ಕಾಮಕಸ್ತೂರಿಯಲ್ಲಿನ ಔಷದೀಯ ಗುಣಗಳು!

ಕಾಮಕಸ್ತೂರಿಯನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಉಪಯೋಗಿಸುತ್ತಿದ್ದರು. ಇದು ಕೂಡ ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿರುತ್ತದೆ. ಕಾಮಕಸ್ತೂರಿಯು ದೇಹಕ್ಕೆ ತಂಪನ್ನು ನೀಡುತ್ತದೆ. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಾಮಕಸ್ತೂರಿಯು ಅನೇಕ ರೋಗಗಳಿಗೆ ಮನೆಮದ್ದಾಗಿದೆ. ಇದರ ಬೀಜಗಳು ಮಾರ್ಕೆಟ್ ನಲ್ಲೂ ಲಭ್ಯವಿರುತ್ತದೆ. ಕಾಮಕಸ್ತೂರಿ ಬೀಜವು ಕೊಬ್ಬು, ಕಬ್ಬಿಣ ಮತ್ತು ನಾರಿನಂಶವನ್ನು ಹೊಂದಿದೆ. ಕಾಮಕಸ್ತೂರಿಯ ವೈಜ್ಞಾನಿಕ ಹೆಸರು ಒಸಿಮಮ್ ಬೆಸಿಲಿಕಮ್ ಈಗ ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ
#ಕಾಮಕಸ್ತೂರಿಯು ಅಜೀರ್ಣವನ್ನು ಹೋಗಲಾಡಿಸುತ್ತದೆ:ಅಜೀರ್ಣದ ಸಮಸ್ಯೆ ಇಂದ ಬಳಲುತ್ತಿರುವವರು, ಮನೆಯಲ್ಲಿ ಕಾಮಕಸ್ತೂರಿ ಗಿಡ ಬೆಳೆಸಿದರೆ, ತುಂಬಾ ಪ್ರಯೋಜನವಿದೆ. ಕಾಮಕಸ್ತೂರಿಯ ಹೂವುಗಳನ್ನು ನೀರಿನಲ್ಲಿ ಅರೆದು, ನಂತರ ಅದನ್ನು ಶುದ್ಧವಾಗಿ ಸೋಸಿಕೊಂಡು, ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ, ಗಂಟೆಗೊಮ್ಮೆ 1/2 ಚಮಚ ರಸವನ್ನು ತೆಗುದುಕೊಳ್ಳುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
#ಕಾಮಕಸ್ತೂರಿ ಬೀಜಗಳನ್ನು 2-3 ಗಂಟೆ ನೆನೆಸಿ, 1 ಲೋಟ ಹಾಲು ಮತ್ತು 1 ಚಮಚ ಸಕ್ಕರೆ ಜೊತೆ ಸೇವಿಸಿದರೆ ಪಿತ್ತ ಶಮನವಾಗುತ್ತದೆ.-ಬೀಜವನ್ನು ತಣ್ಣೀರಿನಲ್ಲಿ ನೆನೆಸಿ, ನುಣ್ಣಗೆ ರುಬ್ಬಿ ಶೋಧಿಸಿ ಸೇವಿಸುವುದರಿಂದ ರಕ್ತ ಭೇದಿ ನಿಲ್ಲುತ್ತದೆ.
#ಇದು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ನಿಮ್ಮ ಡಯಟ್ ಚಾರ್ಟ್ ನಲ್ಲಿ ಸೇರಿಸುವುದನ್ನು ಮರೆಯಬೇಡಿ.ರಾತ್ರಿಯ ವೇಳೆ ಒಂದು ಲೋಟ ನೀರಿಗೆ ಒಂದು ಚಮಚ ತುಳಸಿ ಬೀಜವನ್ನು ನೆನಸಿ ಮರುದಿನ ಕುಡಿಯಿರಿ.ಹೀಗೆ ನಿಯಮಿತವಾಗಿ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ತೂಕ ಇಳಿಕೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು.
#ಕೂದಲ ಆರೋಗ್ಯಕ್ಕೆ ಒಳ್ಳೆಯದು:ಸಬ್ಜಾ ಬೀಜಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಈ ಪ್ರೊಟೀನ್ ಕೂದಲು (Hair) ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಬ್ಜಾ ಸೀಡ್ ಎಣ್ಣೆಯಿಂದ ನೀವು ತಲೆಹೊಟ್ಟು ತೊಡೆದುಹಾಕಬಹುದು. ನೀವು ಬಳಸುವ ಎಣ್ಣೆಯನ್ನು ಸಬ್ಜಾ ಬೀಜದ ಪುಡಿಯೊಂದಿಗೆ ಸೇರಿಸಿ, ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿ. ಇದರಿಂದ ಸುಂದರವಾದ ಮತ್ತು ಬಲವಾದ ಕೂದಲು ನಿಮ್ಮದಾಗುತ್ತದೆ.
#ಸಬ್ಜಾ ಬೀಜಗಳಲ್ಲಿರುವ ಕರಗುವ ಒಂದು ರೀತಿಯ ಫೈಬರ್ ಪೆಕ್ಟಿನ್, ಇದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕರುಳಿನಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ಕೂಡ ತಡೆಯುತ್ತದೆ. ಬಹುಪಯೋಗಿ ಕಾಮಕಸ್ತೂರಿ ಬೀಜಗಳನ್ನು ದಿನನಿತ್ಯದಲ್ಲಿ ಬಳಸಿ ಉಪಯೋಗ ಪಡೆಯಬಹುದು.