ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆಷ್ಟು ನೀರು ಕುಡಿಯಬೇಕು?

ಉತ್ತಮ ಆರೋಗ್ಯಕ್ಕಾಗಿ ಹಾಗೂ ಚರ್ಮವನ್ನು ತಾಜಾವಾಗಿಡಲು ನಿತ್ಯ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಕುಡಿಯುವುದು ಅತಿ ಮುಖ್ಯ. ಹಾಗಾದರೆ, ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂದು ತಿಳಿಯೋಣ.
#ಒಬ್ಬರ ದೇಹಕ್ಕೆ ಅಗತ್ಯವಿರುವ ನೀರಿನ ಪ್ರಮಾಣವು ಅವರವರ ವಯಸ್ಸು, ದೈಹಿಕ ಚಟುವಟಿಕೆ, ಲಿಂಗ, ತಾಪಮಾನ ಮತ್ತು ದೇಹದ ತೂಕವನ್ನು ಅವಲಂಬಿಸಿರುತ್ತದೆ ಎನ್ನುತ್ತದೆ ಹಾರ್ವರ್ಡ್ ವಿಶ್ವವಿದ್ಯಾಲಯ,ಆದರೆ ಪ್ರತಿ ಗಂಟೆಗೆ 2 ರಿಂದ 3 ಕಪ್ ನೀರು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ. ಹವಾಮಾನವು ಬಿಸಿಯಾಗಿದ್ದರೆ ಅಥವಾ ನೀವು ವ್ಯಾಯಾಮ ಮಾಡುತ್ತಿದ್ದರೆ, ಈ ಪ್ರಮಾಣವು ಹೆಚ್ಚಾಗಬಹುದು. ಅದೇ ಸಮಯದಲ್ಲಿ, ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 2-3 ಲೀಟರ್ ನೀರನ್ನು ಕುಡಿಯಬೇಕು. ದೇಹದ ಬಗ್ಗೆ ಅರಿತುಕೊಳ್ಳಲು ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು ಒಳ್ಳೆಯದು.
#ನೀವಿರುವ ಪ್ರದೇಶದಲ್ಲಿ ಸೆಕೆಯಿದ್ಯಾ ಅಥವಾ ಚಳಿಯ ವಾತಾವರಣವಿದೆಯಾ?ಅನ್ನೋದನ್ನು ನೀರಿನ ಪ್ರಮಾಣ ಅವಲಂಬಿಸಿರುತ್ತದೆ. ಗರ್ಭಿಣಿಯಾಗಿದ್ದರೆ ಅಥವಾ ಚಿಕಿತ್ಸೆ ಪಡೆಯುತ್ತಿದ್ದರೆ ಅವರ ನೀರಿನ ಅಗತ್ಯವೇ ಬೇರೆಯಾಗಿರುತ್ತದೆ.ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಸಿನ್ ಪ್ರಕಾರ ಮಹಿಳೆಯರು ದಿನಕ್ಕೆ 2.69 ಲೀಟರ್ ನೀರು ಕುಡಿಯಬೇಕು. ನಮಗೆ ಎಷ್ಟು ನೀರು ಬೇಕು ಅನ್ನೋದನ್ನು ಬಾಯಾರಿಕೆ ಮೇಲೂ ಅಳೆಯಬಹುದು. ಅಥ್ಲೀಟ್ ಆಗಿದ್ದಲ್ಲಿ ಸ್ವಲ್ಪ ಜಾಸ್ತಿ ನೀರು ಕುಡಿಯಬೇಕಾಗುತ್ತದೆ.ಹಾಗಂತ ಅಗತ್ಯವಿಲ್ಲದಿದ್ದರೂ ಅಧಿಕ ನೀರು ಕುಡಿಯಬೇಡಿ. ಇದು ನಿಮ್ಮ ಪ್ರಾಣಕ್ಕೇ ಅಪಾಯ ಉಂಟುಮಾಡಬಹುದು. ಹಾಗಾಗಿ ದಿನಕ್ಕೆ ಇಷ್ಟೇ ನೀರು ಕುಡಿಯಬೇಕೆಂದು ಲೆಕ್ಕ ಇಟ್ಟುಕೊಳ್ಳಬೇಡಿ. ಬಾಯಾರಿಕೆ ಆದಾಗಲೆಲ್ಲ ನೀರು ಕುಡಿಯಿರಿ.
#ಮಲಬದ್ಧತೆ ಸಮಸ್ಯೆಯನ್ನು ತಡೆಯುವುದಲ್ಲದೆ. ಬಿಪಿ ಮಟ್ಟವನ್ನು ನಿಯಂತ್ರಿಸುವ ಕೆಲಸವನ್ನು ನೀರು ಮಾಡುತ್ತದೆ. ಕೀಲುಗಳ ಆರೋಗ್ಯಕ ರಕ್ಷಿಸುವ ಜೊತೆಗೆ ದೇಹದ ಭಾಗಗಳು ಮತ್ತು ಅಂಗಾಂಶಗಳನ್ನು ರಕ್ಷಿಸುತ್ತದೆ. ದೇಹದ ಉಷ್ಣತೆಯನ್ನು ನಿರ್ವಹಿಸುವ ಕೆಲಸವನ್ನು ನೀರು ಮಾಡುತ್ತದೆ. ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವ ಜೊತೆಗೆ ನಮ್ಮ ದೇಹ ಆರೋಗ್ಯವಾಗಿರುವಂತೆ ಮಾಡಲು ನೀರು ಬೇಕೇಬೇಕು.
#ಡಾಕ್ಟರ್ ಗಳ ಪ್ರಕಾರ ಒಂದು ದಿನಕ್ಕೆ ಒಬ್ಬ ಮನುಷ್ಯ ಆರೋಗ್ಯವಾಗಿ ಇರಬೇಕು ಅಂದರೆ ಕನಿಷ್ಟ ಪಕ್ಷ ಮೂರು ಲೀಟರ್ ನೀರನ್ನು ಕುಡಿಯಬೇಕು. ಆದರೆ ದಿನಕ್ಕೆ ಮೂರು ಲೀಟರ್ ನೀರು ಕುಡಿಯಬೇಕು ಅಂದರೆ ಕೆಲವರಿಗೆ ಹೇಗೆ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎನ್ನುವುದು ತಿಳಿಯದೆ ಒಟ್ಟಾರೆಯಾಗಿ ನೀರು ಕುಡಿದು ಮುಗಿಸುತ್ತಾರೆ. ಒಂದೇ ಸಲಕ್ಕೆ ಇಂದು ಲೀಟರ್ ನೀರನ್ನು ಕುಡಿಯುವುದಕ್ಕಿಂತ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಅಷ್ಟಷ್ಟು ಮಾತ್ರ ನೀರನ್ನು ಕುಡಿದರೆ ಒಳ್ಳೆಯದು.