ಮೂಗಿನಲ್ಲಿ ರಕ್ತಸ್ರಾವ ಉಂಟಾಗುವ ಸಮಸ್ಯೆಗೆ ಈ ರೀತಿ ಮಾಡಿ!

ಸಾಮಾನ್ಯವಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾದರೆ ಮತ್ತು ಅಥವಾ ಬೇಸಿಗೆಕಾಲದಲ್ಲಿ ಸಾಮಾನ್ಯವಾಗಿ ಮೂಗಿನಲ್ಲಿ ರಕ್ತಸ್ರಾವ ಆಗುತ್ತದೆ. ಈ ಸಮಸ್ಯೆಗೆ ಏನು ಮಾಡಬೇಕು ಅನ್ನೋ ಚಿಂತೆ ಬಿಡಿ ಇದಕ್ಕೆ ಇಲ್ಲಿದೆ ನಿಮ್ಮ ಮನೆಯಲ್ಲಿ ಸರಳ ಮದ್ದು.
#ರಕ್ತಸ್ರಾವವನ್ನು ತಡೆಯುವುದಕ್ಕೂ ಮುನ್ನ, ರಕ್ತಸ್ರಾವ ಆಗದಂತೆ ಎಚ್ಚರವಹಿಸುವುದು ತುಂಬಾ ಮುಖ್ಯ. ಇದಕ್ಕಾಗಿ ಬೆರಳಿನ ಉಗುರುಗಳನ್ನು ನಿಯಮಿತವಾಗಿ ಟ್ರಿಮ್ ಮಾಡಬೇಕು. ಅವುಗಳ ಉದ್ದ ಬೆಳೆದರೆ, ಮೂಗು ಸ್ವಚ್ಛಗೊಳಿಸುವಾಗ ಉಗುರು ತಾಗಿ ರಕ್ತಸ್ರಾವವಾಗಬಹುದು. ಇನ್ನೊಂದೆಡೆ ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ದೇಹವನ್ನು ಹೈಡ್ರೇಟ್ ಆಗಿಡಲು ಪ್ರಯತ್ನಿಸಿ.
#ಮೂಗಿನ ಮುಂಭಾಗದಲ್ಲಿ ತುರಿಸಿಕೊಂಡಾಗ ಮೂಗಿನ ಮೂಂಭಾಗದ ಪದರವು ಒಡೆದಿರುತ್ತದೆ. ಅತಿಯಾದ ಶೀತ ಅಥವಾ ಉಷ್ಣತೆಯಿಂದಾಗಿ ಮೂಗಿನ ಪದರವು ಒಡೆದುಕೊಳ್ಳುವುದು. ಆ ಸಮಯದಲ್ಲಿ ಮಲಗಬಾರದು. ಹತ್ತು ನಿಮಿಷಗಳ ಕಾಲ ಬಾಯಲ್ಲಿಯೇ ಉಸಿರಾಡುವ ಪ್ರಕ್ರಿಯೆಯನ್ನು ಮುಂದುವರಿಸಬೇಕು. ಕೋಲ್ಡ್ ಕಂಪ್ರೆಶರ್ ಅನ್ನು ಮೂಗಿನ ಮೇಲ್ಭಾಗದಲ್ಲಿ ಇಟ್ಟುಕೊಳ್ಳಬೇಕು. ಆಗ ಮೂಗಿನ ರಕ್ತ ಸ್ರಾವ ನಿಲ್ಲುವುದು. ಹಾಗೂ ನಿಲ್ಲದೆ ಹೊದರೆ ಅಥವಾ ಪದೇ ಪದೇ ಅಧಿಕ ರಕ್ತ ಸ್ರಾವ ಉಂಟಾದರೆ ವೈದ್ಯರಲ್ಲಿ ತಪಾಸಣೆಗೆ ಒಳಗಾಗಿ.
#ರಕ್ತ ಸ್ರಾವವಾದರೆ ತಲೆಗೆ ತಣ್ಣೀರು ಸುರಿಯಿರಿ. ಇದು ರಕ್ತಸ್ರಾವವನ್ನು ನಿಲ್ಲಿಸಬಹುದು. ಬಿಸಿಲಲ್ಲಿ ನಡೆದಾಡುವುದರಿಂದ ಮೂಗಿನಲ್ಲಿ ರಕ್ತಸ್ರಾವವಾದರೆ ತಲೆಗೆ ತಣ್ಣೀರು ಸುರಿದರೆ ಮೂಗಿನಿಂದ ರಕ್ತಸ್ರಾವ ನಿಲ್ಲುತ್ತದೆ.
#ಮೂಗನ್ನು ಐದು ನಿಮಿಷಗಳ ಕಾಲ ಹಿಡಿದುಕೊಳ್ಳಿ. ರಕ್ತಸ್ರಾವ ನಿಂತ ಬಳಿಕವೂ ಮತ್ತೆ ಐದು ನಿಮಿಷಗಳ ಕಾಲ ಹಿಡಿದುಕೊಳ್ಳಿ. ಅಲ್ಲಿಯವರೆಗೆ ರಕ್ತ ಬರುತ್ತಲೇ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
#ನಿಮಗೆ ಮೂಗಿನಿಂದ ರಕ್ತ ಬರುತ್ತಿದ್ದರೆ ಈರುಳ್ಳಿ ರಸವನ್ನು ಹತ್ತಿಯಲ್ಲಿ ಅದ್ದಿ ಮೂಸಿದರೆ ರಕ್ತ ನಿಲ್ಲುತ್ತದೆ. ಹಾಗು ಮೂಗು ಹಾಗೂ ಹಣೆ ಮೇಲೆ ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ಸೇರಿಸಿ ಕಲಸಿ ಮಾಡಿದ ಪೇಸ್ಟ್ ಅನ್ನು ಪ್ಯಾಕ್ ಮಾಡಿದರೆ ರಕ್ತ ಬರುವುದು ನಿಲ್ಲುತ್ತದೆ.