಕ್ ಆಮ್ಲದಿಂದಾಗಿ ಹೆಚ್ಚಿನ ರುಚಿಯನ್ನು ಒದಗಿಸುತ್ತದೆ. ಈಗ ಈ ಹುಣಸೆ ಹಣ್ಣಿನ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ

#ಜೀರ್ಣಕ್ರಿಯೆಗೆ ಸಹಾಯಮಾಡುವುದು:ಉತ್ತಮ ಜೀರ್ಣಕ್ರಿಯೆಗೆ ಹುಣಸೆ ಹಣ್ಣು ಅದ್ಭುತ ಸಹಕಾರ ನೀಡುವುದು. ಜೀರ್ಣಕ್ರಿಯೆಯು ಸದಾ ಉತ್ತಮವಾಗಿರುವಂತೆ ಪೋಷಿಸುವುದು.

#ಸಾಂಪ್ರದಾಯಿಕ ಔಷಧದಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.ಸಿರಪ್ ರೂಪದಲ್ಲಿ, ಇದನ್ನು ಸಾಂಪ್ರದಾಯಿಕವಾಗಿ ಅತಿಸಾರ, ಮಲಬದ್ಧತೆ, ಜ್ವರ ಮತ್ತು ಪೆಪ್ಟಿಕ್ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿತ್ತು. ತೊಗಟೆ ಮತ್ತು ಎಲೆಗಳನ್ನು ಗಾಯದ ಗುಣಪಡಿಸುವಿಕೆಯನ್ನು ಉತ್ತೇಜಿಸಲು ಸಹ ಬಳಸಲಾಗುತ್ತದೆ.

#ಭೇದಿಯುಂಟಾದ ಸಂದರ್ಭದಲ್ಲಿ ಸ್ವಲ್ಪ ಹುಣಸೆ ರಸ, ಒಂದು ಚಮಚ ಮೊಸರು ಮತ್ತು ಬಾಳೆಹಣ್ಣನ್ನು ನುಣ್ಣಗೆ ಹಿಚುಕಿ ಕುಡಿದರೆ ಬೇಧಿ ನಿಲ್ಲುತ್ತದೆ.

#ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ:ಇದರಲ್ಲಿರುವ ಪೊಟಾಶಿಯಂ ಈ ಕೆಲಸವನ್ನು ಸರಳವಾಗಿ ಮಾಡಿ ಮುಗಿಸುತ್ತದೆ. ಹುಣಸೆ ಹಣ್ಣಿನಲ್ಲಿರುವ ನಾರಿನಂಶವು ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಜೊತೆಗೆ ಇದರಲ್ಲಿನ ಆಂಟಿ-ಆಕ್ಸಿಡೆಂಟ್‌ಗಳು ನಮ್ಮ ದೇಹದಲ್ಲಿರುವ ಫ್ರೀ ರ‍್ಯಾಡಿಕಲ್‌ಗಳನ್ನು ನಿಯಂತ್ರಣದಲ್ಲಿಡುತ್ತವೆ. ಇವೆಲ್ಲವು ಸೇರಿ ನಮ್ಮ ಹೃದಯವನ್ನು ಆರೋಗ್ಯವಾಗಿಡುತ್ತವೆ.

#ಹುಣಸೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೊರಹಾಕಿ ರಕ್ತ ಸಂಚಾರವನ್ನು ಸುಗಮಗೊಳಿಸಿ ಹೃದಯ ಬಡಿತವನ್ನು ಸರಾಗವಾಗಿಸುವ ಅತ್ಯದ್ಭುತ ಗುಣ ಹುಣಸೆ ಹಣ್ಣಿಗೆ ಇದೆ ಎಂದು ಹೇಳುತ್ತಾರೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group