ಮೂಲಂಗಿಯ ಸೇವನೆಯಿಂದ ಈ ಪ್ರಯೋಜನಗಳನ್ನು ಪಡೆಯಬಹುದು.

ಮೂಲಂಗಿಯ ವಾಸನೆ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಈ ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇದರ ಸೊಪ್ಪು ಕೂಡ ಪಲ್ಯ ಮಾಡಿ ತಿನ್ನಬಹುದು. ಇದರಲ್ಲಿ ನಾರಿನಂಶ ಮತ್ತು ವಿಟಮಿನ್ ಹಾಗೂ antioxidants ಅಧಿಕವಿದ್ದು ಮಲಬದ್ಧತೆ ಮತ್ತು ಮಲವ್ಯಾಧಿಯಂತಹ ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿಯಾಗಿದೆ.ಮೂಲಂಗಿ ತಿಂದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.
#ಮಧುಮೇಹವನ್ನು ನಿಯಂತ್ರಿಸುತ್ತದೆ:ಮೂಲಂಗಿಯ ಪ್ರಬಲವಾದ ಮಧುಮೇಹ-ವಿರೋಧಿ ಗುಣಲಕ್ಷಣಗಳು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉತ್ತೇಜಿಸುತ್ತದೆ, ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಡಿಪೋನೆಕ್ಟಿನ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಏರಿಳಿತಕ್ಕೆ ಕಾರಣವಾಗುವ ಹಾರ್ಮೋನ್ ಆಗಿದೆ. ಮೂಲಂಗಿಯು ಅಡಿಪೋನೆಕ್ಟಿನ್ ಅನ್ನು ನಿಯಂತ್ರಿಸುವ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಗ್ಲೂಕೋಸ್ ಹೋಮಿಯೋಸ್ಟಾಸಿಸ್ ಅನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
#ಪೈಲ್ಸ್: (Piles)ಪೈಲ್ಸ್ ಸಮಸ್ಯೆ ಇರುವವರಿಗೆ ಡಾಕ್ಟರುಗಳು ಸಾಮಾನ್ಯವಾಗಿ ಹಸಿ ಮೂಲಂಗಿ ಸೇವಿಸಲು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಅಂಶವಿದೆ. ಅಂದರೆ ಜೀರ್ಣವಾಗದ ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದೆ. ಹಾಗಾಗಿ ಉತ್ತಮ ನಿರ್ವಿಶೀಕರಣದ ಗುಣವಿರುವುದರಿಂದ ಪೈಲ್ಸ್ ರೋಗ ಲಕ್ಷಣಗಳನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ಇದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಜೀರ್ಣಕ್ರಿಯೆ ಮತ್ತು ವಿಸರ್ಜನಾ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ ಹಾಗೂ ಕ್ರಮೇಣ ಪೈಲ್ಸ್ ಸಮಸ್ಯೆಯನ್ನು ನಿವಾರಿಸುತ್ತದೆ.
#ನೈಸರ್ಗಿಕವಾದ ರೀತಿಯಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಜೊತೆಗೆ ನರಮಂಡಲಗಳಲ್ಲಿ ಕಂಡು ಬರುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ನೀರಿನಲ್ಲಿ ಒಣಗಿದ ಮೂಲಂಗಿ ಎಲೆಗಳ ಪುಡಿಯನ್ನು ಮಿಶ್ರಣ ಮಾಡಿ ನಿಯಮಿತವಾಗಿ ಸೇವನೆ ಮಾಡುವುದು ಪ್ರಯೋಜನ ನೀಡುತ್ತದೆ.
#ಮೂಲಂಗಿಗಳಲ್ಲಿ ಉತ್ತಮ ಪ್ರಮಾಣದ ಆಂಥೋಸೈಯಾನಿನ್ (anthocyanins) ಗಳಿವೆ. ಇವು ಹೃದಯದ ಕಾರ್ಯಕ್ಷಮತೆ ಸರಿಯಾದ ಕ್ರಮದಲ್ಲಿರಲು ನೆರವಾಗುತ್ತವೆ. ತನ್ಮೂಲಕ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತವೆ. ಇದರಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಸಿ, ಫೋಲಿಕ್ ಆಮ್ಲ ಮತ್ತು ಫ್ಲೇವನಾಯ್ಡುಗಳೂ ಹೃದಯದ ಆರೋಗ್ಯವನ್ನು ವೃದ್ದಿಸುತ್ತವೆ.
#ಪ್ರತಿದಿನ ಸಾಧ್ಯವಾದರೆ ಖಾಲಿ ಹೊಟ್ಟೆಯಲ್ಲಿ ಮೂಲಂಗಿ ಎಲೆಗಳ ರಸ ಸ್ವಲ್ಪ ಪ್ರಮಾಣದಲ್ಲಿ ಸೇವನೆ ಮಾಡಿ, ಇದು ಜಾಂಡೀಸ್ ಮಾತ್ರವಲ್ಲದೇ ಹೊಟ್ಟೆಯ ಒಳಗಿನ ಸಮಸ್ಯೆಗಳಿಗೆ ಸಹ ಪರಿಹಾರ ನೀಡುತ್ತದೆ.
#ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.