ಎಳ್ಳುವಿನ ಆರೋಗ್ಯಕಾರಿ ಪ್ರಯೋಜನಳು!

ಎಳ್ಳು ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್, ಫೈಬರ್, ಕಾರ್ಬೋಹೈಡ್ರೇಟ್ಗಳು ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿದ್ದು, ಉತ್ತಮ ಆರೋಗ್ಯಕ್ಕೆ ಉಪಯುಕ್ತ. ಇದರ ಇತರ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.
#ಹೊಟ್ಟೆ ಉರಿ, ಅಸಿಡಿಟಿ ಸಮಸ್ಯೆ ಇರುವವರು, ಎಳ್ಳಿನ ಜ್ಯೂಸ್ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇದಕ್ಕೆ ಮಧುಮೇಹ ನಿಯಂತ್ರಿಸುವ ಗುಣವೂ ಇದೆಯಂತೆ. ಎಳ್ಳಿನಲ್ಲಿರುವ ಮ್ಯಾಗ್ನಿಷಿಯಂ ಅಂಶ ರಕ್ತದೊತ್ತಡವನ್ನು ನಿಯಂತ್ರಿಸುತ್ತದಂತೆ.
#ಎಳ್ಳು ನೋಡಲು ಪುಟ್ಟದಾಗಿರಬಹುದು. ಅದರಲ್ಲಿ ಅಡಗಿರುವ ಅಂಶ ಮಾತ್ರ ಅದ್ಭುತವಾಗಿರುತ್ತದೆ. ಇದರಲ್ಲಿ ಹೆಚ್ಚು ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು, ಜೀವಕೋಶದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
#ಚರ್ಮದ ಆರೋಗ್ಯಕ್ಕೆ:ಎಳ್ಳಿನಲ್ಲಿರುವ ಸತುವಿನ ಅಂಶ ಚರ್ಮದ ಆರೊಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಸೂರ್ಯನ ಕಿರಣದಿಂದ ಚರ್ಮ ಕಪ್ಪಾಗಿದ್ದರೆ ಎಳ್ಳನ್ನು ಸೇವಿಸಿ, ಇದರಿಂದ ಚರ್ಮ ಸುಕ್ಕು ಗಟ್ಟುವುದನ್ನು ತಪ್ಪಿಸಬಹುದು. ಚರ್ಮದ ಮೇಲಿನ ಗಾಯ , ಬಿರುಕು, ಕಲೆಗಳನ್ನು ಹೊಗಲಾಡಿಸಿ ತ್ವಚೆಯನ್ನು ಕೋಮಲಗೊಳಿಸಲು ಎಳ್ಳು ಸಹಕಾರಿ. ಮುಖದಲ್ಲಿ ಕಪ್ಪು ಕಲೆಯನ್ನು ಹೊಗಲಾಡಿಸಲು ಕಪ್ಪು ಎಳ್ಳನ್ನು ಹಾಲಲ್ಲಿ ನೆನೆಸಿ, ರುಬ್ಬಿ ಸಾಯಂಕಾಲ ಮುಖಕ್ಕೆ ಲೇಪಿಸಿಕೊಂಡು ಅರ್ಧಗಂಟೆ ಬಳಿಕ ಮುಖ ತೊಳೆಯಿರಿ ಇದರಿಂದ ತ್ವಚೆ ಇನ್ನಷ್ಟು ಕೋಮಲವಾಗುತ್ತದೆ.
#ಈ ಎಳ್ಳು ಜೀರ್ಣಕ್ರಿಯೆಗೆ ಸಹಕಾರಿ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿದ್ದು, ಜೊತೆ ಫೈಬರ್ ಇರುವುದರಿಂದ ನಿಮ್ಮ ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅಲ್ಲದೇ ಯಾವುದೇ ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ ಅದಕ್ಕೆ ಸಹ ಇದು ಮನೆಮದ್ದು.
#ಇದರ ಇನ್ನೊಂದು ಬಹುಮುಖ್ಯ ಪ್ರಯೋಜನವೆಂದರೆ ಹಾಲುಣಿಸುವ ತಾಯಂದಿರಿಗೆ ಹಾಲು ಹೆಚ್ಚಾಗಲು ಸಹಾಯ ಮಾಡುತ್ತದೆ. ಬಿ.ವಿಟಮಿನ್ , ಮ್ಯಾಗ್ನಿಶಿಯಂ, ಝಿಂಕ್ ಹೆಚ್ಚಿದ್ದು, ಇದು ತಾಯಂದಿರಿ ಹಾಗೂ ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.
#ತಲೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮತ್ತು ತಲೆ ಕೂದಲಿನ ಬೇರುಗಳಿಗೆ ಪೌಷ್ಟಿಕಾಂಶಗಳನ್ನು ಒದಗಿಸುವಲ್ಲಿ ಎಳ್ಳು ಕೆಲಸ ಮಾಡಲಿದೆ.ಎಳ್ಳಿನಲ್ಲಿ ಕಂಡುಬರುವ ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ತಲೆಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತವೆ. ನೆತ್ತಿಯ ಭಾಗಕ್ಕೆ ಮಾಯಿಶ್ಚರೈಸಿಂಗ್ ಗುಣಲಕ್ಷಣಗಳನ್ನು ಒದಗಿಸಿ ರಕ್ತಸಂಚಾರವನ್ನು ಹೆಚ್ಚು ಮಾಡುವಲ್ಲಿ ಎಳ್ಳು ನಮ್ಮ ದೇಹದಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತದೆ.
#ಮೂಳೆ ಗಟ್ಟಿಗೊಳ್ಳಲು ಎಳ್ಳಿನ ಲಾಡು ಸೇವಿಸುವುದು ಒಳ್ಳೆಯದು. ನ್ಯಾಚುರಲ್ ಆಗಿ ಮುಟ್ಟಾಗಲು ನೀವು ಎಳ್ಳನ್ನು ಸೇವಿಸಿಸಬಹುದು. ಪ್ರೀಪೋನ್ ಮಾತ್ರೆಗಿಂತ ಎಳ್ಳಿನ ಉಂಡೆ ಬೆಸ್ಟ್. ಹಾಗಂತ ಅಗತ್ಯಕ್ಕಿಂತ ಹೆಚ್ಚು ಎಳ್ಳಿನ ಲಾಡು ಸೇವಿಸಬೇಡಿ. ಇದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗಿ, ಆರೋಗ್ಯ ಏರುಪೇರಾಗುತ್ತದೆ. ಇನ್ನು ನಿಮಗೆ ಎಳ್ಳು ಸೇವಿಸಿದರೆ, ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.