ಕಣ್ಣಿನ ದೃಷ್ಟಿ ಸಮಸ್ಯೆಗೆ ಈ ಮನೆ ಮದ್ದು!

ಆಧುನಿಕ ಯುಗದಲ್ಲಿ ಕಂಪ್ಯೂಟರ್, ಮೊಬೈಲ್ ಗಳನ್ನು ಬಿಟ್ಟು ಬದುಕುವುದು ಸಾಧ್ಯವೇ ಇಲ್ಲ. ಅದರಲ್ಲೂ ಮಕ್ಕಳಿಗಂತೂ ಮೊಬೈಲ್ ಅಥವಾ ಟ್ಯಾಬ್ ಗಳಲ್ಲಿ ಆಟವಾಡುವುದು ಬಿಟ್ಟರೆ ಬೇರೆ ಆಟಗಳೇ ಗೊತ್ತಿಲ್ಲ ಎಂಬಂತಾಗಿದೆ. ಹೀಗಾಗಿ ಕಣ್ಣು ಈ ಎಲೆಟ್ರಾನಿಕ್ ವಸ್ತುಗಳ ಕಿರಣಗಳಿಗೆ ತೆರೆದುಕೊಂಡು ಅತ್ಯಂತ ಬೇಗ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಕಣ್ಣುಗಳಿಗೆ ’ಚಾಲೀಸ್’ ಗಿಂತಲೂ ಮೊದಲೇ ಕನ್ನಡಕ ಬರುವುದು ಸಹಜ.ಯಾವುದೇ ಸಮಸ್ಯೆ ಬಂದ ಮೇಲೆ ಅದಕ್ಕೆ ಪರಿಹಾರ ಹುಡುಕುವುದಕ್ಕೂ ಮೊದಲು ಸಮಸ್ಯೆ ಬರುವ ಮೊದಲೇ ಮುಂಜಾಗ್ರತೆಯನ್ನು ತೆಗೆದುಕೊಳ್ಳುವುದು ಸೂಕ್ತ. ನಾವೀಗ ಹೇಳುವ ಮನೆಮದ್ದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಬಲ್ಲ ಮನೆಮದ್ದು..

#ಮೀನುಗಳು:ನಿಮ್ಮ ಆಹಾರದಲ್ಲಿ ಒಮೆಗಾ -3 ಕೊಬ್ಬಿನ ಆಮ್ಲಗಳ ತುಂಬಿಕೊಂಡಿರುವ ಮೀನನ್ನು ಸೇರಿಸಿ. ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಮೀನನ್ನು ಸೇವಿಸಿ. ಇದು ಒಣ-ಕಣ್ಣಿನ ಸಿಂಡ್ರೋಮ್ ತಪ್ಪಿಸಲು ಉತ್ತಮ ಮಾರ್ಗವಾಗಿದೆ.

#ಕಣ್ಣುಗಳ ದೃಷ್ಟಿ ಹೆಚ್ಚಿಸಲು , ಆಹಾರದಲ್ಲಿ ಜಿಂಕ್ ಅಂಶವಿರುವ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಜಿಂಕ್​ ಕೊರತೆಯು ರಾತ್ರಿ ಕುರುಡುತನದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಒಯಿಸ್ಟರ್, ಮಾಂಸ, ಕುಂಬಳಕಾಯಿ ಬೀಜಗಳು, ಕಡಲೆ ಮತ್ತು ಬಾದಾಮಿ ಹೆಚ್ಚಾಗಿ ಸೇರಿಸಿ.

#ಕಣ್ಣಿನ ವಿಶ್ರಾಂತಿ ಅಗತ್ಯ : ಕಣ್ಣುಗಳನ್ನು ಆರಾಮಗೊಳಿಸಲು ಅತ್ಯುತ್ತಮ ವಿಧಾನಗಳು: ಸರಿಯಾದ ನಿದ್ರೆ . ಪಡೆಯುವುದು ಮತ್ತು 20-20-20 ನಿಯಮವನ್ನು ಅನುಸರಿಸುವುದು.ಅಂದರೆ ಪ್ರತಿ 20 ನಿಮಿಷಕ್ಕೊಮ್ಮೆ ಲ್ಯಾಪ್ ಟಾಪ್ ಪರದೆಯನ್ನು ದಿಟ್ಟಿಸದೆ 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿ ಏನನ್ನೋ ನೋಡಬೇಕು.

#ನೀರು:ನೀರು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ. ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಡಿಹೈಡ್ರೇಶನ್ ನಿಂದ ದೃಷ್ಟಿಯು ಸುಧಾರಿಸುತ್ತದೆ.

# ಬಾದಾಮಿ ಬೀಜಗಳು. ಸೋಂಪು ಹಾಗೂ ಕಲ್ಲು ಸಕ್ಕರೆ. ಮೊದಲಿಗೆ ಬಾದಾಮಿ ಮತ್ತು ಸೊಂಪನ್ನು ಚೆನ್ನಾಗಿ ಹುರಿದು ಕೊಳ್ಳಿ. ನಂತ್ರ ಹುರಿದ ಬಾದಾಮಿ ಸೋಂಪು ಕಾಳು ಮತ್ತು ಕಲ್ಲು ಸಕ್ಕರೆ ಹಾಕಿ ಚೆನ್ನಾಗಿ ಪೌಡರ್ ಆಗಿ ರುಬ್ಬಿಕೊಳ್ಳಿ. ನಂತ್ರ ಇದನ್ನು ಒಂದು ಏರ್ ಕಂಟೇನರ್ ನಲ್ಲಿ ಹಾಕಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ. ಇನ್ನೂ ಬಳಕೆ ಮಾಡುವುದು ಹೇಗೆ ಅಂದ್ರೆ ಒಂದು ಲೋಟ ಹಾಲಿಗೆ ಎರಡು ಚಮಚದಷ್ಟು ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ರಾತ್ರಿ ಮಲಗುವ ಮುನ್ನ ಕುಡಿಯಬೇಕು. ದೊಡ್ಡವರಿಗೆ ಎರಡು ಚಮಚ ಬಳಕೆ ಮಾಡಿದ್ರೆ ಚಿಕ್ಕ ಮಕ್ಕಳಿಗೆ ಒಂದು ಚಮಚ ಬಳಕೆ ಮಾಡಿ. ಹೀಗೆ ಮಾಡಿದ್ರೆ ಕಣ್ಣಿನ ದೃಷ್ಟಿ ಸರಿಯಾಗಿ ಕಾಣಿಸುತ್ತದೆ ಒಮ್ಮೆ ಪ್ರಯತ್ನ ಮಾಡಿ ನೋಡಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group