ನೀವು ಗ್ಯಾಸ್ಟ್ರಿಕ್ ಸಮಸ್ಯೆ ಹೊಂದಿದ್ದರೆ ಈ ಮನೆ ಮದ್ದುಗಳು!

ಹೊಟ್ಟೆಯಲ್ಲಿರುವ ಗ್ಯಾಸ್ ಹೊರಗೆ ಹೋದರೆ ಅಷ್ಟು ಸಮಸ್ಯೆ ಎನಿಸದು. ಅದು ಹೊಟ್ಟೆಯಲ್ಲಿಯೇ ಉಳಿದುಕೊಂಡಾಗ ಸಮಸ್ಯೆ ಅಧಿಕವಾಗುವುದು. ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟಾದಾಗ ಅದಕ್ಕೆ ಸುಲಭವಾದ ಮನೆಮದ್ದುಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
#ನೀವು ಗ್ಯಾಸ್ಟ್ರಿಕ್ ಸಮಸ್ಯೆ ಹೊಂದಿದ್ದರೆ, ಮೊದಲು ಉಪ್ಪು ಮತ್ತು ಅಜ್ವಾಯಿನ್ ತೆಗೆದುಕೊಳ್ಳಿ. ಅಜ್ವೈನ್ ಬೀಜಗಳು ಥೈಮೋಲ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ. ಇದು ಗ್ಯಾಸ್ಟ್ರಿಕ್ ರಸವನ್ನು ಸ್ರವಿಸುತ್ತದೆ. ಅಜ್ವೈನ್ ತಿನ್ನುವುದರಿಂದ ಜೀರ್ಣಕ್ರಿಯೆ ವೇಗ ಹೆಚ್ಚುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅರ್ಧ ಟೀ ಚಮಚ ಅಜ್ವಾಯಿನ್ ಪುಡಿ ಮಾಡಿ ಮತ್ತು ಸ್ವಲ್ಪ ಕಪ್ಪು ಉಪ್ಪಿನೊಂದಿಗೆ ಬೆರೆಸಿ ಮತ್ತು ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಕುಡಿಯಿರಿ. ಇದರಿಂದ ತಕ್ಷಣದ ಪರಿಹಾರ ದೊರೆಯುತ್ತದೆ.
#ಜೇನುತುಪ್ಪ ಸೇವನೆಯಿಂದ ಕೆಮ್ಮು ಮತ್ತು ಗಂಟಲಿನ ಉರಿಯೂತವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಕೂಡ ಉತ್ತಮ ಪರಿಹಾರ ಸಿಗಲಿದೆ.ಜೇನುತುಪ್ಪ ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಒಳಗೊಂಡಿರುವ ಕಾರಣ, ಕೇವಲ 5 ನಿಮಿಷದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರವಾಗುತ್ತದೆ.
#ಇಂಗು: ಗ್ಯಾಸ್ ಉತ್ಪಾದನೆ ಮಾಡುವ ಬ್ಯಾಕ್ಟೀರಿಯಾಗಳನ್ನು ಇಂಗು ನಾಶಪಡಿಸುತ್ತದೆ. ಹಾಗಾಗಿ ಬೆಚ್ಚಗಿನ ನೀರಿನಲ್ಲಿ ಚೂರೇ ಚೂರು ಇಂಗಿನಕಾಳನ್ನು ಹಾಕಿ, ನೀರನ್ನು ಕುಡಿಯುವುದರಿಂದ ಗ್ಯಾಸ್ ಉತ್ಪಾದನೆ ಕಡಿಮೆ ಮಾಡಬಹುದು.
#ಕೊಲೆಸ್ಟ್ರಾಲ್ ಮತ್ತು ಮಸಾಲೆ ಪದಾರ್ಥಗಳನ್ನು ತಿನ್ನುವುದು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು ಜೊತೆಗೆ ವ್ಯಾಯಾಮ ಮಾಡುವುದು ಹಾಗ ಬೆಳಿಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರು ಸೇವಿಸುವುದು ಅತ್ಯುತ್ತಮ ಎನ್ನಬಹುದಾಗಿದೆ.ಹೀಗೆ ನಾವು ನಮ್ಮ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.
#ಜೀರಿಗೆ ನೀರು. ಗ್ಯಾಸ್ಟ್ರಿಕ್ ಅಥವಾ ಗ್ಯಾಸ್ ಸಮಸ್ಯೆಗೆ ಜೀರಿಗೆ ನೀರು ಕುಡಿಯುವುದು ಉತ್ತಮ ಮನೆಮದ್ದು. ಜೀರಾ ಅಥವಾ ಜೀರಿಗೆ ಜೀವಾಣು ಗ್ರಂಥಿಗಳನ್ನು ಉತ್ತೇಜಿಸುವ ಸಾರಭೂತ ತೈಲಗಳನ್ನು ಒಳಗೊಂಡಿರುತ್ತದೆ. ಇದು ಆಹಾರದ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೆಚ್ಚುವರಿ ಅನಿಲದ ರಚನೆಯನ್ನು ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಎರಡು ಕಪ್ ನೀರಿಗೆ ಒಂದು ಟೀ ಚಮಚ ಜೀರಿಗೆ ಸೇರಿಸಿ, 10-15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ಕಾಲ ತಣಿಯಲು ಬಿಡಿ. ಊಟ ಆದ ನಂತರ ಈ ಜೀರಿಗೆ ನೀರನ್ನು ಸೇವಿಸಿ. ಆಗ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಪ್ರಕ್ರಿಯೆಯನ್ನು ಸುಲಭವಾಗಿ ತಡೆಯಬಹುದು.