ಮೂಳೆಗಳನ್ನು ಬಲಗೊಳಿಸುವ ಆಹಾರಗಳು!

ಚಿಕ್ಕವಯಸ್ಸಿನಲ್ಲಿಯೇ ಮೂಳೆಗಳ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿದರೆ ವಯಸ್ಸಾದಾಗ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವುದು ಕಡಿಮೆಯಾಗುತ್ತದೆ. ಮೂಳೆಗಳು ಗಟ್ಟಿಮುಟ್ಟಾಗಿ ಇದ್ದರೆ ಮಾತ್ರ ದೇಹ ಗಟ್ಟಿಮುಟ್ಟಾಗಿರಲು ಸಾಧ್ಯ.ಮೂಳೆಗಳ ಆರೋಗ್ಯ ಕಾಪಾಡಲು ಕೆಲವೊಂದು ಸರಳವಾದ ಸೂಪರ್ ಟಿಪ್ಸ್ ಇಲ್ಲಿದೆ.
#ಹಾಲು: ಹಾಲು ಮತ್ತು ಇತರ ಡೈರಿ ಉತ್ಪನ್ನಗಳಾದ ತುಪ್ಪ, ಚೀಸ್, ಬೆಣ್ಣೆ ಇತ್ಯಾದಿಗಳು ಮೂಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬಲವಾಗಿಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ನಾವು ಹಾಲು ಕುಡಿಯುವುದರಿಂದ, ದೇಹದ ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಲು ಇದು ಸಾಕಷ್ಟು ಸಹಾಯ ಮಾಡುತ್ತದೆ.
#ಬಾದಾಮಿ ಬೀಜಗಳು ಡ್ರೈಫ್ರೂಟ್ಸ್ ಜಾತಿಗೆ ಸೇರಿದ ಆಹಾರ ಪದಾರ್ಥಗಳು. ಇವುಗಳಲ್ಲಿ ಶಕ್ತಿಯ ಪ್ರಮಾಣ ಸಾಕಷ್ಟಿದೆ. ಅಂದರೆ ಮನುಷ್ಯನಿಗೆ ವಿಪರೀತ ಶಕ್ತಿಯನ್ನು ಬಾದಾಮಿ ಬೀಜಗಳು ಕೊಡುತ್ತವೆ.ಹಾಗಾಗಿ ವಯಸ್ಸಾದವರು ಹಲ್ಲಿಲ್ಲದೇ ಹೋದರೂ ಕೂಡ ಬಾದಾಮಿ ಪೌಡರ್ ಮಾಡಿ ಹಾಲಿಗೆ ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು. ಇದರಿಂದ ದುಪ್ಪಟ್ಟು ಶಕ್ತಿ ದೇಹಕ್ಕೆ ಸಿಗುವುದು ಮಾತ್ರ ವಲ್ಲದೆ ಮೂಳೆಗಳಿಗೂ ಸಹ ಕ್ಯಾಲ್ಸಿಯಂ ಬಲ ಸಿಗುತ್ತದೆ.
#ನಟ್ಸ್ ಸೇವಿಸುವುದರಿಂದ ಮೂಳೆಗಳ ಜತೆಗೆ ಆರೋಗ್ಯಕ್ಕೂ ಪ್ರಯೋಜನಕಾರಿ. ವಾಲ್ನಟ್ಸ್, ಬಾದಾಮಿ ಮತ್ತು ಬ್ರೈಜಲ್ ನಟ್ಸ್ ಸೇರಿದಂತೆ ಹಲವು ಡ್ರೈ ಫ್ರೂಟ್ಸ್ ಸೇವಿಸುವುದು ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಟ್ಸ್ನಲ್ಲಿ ಕ್ಯಾಲ್ಸಿಯಂ, ಉತ್ಕರ್ಷಣ ನಿರೋಧಕಗಳು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ರಂಜಕದಂತಹ ಪೋಷಕಾಂಶಗಳಿವೆ.
#ಮೊಟ್ಟೆಯ ಹಳದಿ ಲೋಳೆ: ಮೊಟ್ಟೆ ಪ್ರೋಟೀನ್ನ ಉತ್ತಮ ಮೂಲ. ವಿಶೇಷವಾಗಿ ಮೊಟ್ಟೆಯ ಹಳದಿ ಲೋಳೆ. ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸುವ ಮಾರ್ಗಗಳನ್ನು ನೀವು ಹುಡುಕುತ್ತಿದ್ದರೆ, ಮೊಟ್ಟೆಯ ಹಳದಿ ಲೋಳೆ ತಿನ್ನುವುದು ಉತ್ತಮ.
#ತರಕಾರಿಗಳು:ಪ್ರತಿದಿನ ಹಸಿರು ಸೊಪ್ಪು, ತರಕಾರಿಗಳು ಪೌಷ್ಠಿಕಾಂಶದ ಉತ್ತಮ ಮೂಲ. ಕೋಸುಗಡ್ಡೆ ಮತ್ತು ಎಲೆಕೋಸು ಕ್ಯಾಲ್ಸಿಯಂನ ಅತ್ಯುತ್ತಮ ಮೂಲ. ಬಾದಾಮಿ ಮತ್ತು ಸೋಯಾ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚು ಕಂಡು ಬರುತ್ತದೆ. ಪಾಲಕ್ ನಂತಹ ಹಸಿರು ಸೊಪ್ಪುಗಳು ಮೂಳೆಗಳಿಗೆ ಬಹಳ ಮುಖ್ಯ. 1 ಕಪ್ ಪಾಲಕ್ ನಲ್ಲಿ ದೈನಂದಿನ ಅಗತ್ಯದ 25% ನಷ್ಟು ಕ್ಯಾಲ್ಸಿಯಂ ಇದೆ ಎನ್ನಲಾಗುತ್ತದೆ.
#ಪನ್ನೀರ್: ಹಾಲಿನ ಉತ್ಪನ್ನ ಪನೀರ್ (paneer). ಪನೀರ್ ನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಬೇಕಾದಷ್ಟಿರುತ್ತದೆ. ಮೂಳೆ ಗಟ್ಟಿಯಾಗಿರಬೇಕಾದರೆ ನಿಮ್ಮ ಆಹಾರದಲ್ಲಿ ಪನೀರ್ ಇರಬೇಕು.