ಪುನರ್ ಪುಳಿ ಜ್ಯೂಸ್ ಕುಡಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು!

ಆಹಾರದ ಜೊತೆಗೆ ನೀರಿನ ಪ್ರಮಾಣ ಕೂಡ ದೇಹಕ್ಕೆ ಮಹತ್ವದ್ದಾಗಿರುತ್ತದೆ. ಹಾಗಾಗಿ ಆಗಾಗ ಜ್ಯೂಸ್ ಸೇವಿಸುವುದು ಬಹಳ ಒಳ್ಳೆಯದು. ಇವತ್ತೊಂದು ನಾವಿಲ್ಲಿ ಕಲರ್ ಫುಲ್ ಆಗಿರುವ ಜ್ಯೂಸ್ ಒಂದನ್ನು ತಿಳಿಸಿಕೊಡುತ್ತಿದ್ದೇವೆ. ಅದುವೇ ಪುನರ್ ಪುಳಿ ಜ್ಯೂಸ್ ಇದರ ಪ್ರಯೋಜನ ಈ ಕೆಳಗೆ ಪಟ್ಟಿ ಮಾಡಲಾಗಿದೆ

#ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ:ಪುನರ್ಪುಳಿ ರಸವು ಉತ್ಕರ್ಷಣ ಪ್ರಮಾಣವನ್ನು ಕಡಿಮೆ ಮಾಡಲು ಹೆಸರುವಾಸಿ ಮತ್ತು ಇದು ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ಇದರಿಂದಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹಿಯಾಗಿದ್ದರೆ ರಸದಲ್ಲಿ ಸಕ್ಕರೆ ಸೇರಿಸುವುದನ್ನು ತಪ್ಪಿಸಿ.

#ಪುನರ್‍ಪುಳಿ/ ಕೋಕಮ್ ಅಧಿಕ ಪೋಷಕಾಂಶಗಳನ್ನು ಒಳಗೊಂಡಿರುವ ಹಣ್ಣು. ಜೀವಸತ್ವಗಳ ಆಗರವಾದ ಈ ಹಣ್ಣು ಮಾಲಿಕ್ ಆಮ್ಲ, ಸಿಟ್ರಿಕ್ ಆಮ್ಲ ಮತ್ತು ಕಾಬ್ರ್ಸ್ ಗಳನ್ನು ಒಳಗೊಂಡಿದೆ. ಇದರಲ್ಲಿ ವಿಟಮಿನ್ ಬಿ, ಮ್ಯಾಂಗನೀಸ್, ಪೊಟ್ಯಾಸಿಯಮ್, ಡಯೆಟರಿ ಫೈಬರ್ ಮತ್ತು ಗಾರ್ಸಿನಾಲ್ ಗಳನ್ನು ಒಳಗೊಂಡಿರುತ್ತದೆ. ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಇದರ ಪಾನೀಯವನ್ನು ಅಥವಾ ಸಾರುಗಳನ್ನು ಸೇವಿಸುವುದರಿಂದ ಮಗುವಿನ ಉತ್ತಮ ಆರೋಗ್ಯಕ್ಕೆ ಸಹಾಯವಾಗುವುದು.

#ಪುನರ್ ಪುಳಿಯಲ್ಲಿ ಇರುವ ಅದ್ಭುತ ಔಷಧೀಯ ಗುಣ ಎಂದರೆ ಉರಿಯೂತವನ್ನು ನಿವಾರಿಸುವುದು. ಅಲರ್ಜಿ, ನೋವು, ದದ್ದು, ಸುಟ್ಟ ಗಾಯ ಮತ್ತು ಎದೆಯುರಿಯಂತಹ ಸಮಸ್ಯೆಗಳು ಇದ್ದರೆ ಈ ಹಣ್ಣನ್ನು ನೇರವಾಗಿ ಬಳಸಬಹುದು. ಎಲ್ಲಾ ಸಮಸ್ಯೆಗಳು ಬಹು ಬೇಗ ಶಮನವಾಗುವುದು. ಚರ್ಮದಲ್ಲಿ ತುರಿಕೆ, ಕಲೆ ಹಾಗೂ ಶುಷ್ಕತೆಯಿಂದ ಒಡೆಯುವುದನ್ನು ತಡೆಯುವುದು.

#ಹೃದಯಕ್ಕೆ ಒಳ್ಳೆಯದು:ಕೊಕುಮ್ ಉರಿಯೂತ ನಿವಾರಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ, ಇದು ಹೃದಯಕ್ಕೆ ಸಂಬಂಧಿಸಿದ ರೋಗಗಳ ಅಪಾಯದಿಂದ ದೇಹವನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಇದು ಕ್ಯಾನ್ಸರ್ ಮತ್ತು ಸಂಧಿವಾತವನ್ನು ನಿಭಾಯಿಸುವಲ್ಲಿ ಸಹ ಪರಿಣಾಮಕಾರಿಯಾಗಿದೆ.

#ಇದರ ಎಲೆಗಳನ್ನು ನೀರಲ್ಲಿ ಕುದಿಸಿ ಆ ನೀರಿನಿಂದ ಹಿತ್ತಾಳೆ, ತಾಮ್ರ, ಚಿನ್ನ, ಬೆಳ್ಳಿಯ ವಸ್ತುಗಳನ್ನು ತೊಳೆದರೆ ಅವು ಮಿರಿ ಮಿರಿ ಮಿಂಚುತ್ತವೆ. ಕರಾವಳಿಯಲ್ಲಿ ಬಿರಿಂಡ ಎಂದು ಸಿಗುತ್ತಿದ್ದ ಶರಬತ್ತು ಇದರದ್ದೇ! ತುಳುವಿನಲ್ಲಿ ಪುನರ್ ಪುಳಿ, ಮಲೆಯಾಳದಲ್ಲಿ ಪಣಂಪುಳಿ, ಹಿಂದಿಯಲ್ಲಿ ಕೋಕಮ್, ಸಂಸ್ಕೃತದಲ್ಲಿ ವೃಕ್ಷಾಮ್ಲ, ಕನ್ನಡದಲ್ಲಿ ಮುರುಗಲ, ಮುರುಗನ ಹುಳಿ ಎನ್ನುವ ಹೆಸರುಗಳು ಇದಕ್ಕೆ! ಒಂದು ಲೊಟ ಬಿಸಿ ನೀರಿಗೆ ಕಡಲೆ ಕಾಳಿನಷ್ಟು ಎಣ್ಣೆ ಹಾಕಿ ಕುಡಿದರೆ ಆಮಶಂಕೆಗೆ ಔಷಧಿ. ಮರದ ತೊಗಟೆಯ ತಣ್ಣನೆ ಕಷಾಯದಿಂದ ಪಾರ್ಶ್ವವಾಯು ಆದ ಜಾಗಕ್ಕೆ ಹಚ್ಚಿದರೆ ಶಮನವಾಗುತ್ತದೆ.

ನೆನಪಿಡಿ- ಮಾರುಕಟ್ಟೆಯಲ್ಲಿ ಕೋಕಂ ಪುಡಿಯೂ ಲಭ್ಯವಿರುತ್ತದೆ. ಆದರೆ ಅದು ಜ್ಯೂಸ್ ಗೆ ಅಷ್ಟು ಉತ್ತಮವಾಗುವುದಿಲ್ಲ. ಹಾಗಾಗಿ ನಿಮಗೆ ಒಣಗಿಸಿದ ಕೋಕಂ ಸಿಪ್ಪೆಗಳು ಸಿಕ್ಕರೆ ಖರೀದಿಸಿ ಅಥವಾ ತಾಜಾ ಹಣ್ಣುಗಳು ಸಿಕ್ಕರೆ ಬೇಸಿಗೆಯಲ್ಲಿ ಖರೀದಿಸಿ ಒಣಗಿಸಿ ಇಟ್ಟುಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ತಾಜಾತನಕ್ಕೆ ಬೆಲೆ ನೀಡುವುದು ಒಳ್ಳೆಯದು. ಆರೋಗ್ಯಕ್ಕೆ ಅನೇಕ ರೀತಿಯ ಲಾಭ ಮಾಡುವ ಇವುಗಳ ಸಂಗ್ರಹ ಪ್ರತಿಯೊಂದು ಮನೆಯಲ್ಲೂ ಇದ್ದರೆ ಪ್ರಿಸರ್ವ್ ಮಾಡಲಾಗಿರುವ ಜ್ಯೂಸ್ ಗಳನ್ನು ಖರೀದಿಸುವುದು ತಪ್ಪುತ್ತದೆ. ಮಕ್ಕಳಿಗೆ ವಾರಕ್ಕೊಮ್ಮೆ ಈ ಜ್ಯೂಸ್ ಮಾಡಿ ಕೊಡುವುದು ಬಹಳ ಒಳ್ಳೆಯದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group