ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು!

ದಾಳಿಂಬೆ ಹಣ್ಣು ಅದರಲ್ಲೂ ದಾಳಿಂಬೆ ಹಣ್ಣಿನ ಜ್ಯೂಸ್ ಅಂದ್ರೆ ಎಲ್ಲರಿಗೂ ಇಷ್ಟ . ಕೆಂಪು ಬಣ್ಣದ ದಾಳಿಂಬೆ ಹಣ್ಣು ಅಥವಾ ಜ್ಯೂಸ್ ನೋಡಿದರೆ ಬಾಯಲ್ಲಿ ನೀರೂರದೇ ಇರದು. ಹಾಗೆಯೇ ದಾಳಿಂಬೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದನ್ನೂ ಮಾಡುತ್ತದೆ. ಅದರಂತೆ ದಾಳಿಂಬೆ ಹಣ್ಣಿನ ಸೇವನೆ ಮತ್ತು ಅದರ ಜ್ಯೂಸ್ ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ತಿಳಿದುಕೊಳ್ಳೊಣ…
#ಹೃದಯ ಸಂಬಂಧಿ ಕಾಯಿಲೆಗೆ :ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದಾಳಿಂಬೆಯು ಪ್ಯೂನಿಕಲಾಜಿನ್ಸ್ ಅಥವಾ ಎಲಾಜಿಟಾನಿನ್ ಎಂಬ ಉತ್ತಮ ಪ್ರಮಾಣದ ಪಾಲಿಫಿನಾಲ್ ಸಂಯುಕ್ತಗಳನ್ನು ಹೊಂದಿದೆ. ಈ ಉತ್ಕರ್ಷಣ ನಿರೋಧಕಗಳು ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಗೆ ಪ್ರಯೋಜನವನ್ನು ನೀಡುತ್ತವೆ, ಕೊಲೆಸ್ಟ್ರಾಲ್ ಮತ್ತು ಪ್ಲೇಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
#ಇತ್ತೀಚಿನ ದಿನಗಳಲ್ಲಿ ದೇಹದ ತೂಕ ಹಾಗೂ ಇದರಿಂದಾಗಿ ಆವರಿಸುವ ಬೊಜ್ಜಿನ ಸಮಸ್ಯೆ ಯಿಂದಾಗಿ ಹೆಚ್ಚಿನವರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಸರಿಯಾದ ವ್ಯಾಯಾಮ ಮತ್ತು ಕಠಿಣ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ತೂಕ ಇಳಿಸಿಕೊಳ್ಳಬಹುದು.
#ಜ್ಞಾಪಕ ಶಕ್ತಿ ಹೆಚ್ಚಳ :ಪ್ರತಿ ದಿನ ದಾಳಿಂಬೆ ಜ್ಯೂಸ್ ಕುಡಿಯುದರಿಂದ ರಸವನ್ನು ಸೇವಿಸಿದರೆ ನಮ್ಮ ಸ್ಮರಣೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಇದರ ಸೇವನೆ ತುಂಬಾ ಉತ್ತಮವಾಗಿರುತ್ತದೆ.
#ದಾಳಿಂಬೆ ರಸ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಲ್ಲಿನ ಫೈಬರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಬಹಳ ಸಹಾಯಕ. ಫೈಬರ್ ನಿಮ್ಮ ಜೀರ್ಣ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ, ಅಜೀರ್ಣದಂತಹ ಯಾವುದೇ ಸಮಸ್ಯೆಗೆ ದಾಳಿಂಬೆ ರಸ ಸೇವನೆ ಉತ್ತಮ ಪರಿಹಾರ.
#ಈ ಜ್ಯೂಸ್ ಉರಿಯೂತದ ಸೈಟೊಕಿನ್‌ಗಳ ರಚನೆಯ ಮೇಲೆ ಮಧ್ಯಮ ಪರಿಣಾಮವನ್ನು ಬೀರುತ್ತವೆ. ನೀವು ರುಮಟಾಯ್ಡ್ ಸಂಧಿವಾತ, ಉರಿಯೂತದ ಕರುಳಿನ ಕಾಯಿಲೆ ಅನುಭವಿಸುತ್ತಿದ್ದರೆ ಈ ಜ್ಯೂಸ್ ನಿಮಗೆ ಸಹಾಯ ಮಾಡುತ್ತದೆ. ಟೆಸ್ಟ್ ಟ್ಯೂಬ್ ಮತ್ತು ಮಾನವ ಅಧ್ಯಯನಗಳು ದಾಳಿಂಬೆ ಸಾರವು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ.