ಕೊಬ್ಬರಿ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರ ಪ್ರಯೋಜನ!

ಕೊಬ್ಬರಿ ಎಣ್ಣೆಯ ನಿಯಮಿತ ಸೇವನೆಯಿಂದ ದೇಹ ಕಂಪಿಸುವ ಪಾರ್ಕಿನ್ಸನ್ ಖಾಯಿಲೆ ಹತೋಟಿಗೆ ಬರುತ್ತದೆ ಎಂದು ಆಧುನಿಕ ಸಂಶೋಧನೆಗಳು ಹೇಳುತ್ತವೆ. ಚರ್ಮದ ಮೃದುತ್ವ ಹೆಚ್ಚಿ ಸೌಂದರ್ಯ ವೃದ್ಧಿಸಲು ಕೂಡಾ ಕೊಬ್ಬರಿ ಎಣ್ಣೆ ಒಳ್ಳೆಯದು.. ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ.

#ಚಳಿಗಾಲದಲ್ಲಿ ಕೈಕಾಲುಗಳಲ್ಲಿ ಬಿರುಕು ಕಾಣಿಸುತ್ತಿದ್ದರೆ ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಲಗಿದರೆ ಕೈಕಾಲು ಒಡೆಯುವುದು ನಿಲ್ಲುತ್ತದೆ.

#ಚಯಾಪಚಯ ಕ್ರಿಯೆ ವೃದ್ಧಿಸುತ್ತದೆಕೊಬ್ಬರಿ ಎಣ್ಣೆ ಚಯಾಪಚಯ ಕ್ರಿಯೆಗೆ ಚಿಕಿತ್ಸೆ ನೀಡುತ್ತದೆ, ಗ್ಲುಕೋಸ್ ಸಹಿಷ್ಣುತೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿರುವ ಅಧಿಕ ತೂಕವನ್ನು ಸಹ ಇದು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೀರ್ಮಾನಿಸಿವೆ. ಅಲ್ಲದೆ, ಅಧಿಕ ತೂಕದ ಮಹಿಳೆಯರಲ್ಲಿ ಮಧ್ಯಮ ಟ್ರೈಗ್ಲಿಸರೈಡ್ ಗಳ ದೀರ್ಘಕಾಲೀನ ಸೇವನೆಯು ದೀರ್ಘ-ಸರಪಳಿ ಟ್ರೈಗ್ಲಿಸರೈಡ್ ಗಳ ಸೇವನೆಗಿಂತ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.

#ಬಾಯಿಯ ಆರೋಗ್ಯಕ್ಕೂ ಕೂಡ ಕೊಬ್ಬರಿ ಎಣ್ಣೆ ಉತ್ತಮ ಆಯುರ್ವೇದ ಔಷಧಿಯಾಗಿದೆ. ಬಾಯಿಗೆ ಎಣ್ಣೆ ಹಚ್ಚಿ ನಂತರ ಅದನ್ನು ಹೊರಹಾಕುವುದರಿಂದ ವಸಡಿನ ಸಮಸ್ಯೆ ತಪ್ಪಿಸಬಹುದು,

#ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಗೆ ಎರಡು ಚಮಚ ಹಾಲು ಬೆರೆಸಿ ಬೆರೆಸಿ ಮುಖಕ್ಕೆ ಲೇಪಿಸಿ ಮಾಲೀಶು ಮಾಡಬೇಕು. ಮರುದಿನ ಬೆಳಿಗ್ಗೆ ಬೆಚ್ಚಗೆ ನೀರಲ್ಲಿ ತೊಳೆದರೆ ತೇವಾಂಶ ವೃದ್ಧಿಯಾಗಿ ಒಣಚರ್ಮದ ಕಾಂತಿಯು ಹೆಚ್ಚುತ್ತದೆ. ನಿತ್ಯ ಬಳಕೆ ಹಿತಕರ.

#ಧೂಳಿನ ‘ಅಲರ್ಜಿ’ ಇರುವವರು ದಿನದಲ್ಲಿ ೫-೬ ಬಾರಿ ಕೊಬ್ಬರಿ ಎಣ್ಣೆಯ ಬಾಟಲಿಯಲ್ಲಿ ೧ ಕಿರುಬೆರಳನ್ನು ಮುಳುಗಿಸಿ ಅದಕ್ಕೆ ಅಂಟಿದ ಎಣ್ಣೆಯನ್ನು ಮೂಗಿನ ಹೊಳ್ಳೆಗಳ ಒಳಗೆ ಹಚ್ಚಬೇಕು. ಇದರಿಂದ ಮೂಗಿನಲ್ಲಿ ಬರುವ ಧೂಳು ಎಣ್ಣೆಗೆ ಅಂಟುವುದರಿಂದ ಅದು ಉಸಿರಾಟದ ಮಾರ್ಗದಲ್ಲಿ ಹೋಗುವುದಿಲ್ಲ ಮತ್ತು ಧೂಳಿನಿಂದಾಗುವ ತೊಂದರೆಯು ಕಡಿಮೆಯಾಗುತ್ತದೆ.

#ಕೊಬ್ಬರಿ ಎಣ್ಣೆಯು ಕೊಬ್ಬಿನಾಮ್ಲಗಳ ಮೂಲಕ ಚಯಾಪಚಯ ಕ್ರಿಯೆ, ಕೂದಲ ಬೆಳವಣಿಗೆ ಮತ್ತು ಚರ್ಮವನ್ನು ಸುಧಾರಿಸುತ್ತದೆ. ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡುವುದರ ಜೊತೆಗೆ, ತೆಂಗಿನ ಎಣ್ಣೆ ದೇಹದ ಕೊಬ್ಬನ್ನು (Body fat) ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group