ಹಲವು ಅನಾರೋಗ್ಯಕ್ಕೆ ಮದ್ದು ಈ ಕರಿಮೆಣಸು!

ಸಾಂಬಾರ ಪದಾರ್ಥಗಳಲ್ಲಿ ಒಂದಾದ ಕಾಳುಮೆಣಸು ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಕೂಡ ಅಷ್ಟೇ ಸಹಾಯಕವಾದುದು. ಪ್ರತಿನಿತ್ಯ ಅಡುಗೆಯಲ್ಲಿ ಖಾರಕ್ಕಾಗಿ ಬಳಸುವ ಪದಾರ್ಥಗಳಲ್ಲಿ ಕಾಳುಮೆಣಸು ಕೂಡ ಒಂದು.ಮೆಣಸಿನ ಪುಡಿಯ ಬದಲು ಕಾಳುಮೆಣಸು ಅಥವಾ ಕರಿ ಮೆಣಸನ್ನು ಬಳಸುವುದರಿಂದ ಸಾಕಷ್ಟು ಅನುಕೂಲತೆಗಳಿವೆ.ಕಾಳುಮೆಣಸು ಆಹಾರಕ್ಕೆ ಕೇವಲ ಫ್ಲೇವರ್ ನೀಡುವುದು ಮಾತ್ರವಲ್ಲ. ಇನ್ನೂ ಸಾಕಷ್ಟು ಉಪಯೋಗಗಳು ಇದರಲ್ಲಿವೆ. ಅವುಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

#ಕಾಳು ಮೆಣಸು ಸೇವನೆಯಿಂದ ತಲೆ ನೋವು ಕಡಿಮೆಯಾಗುತ್ತದೆ. ಇದಲ್ಲದೆ ಬಿಕ್ಕಳಿಕೆ ಬರುವುದು ನಿಲ್ಲುತ್ತದೆ. ಜೇನು ತುಪ್ಪದ ಜೊತೆ ಕಾಳು ಮೆಣಸಿನ ಪುಡಿಯನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವನೆ ಮಾಡುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

#ಕೆಮ್ಮು – ದಮ್ಮು, ನೆಗಡಿ, ಸೀನು ಇದ್ದಲ್ಲಿ ಇದರ ಚೂರ್ಣವನ್ನು ಕಲ್ಲುಸಕ್ಕರೆ, ಜೇನುತುಪ್ಪದೊಂದಿದೆ ಅರ್ಧ ಚಮಚ ದಿನಕ್ಕೆ ಎರಡು ಬಾರಿ ಸೇವಿಸಬೇಕು.

#ಸಾಕಷ್ಟು ಸಂಶೋಧನೆಗಳು ಹೇಳಿರುವ ಹಾಗೆ ಕಪ್ಪು ಮೆಣಸು ಕಾಳುಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಬಹುದು.ಆದರೆ ಇವುಗಳ ಸೇವನೆ ಮಾತ್ರ ನಿಯಂತ್ರಣದಲ್ಲಿರಬೇಕು. ಪ್ರತಿದಿನ ಒಂದರಿಂದ 2ಟೀಚಮಚ ದಷ್ಟು ಮಾತ್ರ ಕಪ್ಪು ಮೆಣಸನ್ನು ಸೇವನೆ ಮಾಡಬೇಕು.

#ಅಜೀರ್ಣ ತೆಯ ಸಮಸ್ಯೆಯನ್ನು ಎದುರಿಸುತ್ತಿರುವವರು ಕಾಳುಮೆಣಸನ್ನು ಪುಡಿಮಾಡಿಕೊಂಡು ಅದರ ಜೊತೆಗೆ ಬೆಲ್ಲವನ್ನು ಸೇರಿಸಿ ಅದನ್ನು ಉಂಡೆ ರೂಪದಲ್ಲಿ ಮಾಡಿಕೊಂಡು ಪ್ರತಿದಿನ ಸೇವಿಸುತ್ತಾ ಬಂದರೆ ಅಜೀರ್ಣದ ಸಮಸ್ಯೆ ಕಡಿಮೆಯಾಗುತ್ತದೆ.

#ಮೊಡವೆ ನಿವಾರಣೆಗೆ ಒಳ್ಳೆಯದುಅರೇ ಇದೇನಿದು ಕಾಳು ಮೆಣಸು ಖಾರ ಮತ್ತು ಉರಿಯ ಗುಣವನ್ನು ಹೊಂದಿರುತ್ತದೆ. ಇದನ್ನು ಮೊಡವೆಗೆ ಹಚ್ಚಬಹುದಾ, ಎಂದರೆ ಹೌದು. ಕಾಳು ಮೆಣಸಿನಲ್ಲಿರುವ ಆಂಟಿ ಮೈಕ್ರೋವೆಲ್‌ ಗುಣದಿಂದ ಮೊಡವೆಗಳನ್ನು ನಿವಾರಿಸುತ್ತದೆ. ಕಾಳು ಮೆಣಸಿನ ಪುಡಿಯನ್ನು ರೋಸ್‌ ವಾಟರ್‌ ಅಥವಾ ನೀರಿನೊಂದಿಗೆ ಬೆರೆಸಿ ಮೊಡವೆ ಮೇಲೆ ಹಚ್ಚಿದರೆ ಮುಖದ ಮೇಲಿನ ಮೊಡವೆ ನಿವಾರಣೆಯಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group