ರಾಗಿಯ ಪರಿಣಾಮಕಾರಿ ಪ್ರಯೋಜನ ತಿಳಿಯಿರಿ!

ಸಾಮಾನ್ಯವಾಗಿ ಭಾರತದಲ್ಲಿ ಜನರು ಇದನ್ನು ಧಾನ್ಯವಾಗಿ ಬಳಸುತ್ತಾರೆ. ಆದರೆ ನಾವು ಕೆಲವು ತಿಂಗಳು ರಾಗಿಯನ್ನು ಸೇವಿಸಿದರೆ, ಇದರಿಂದ ನಮ್ಮ ದೇಹಕ್ಕೆ ಅಪಾರ ಲಾಭಗಳಾಗುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಆದ್ದರಿಂದ ರಾಗಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ.
#ಕ್ಯಾನ್ಸರ್‌ನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ: ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವುದನ್ನು ಕಡಿಮೆಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಸ್ತಿಯಾಗಿರುವುದರಿಂದ ರಾಗಿಯಲ್ಲಿರುವ ಫೈಬರ್ ಅಂಶವು 30% ರಷ್ಟು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.
#ದೇಹದ ಹೆಚ್ಚಿನ ಬಿಸುಪನ್ನು ಕಡಿಮೆ ಮಾಡುವಲ್ಲಿ ಇದು ಸಹಾಯಕಾರಿ. ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿಸುವ ಶಕ್ತಿ ರಾಗಿಗಿದೆ. ಬೇಸಿಗೆ ಸಮಯದಲ್ಲಿ ಕಂಡುಬರುವ ಹಲವಾರು ರೋಗಗಳಿಗೆ ಪರಿಣಾಮಕಾರಿ ಮದ್ದು ಸಹ ರಾಗಿಯಾಗಿದೆ.
#ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡಲು ರಾಗಿಯಲ್ಲಿ ಇರುವಂತಹ ನಾರಿನಾಂಶವು ನೆರವಾಗಲಿದೆ. ಅಕ್ಕಿ ಮತ್ತು ಬೇರೆ ಧಾನ್ಯಗಳಿಗೆ ಹೋಲಿಕೆ ಮಾಡಿದರೆ ಇದರಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿದೆ.ಇದರಿಂದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳೂ ದೂರವಾಗುವುದು. ರಾಗಿ ತಿಂದರೆ ಅದು ಹೊಟ್ಟೆ ತುಂಬಿದಂತೆ ಮಾಡುವುದು ಹಾಗೂ ಪದೇ ಪದೇ ತಿನ್ನುವುದನ್ನು ಇದು ಕಡಿಮೆ ಮಾಡುವುದು. ಪಾಲಿಫೆನಾಲ್ ಅಂಶವು ರಾಗಿಯಲ್ಲಿದ್ದು, ಇದು ಮಧುಮೇಹಿಗಳಿಗೆ ಒಳ್ಳೆಯದು.
#ರಕ್ತಹೀನತೆಗೆ ಪರಿಹಾರ: ರಾಗಿ ನೈಸರ್ಗಿಕ ಕಬ್ಬಿಣಾಂಶದ ಉತ್ತಮ ಮೂಲವಾಗಿದೆ. ಇದು ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಹೊಂದಿರುವ ಜನರಿಗೆ ವರದಾನವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿ ಕಬ್ಬಿಣಾಂಶವನ್ನು ತುಂಬಲು ನೀವು ರಾಗಿಯನ್ನು ಸೇವಿಸುವುದು ಉತ್ತಮ. ಇದನ್ನು ಹಿಟ್ಟು, ಮೊಳಕೆ ಅಥವಾ ಇನ್ನಾವುದೇ ಖಾದ್ಯವಾಗಿ ಬಳಸಬಹುದು.
#ರಾಗಿಯ ಇನ್ನೊಂದು ಪರಿಣಾಮಕಾರಿ ಪ್ರಯೋಜನವೆಂದರೆ ನಿಮ್ಮ ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ. ಇದರಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇದ್ದು, ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಆವಶ್ಯಕವಾಗಿರುವ ಕೆಲವೊಂದು ಪ್ರಮುಕ ಅಂಶಗಳನ್ನು ಇದು ಹೊಂದಿದೆ.