ಸೌತೆಕಾಯಿಯನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?

ಸೌತೆಕಾಯಿ ಅನ್ನೋದು ಆರೋಗ್ಯಕ್ಕೆ ಒಳ್ಳೆಯ ನೈಸರ್ಗಿಕ ಗುಣಗಳನ್ನು ಹೊಂದಿರುವಂತ ತರಕಾರಿಯಾಗಿದೆ ಆದ್ರೆ ಕೆಲವರು ಸೌತೆಕಾಯಿಯನ್ನು ಮಿತವಾಗಿ ಬಳಸಿ ಹಿತವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಾರೆ, ಇನ್ನು ಕೆಲವರು ಅತಿಯಾಗಿ ಸೇವನೆ ಮಾಡಿ ಅನಾರೋಗ್ಯಕ್ಕೆ ಹೀಡಗುತ್ತಾರೆ. ಸೌತೆಕಾಯಿಯನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ.
#ನಿರ್ಜಲೀಕರಣ: ಅತಿಯಾದ ಸೌತೆಕಾಯಿ ಸೇವನೆಯೂ ನಿಮ್ಮ ದೇಹದಲ್ಲಿ ನೀರಿನಂಶದ ಕೊರತೆಯನ್ನು ಮಾಡಬಹುದು ಎಂಬುದು ಗೊತ್ತೆ. ಇದು ದೇಹದ ಅಸಮತೋಲನಕ್ಕೆ ಕಾರಣವಾಗಬಹುದು.
#ರಾತ್ರಿಯ ಸಮಯದಲ್ಲಿ ಬಾರಿ ಆಹಾರಗಳೊಂದಿಗೆ ಸೌತೆಕಾಯಿಗಳನ್ನು ಎಂದಿಗೂ ಸೇರಿಸಿಕೊಳ್ಳಬೇಡಿ. ಏಕೆಂದರೆ ಇದು ಜೀರ್ಣಾಂಗವ್ಯೂಹದಲ್ಲಿ ಎರಡುಪಟ್ಟು ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಸೌತೆಕಾಯಿಯನ್ನು ಯಾವಾಗಲೂ ಲಘು ಆಹಾರ ಸೇವಿಸುವುದರ ಜೊತೆಗೆ ಸೇವಿಸಬಹುದು. ಸೌತೆಕಾಯಿಗಳು ಜೀರ್ಣಿಸಿಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಸೌತೆಕಾಯಿಗಳನ್ನು ಸಾಮಾನ್ಯವಾಗಿ ನೀವು ಮಲಗುವ ಮೂರು ಅಥವಾ ನಾಲ್ಕು ಗಂಟೆಗಳಿಗೆ ಮುಂಚಿತವಾಗಿ ಸೇವಿಸಿ. ಸೌತೆಕಾಯಿಗಳನ್ನು ಯಾವುದೇ ಕಾರಣಕ್ಕೂ ಒಂದೇ ಬಾರಿಗೆ ಸೇವಿಸುವುದು ಉತ್ತಮವಲ್ಲ.
#ಹಾನಿಕಾರಕ ಮೇಣದ ಲೇಪನ:ಸೌತೆಕಾಯಿಗಳು ಬಹಳ ದುರ್ಬಲವಾದ ಅಥವಾ ಸೂಕ್ಷ್ಮವಾದ ತರಕಾರಿ, ಅಂದರೆ ಅವು ಸುಲಭವಾಗಿ ಮುರಿಯಬಹುದು. ಇದು ರೈತರಿಗೆ ಸಮಸ್ಯೆಯನ್ನು ತಂದೊಡ್ಡುತ್ತದೆ, ಆದ್ದರಿಂದ ಹೆಚ್ಚಿನ ರೈತರು ಬೆಳೆಯುವ ಅಥವಾ ಕೀಳುವ ಹಂತದಲ್ಲಿ ಸೌತೆಕಾಯಿಯ ಮೇಲೆ ಮೇಣ ಮಾಡುತ್ತಾರೆ. ಈ ಮೇಣದ ಲೇಪನವು ಸೌತೆಕಾಯಿಯನ್ನು ಕೀಟಗಳಿಂದ ರಕ್ಷಿಸುತ್ತದೆ ಮತ್ತು ಸಾಗಿಸುವಾಗ ಹಾನಿಯ ಅಪಾಯವನ್ನು ಕಡಿಮೆ ಮಾಡುತ್ತದೆ.ಆದರೆ ಲೇಪನಕ್ಕೆ ಬಳಸುವ ಮೇಣವು ಈಥೈಲ್ ಆಲ್ಕೋಹಾಲ್, ಸಾಬೂನುಗಳು ಮತ್ತು ಹಾಲಿನ ಕ್ಯಾಸೀನ್ ನಂತಹ ಸಂಯುಕ್ತಗಳಿಂದ ಮಾಡಲ್ಪಟ್ಟಿದೆ, ಈ ಹಾಲಿನ ಕ್ಯಾಸೀನ್ ಅಲರ್ಜಿಯಂಥ ಸಮಸ್ಯೆಯನ್ನು ಉಂಟುಮಾಡಬಹುದು.
#ಕೆಲವರು ಆಹಾರದ ಬಗ್ಗೆ ತುಂಬಾ ಸೂಕ್ಷ್ಮರಾಗಿರುತ್ತಾರೆ. ಏನಾದರೂ ಸ್ವಲ್ಪ ತಿನ್ನುತ್ತೀರಿ ಎಂದಾದಲ್ಲಿ ಅವು ಜೀರ್ಣಿಸುವುದಿಲ್ಲ. ಸೌತೆಕಾಯಿ ದೇಹದ ಆರೋಗ್ಯ ಲಾಭಗಳಿಗೆ ಅತ್ಯುತ್ತಮವಾಗಿದೆ, ಆದರೆ ಇದು ಹಾನಿಕಾರಕ ಆಹಾರವಾಗಿ ಮಾರ್ಪಡಬಹುದು. ಸೌತೆಕಾಯಿಯನ್ನು ಅತಿಯಾಗಿ ತಿನ್ನುವುದರಿಂದ ಹೊಟ್ಟೆಯುಬ್ಬರವಾಗಬಹುದು.