ಅತಿಯಾದ ತೇಗುವಿಕೆ ಸಮಸ್ಯೆ ಕಾಡುತ್ತಿದ್ದರೆ ಹೀಗೆ ಮಾಡಿ

ತೇಗುವಿಕೆ ಸಾಮಾನ್ಯವಾಗಿ ನೀವು ಏನಾದರೂ ಹೆಚ್ಚು ತಿಂದ ಮೇಲೆ ಅಥವಾ ಕುಡಿದ ಮೇಲೆ ಕಂಡುಬರುತ್ತದೆ. ಹಾಗಾಗಿ ಈ ಕೆಳಗಿನವುಗಳನ್ನು ಪಾಲಿಸುವ ಮೂಲಕ ನಿಮ್ಮ ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಅನವಶ್ಯಕ ಗಾಳಿಯು ಸರಾಗವಾಗಿ ಹೊರ ಹೋಗುವಂತೆ ಉಪಚರಿಸಿಕೊಳ್ಳಿ.

#ಊಟವಾದ ಮೇಲೆ ನಿಧಾನವಾಗಿ ನಡೆಯಿರಿ ಅಥವಾ ಅತಿ ಹಗುರವಾಗಿ ಏರೋಬಿಕ್ ವ್ಯಾಯಾಮ ಮಾಡಿ. ಇದರಿಂದ ಅಪಚನವನ್ನು ತಡೆಗಟ್ಟಬಹುದಾಗಿದ್ದು ಇದರಿಂದ ಉಂಟಾಗುತ್ತಿದ್ದ ತೇಗುವಿಕೆಯನ್ನು ತಡೆಯಬಹುದು.

#ಸೋಂಪು ಮತ್ತು ಏಲಕ್ಕಿಯನ್ನು (Cardamom) ತಿನ್ನುವುದರಿಂದ ಕೂಡಾ ಹುಳಿ ತೇಗು ಸಮಸ್ಯೆ ನಿವಾರಣೆಯಾಗುತ್ತದೆ. ಏಲಕ್ಕಿ ಮತ್ತು ಸೋಂಪು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಇವೆರಡನ್ನೂ ತಿನ್ನುವುದರಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ

#ಊಟದ ನಂತರ ಶುಂಠಿ ಚಹಾ ಸೇವನೆಯು ನಿಮಗೆ ತೇಗಿನಿಂದ ಹೊರಬರುವಂತೆ ಸಹಕರಿಸುತ್ತದೆ. ಶುಂಠಿಯು ಗ್ಯಾಸ್ಟ್ರೋಇಂಟಸ್ಟೈನಲ್‌ನಲ್ಲಿರುವ ಕಿರಿಕಿರಿ ಉಪಶಮನವಾಗುವಂತೆ ಮಾಡಿ ಹೊಟ್ಟೆಯ ಆ್ಯಸಿಡ್ ಹಿಂತಿರುಗಿ ಅನ್ನನಾಳದ ಮೂಲಕ ಮತ್ತೆ ಮೇಲಕ್ಕೆ ಏರುವುದನ್ನು ತಡೆಯುವುದರಿಂದ ನಿಮಗೆ ತೇಗು ಉಂಟಾಗುವುದಿಲ್ಲ.

#ಮೆಂತೆ. ಮೆಂತೆಯನ್ನು (fenugreek) ರಾತ್ರಿಯಿಡೀ ನೀರಿನಲ್ಲಿ ನೆನೆಸಬೇಕು. ಮೆಂತೆ ನೆನೆಸಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಮಾಡುವುದರಿಂದ ಹುಳಿ ತೇಗಿನ ಸಮಸ್ಯೆ ನಿವಾರಣೆಯಾಗುತ್ತದೆ.

#ಆದಷ್ಟು ಗ್ಯಾಸ್ಟ್ರಿಕ್‌ ಆಗದಂತೆ ನೋಡಿಕೊಳ್ಳಿ. ಆಗಾಗ ಬಿಸಿ ನೀರನ್ನು ಕುಡಿಯುವುದು, ಜೀರಿಗೆ, ಸೋಂಪಿನ ಕಾಳಿನಂತಹ ಪದಾರ್ಥಗಳನ್ನ ಸೇವನೆ ಮಾಡುವ ಮೂಲಕ ಆಹಾರ ಸರಿಯಾಗಿ ಜೀರ್ಣವಾಗುವಂತೆ ಗಮನವಹಿಸಬೇಕು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group