ನಿಮ್ಮ ಮನೆಗಳ್ಳಲಿ ಇಲಿಗಳ ಕಾಟ ಹೆಚ್ಚಾಗಿದರೆ ಹೀಗೆ ಮಾಡಿ!

ಇಲಿಗಳು ಆಗಾಗ್ಗೆ ಮನೆಗೆ ಬಂದು ಕಾಟ ಕೊಡುತ್ತಲೇ ಇರುತ್ತವೆ. ಇವುಗಳಿಗೆ ಪ್ರತೀ ದಿನ ಆಹಾರ ದೊರಕುತ್ತಿದ್ದಲ್ಲಿ ಇವುಗಳನ್ನು ಮನೆಯಿಂದ ಓಡಿಸುವುದು ಕೊಂಚ ಪ್ರಯಾಸದ ಕೆಲಸವೇ ಸರಿ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಇವುಗಳನ್ನು ಮನೆಗೆ ಬರದಂತೆ ತಡೆಯಲು ನೀವು ಕೈಗೊಳ್ಳಬೇಕಾದ ಕೆಲವೊಂದು ಸುಲಭ ವಿಧಾನಗಳನ್ನು ತಿಳಿಸುತ್ತಿದ್ದೇವೆ.

ಈರುಳ್ಳಿ: ಈರುಳ್ಳಿಯ ಘಾಟಿನ ವಾಸನೆ ಮನುಷ್ಯರಿಗೂ ಸಹ ತಡೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಇಲಿಗಳಿಗೂ ಸಹ ಈರುಳ್ಳಿಯ ವಾಸನೆಯನ್ನು ತಡೆಯುವ ಶಕ್ತಿ ಇಲ್ಲ. ಈರುಳ್ಳಿಯನ್ನು ಬಳಸಿ ನೀವು ಸುಲಭವಾಗಿ ಇಲಿಗಳಿಂದ ಮುಕ್ತಿ ಪಡೆಯಬಹುದು. ಆದರೆ ಇದನ್ನು ಬಳಸುವ ಎಚ್ಚರವಾಗಿರಬೇಕು. ಏಕೆಂದರೆ ಈರುಳ್ಳಿ ಬೇಗನೆ ಕೊಳೆಯುತ್ತದೆ..

#ಇಲಿಗಳು ಮತ್ತು ಕೀಟಗಳನ್ನು ನಿವಾರಿಸಲು ಕೆಂಪು ಮೆಣಸಿನಕಾಯಿ ಅನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತದೆ. ಇಲಿಗಳು ಎಲ್ಲಿಂದ ಬರುತ್ತವೆ ಮತ್ತು ಅವುಗಳ ಅಡಗುದಾಣ ಎಲ್ಲಿದೆಯೋ ಅಲ್ಲಿಗೆ ಕೆಂಪು ಮೆಣಸಿನಕಾಯಿಯ ಪುಡಿಯನ್ನು ಸಿಂಪಡಿಸಿ.

#ದೀಪ ಹತ್ತಿಸಲು ಬಳಕೆ ಮಾಡುವ ಹತ್ತಿ ಅರಳೆ(ಕಾಟನ್ ಲಿಂಟ್) ಇಲಿಗಳ ಪಾಲಿಗೆ ಕಂಟಕವಾಗಿ ಕೆಲಸ ಮಾಡಬಲ್ಲದು ಎನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಶೇಂಗಾ, ತೆಂಗಿನೆಣ್ಣೆಯಲ್ಲಿ ಅದ್ದಿದ ಹತ್ತಿ ಅರಳೆಯನ್ನು ಇಲಿಗಳು ಓಡಾಡುವ ಜಾಗದಲ್ಲಿ ಇಟ್ಟರೆ ಸಾಕು. ಎಣ್ಣೆಯ ಸುವಾಸನೆಗೆ ಬರುವ ಇಲಿಗಳು ಹತ್ತಿ ಅರಳೆಯನ್ನು ಗಬಗಬನೆ ತಿನ್ನುತ್ತವೆ. ಹತ್ತಿ ಅರಳೆ ತಿಂದ ಇಲಿಯ ಜೀರ್ಣಾಂಗವ್ಯೆಹ ಬ್ಲಾಕ್ ಆಗಿ ಇಲಿ ಅಲ್ಲಿಂದ ಪರಾರಿಯಾಗುತ್ತದೆ. ಮಾತ್ರವಲ್ಲ, ಸ್ವಲ್ಪ ಸಮಯದ ಬಳಿಕ ಸಾಯುತ್ತದೆ. ‘ಆದರೆ ಹತ್ತಿ ಅರಳೆ ತಿಂದ ಇಲಿಗಳು ಆ ಪ್ರದೇಶದಲ್ಲೇ ಸಾಯಬೇಕೆಂದೇನಿಲ್ಲ. ಸ್ಥಳದಿಂದ ಕಾಲ್ಕಿತ್ತ ಮೇಲೆ ದೂರದ ಪ್ರದೇಶದಲ್ಲಿ ಸಾವನ್ನಪ್ಪುತ್ತವೆ.

#ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನ ಚನ್ನಾಗಿ ಜಜ್ಜಿ ಅದನ್ನ ಒಂದು ಲೋಟ ನೀರಿನಲ್ಲಿ ಬೆರೆಸಿ ಇಲಿಗಳು ಜಾಸ್ತಿ ಇರುವ ಸ್ಥಳದಲ್ಲಿ ಈ ನೀರನ್ನ ಹಾಕಬೇಕು, ಇನ್ನು ಈ ಬೆಳ್ಳುಳ್ಳಿಯ ಗಾಟಿಗೆ ಇಲಿಗಳು ಓಡಿ ಹೋಗುತ್ತದೆ.

#ಪೀನಟ್ ಬಟರ್: ಪೀನೆಟ್ ಬಟರ್ ನಿಮಗೆಷ್ಟು ಇಷ್ಟವೋ ನಿಮ್ಮ ಮನೆಯಲ್ಲಿರುವ ಇಲಿ ಜೇಡ ಕೂಡ ಅದನ್ನು ಇಷ್ಟಪಡುತ್ತವೆ. ಆದರೆ ಇದರ ವಾಸನೆಯು ಇಲಿಗೆ ಆಗುವುದಿಲ್ಲ ಮತ್ತು ಜೇಡನನ್ನು ಇದು ಬಂಧಿಸುತ್ತದೆ. ಇದು ಅಂಟಿನ ಗುಣವನ್ನು ಹೊಂದಿದ್ದು ಇಲಿಯು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನು ಜೇಡ ಕೂಡ ಇದರ ಮೇಲೆ ಹಾದುಹೋದರೆ ಅದು ಕೂಡ ಅಂಟಿಕೊಳ್ಳುತ್ತದೆ.

#ನಸುಗುನ್ನಿ ಗಿಡಗಳ ಬಳಿ ಹೋದಾಗ ಅದರ ಕಾಯಿ ಮೈಗೆ ತಗುಲಿದರೆ ಸಾಕು, ಮೈಯೆಲ್ಲ ತುರಿಕೆ ಉಂಟಾಗುವ ಅನುಭವ ಆಗುತ್ತದೆ ಯಲ್ಲವೇ? ಇದರ ಮೇಲೆ ಬೆಳೆದಿರುವ ಮೃದುವಾಗಿರುವಂಥ ಕೂದಲಿಂದಲೇ ಹೀಗೆ ಆಗುವುದು. ಇದೇ ಕೂದಲನ್ನು ಇಲಿಗಳ ಮೇಲೂ ಹಲವು ರೈತರು ಪ್ರಯೋಗಿಸಿದ್ದಾರೆ. ಇದರ ಕಾಯಿ ಕಿತ್ತು ಇಲಿಗಳ ಬಿಲದ ದ್ವಾರದಲ್ಲಿ ಹಾಕಿಟ್ಟುನೋಡಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group