ಪಾದಗಳು ಒಡೆಯುತ್ತಿದ್ದರೆ ಅದಕ್ಕಾಗಿ ಸುಲಭ ಪರಿಹಾರ!

ಪಾದಗಳು ಒಡೆಯುತ್ತಿದ್ದರೆ ಅದಕ್ಕಾಗಿ ಸುಲಭ ಪರಿಹಾರವನ್ನು ಮಾಡಿ, ಮೊದಲು ನೀವು ಮಾಡಬೇಕಿರುವ ವಿಧಾನ ಯಾವುದು ಆ ನಂತರ ಮಾಡಬೇಕಾದ ಪರಿಹಾರ ಏನು ಎಲ್ಲವನ್ನ ಕೂಡ ತಿಳಿಸುತ್ತೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು, ಈ ಮನೆಮದ್ದನ್ನು ಪಾದ ಒಡೆಯುವ ಪ್ರತಿಯೊಬ್ಬರು ಕೂಡ ಪಾಲಿಸಿ ಒಂದೆರಡು ದಿನಗಳಲ್ಲಿಯೇ ನಿಮ್ಮ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ತುಂಬ ಸುಲಭ ಹಾಗೂ ಪರಿಣಾಮಕಾರಿಯಾಗಿ ಫಲಿತಾಂಶ ಕೊಡುತ್ತದೆ ಈ ಮನೆಮದ್ದು.
#ಪಾದಗಳು ಒಡೆಯುವ ಸಮಸ್ಯೆಯಿಂದ ಪರಿಹಾರ ಪಡೆಯಲು ಎಲ್ಲರ ಮನೆಯಲ್ಲಿ ದೊರೆಯುವಂತಹ ಎಳ್ಳಿನ ಎಣ್ಣೆ ಬಳಕೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಗಾಯಗಳನ್ನು ಗುಣಪಡಿಸುವ ಗುಣ ಹೊಂದಿರುವ ಎಳ್ಳೆಣ್ಣೆಯಲ್ಲಿ ಹಲವಾರು ಪೋಷಕಾಂಶಗಳಿರುವ ಹಿನ್ನೆಲೆ ನೋವಿನಿಂದ ಪರಿಹಾರ ಪಡೆಯಬಹುದು. ಇದಲ್ಲದೇ ಕೊಬ್ಬರಿ ಎಣ್ಣೆಯನ್ನು ಕೂಡ ಪಾದ ಒಡೆದಾಗ ಬಳಕೆ ಮಾಡಬಹುದು.
#ಆ್ಯಪಲ್ ಸೀಡರ್ : ವಿನೇಗರ್ ಸೀಡರ್ ವಿನೇಗರ್ ನಲ್ಲಿ ಹಗುರವಾದ ಆಮ್ಲೀಯ ಗುಣವಿದೆ. ಇದು ಚರ್ಮವನ್ನು ನಯವಾಗಿಸಿ, ಸತ್ತ ಚರ್ಮಗಳನ್ನು ತೆಗೆದುಹಾಕುವುದು.
ವಿಧಾನ
*ಬಿಸಿ ನೀರಿನಲ್ಲಿ ಕಾಲನ್ನು ಅದ್ದಿಟ್ಟುಕೊಳ್ಳಿ.
*ಒಂದು ಕಪ್ ಆ್ಯಪಲ್ ಸೀಡರ್ ವಿನೇಗರ್ ನ್ನು ಬಿಸಿ ನೀರಿಗೆ ಹಾಕಿ.
*15 ನಿಮಿಷ ಕಾಲ ಕಾಲನ್ನು ಇದರಲ್ಲಿ ಮುಳುಗಿಸಿಡಿ.
*15 ನಿಮಿಷ ಬಿಟ್ಟು ಕಾಲನ್ನು ಒರಟು ಕಲ್ಲಿಗೆ ಉಜ್ಜಿಕೊಳ್ಳಿ.
* ಒಣಗಿದ ಟವೆಲ್ ನಿಂದ ಕಾಲು ಒರೆಸಿಕೊಳ್ಳಿ.
* ಹಿಮ್ಮಡಿ ಸಂಪೂರ್ಣವಾಗಿ ಶಮನವಾಗುವ ತನಕ ಹೀಗೆ ಮಾಡಿ.
#ಸಕ್ಕರೆ ಮತ್ತು ನಿಂಬೆ:ನೀವು ಸತ್ತ ಚರ್ಮವನ್ನು ತೆಗೆದು ಹಾಕಲು ಸಕ್ಕರೆ ಮತ್ತು ನಿಂಬೆ ಬಳಕೆ ಮಾಡಿ. ಇದು ಉತ್ತಮ ಎಕ್ಸ್‌ಫೋಲಿಯೇಟರ್ ಆಗಿದ್ದು ಅದು ಸತ್ತ ಚರ್ಮವನ್ನು ತೆಗೆದು ಹಾಕುತ್ತದೆ. ಮತ್ತು ಚರ್ಮವನ್ನು ಮೃದು ಮಾಡುತ್ತದೆ. ಇದಕ್ಕಾಗಿ 1-2 ಹನಿ ನಿಂಬೆ ರಸವನ್ನು ಸಕ್ಕರೆಯಲ್ಲಿ ಬೆರೆಸಿ ಪಾದಗಳಿಗೆ ಹಚ್ಚಿ ಚೆನ್ನಾಗಿ ಉಜ್ಜಬೇಕು. ಸ್ವಲ್ಪ ಸಮಯದ ನಂತರ ಪಾದಗಳನ್ನು ತಣ್ಣೀರಿನಿಂದ ತೊಳೆಯಿರಿ.
#ಬೇಕಿಂಗ್ ಸೋಡಾ:ಸತ್ತ ಚರ್ಮವನ್ನು ತೆಗೆದು ಹಾಕಲು ಅಡಿಗೆ ಸೋಡಾ ಬಳಸಿ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ. ಅರ್ಧ ಬಕೆಟ್ ನೀರನ್ನು ತೆಗೆದುಕೊಂಡು, ಅದಕ್ಕೆ 1-2 ಕಪ್ ಅಡಿಗೆ ಸೋಡಾ ಸೇರಿಸಿ. ಪಾದಗಳನ್ನು ಮುಳುಗಿಸಿ. 15-20 ನಿಮಿಷಗಳ ನಂತರ, ಪಾದಗಳನ್ನು ಕಲ್ಲಿನಿಂದ ಉಜ್ಜಿ. ಇದು ಸತ್ತ ಚರ್ಮವನ್ನು ತೆಗೆದು ಹಾಕುತ್ತದೆ.
#ಕಪ್ ಜೇನು, ಬೆಚ್ಚಗಿನ ನೀರು ಎತ್ತಿಟ್ಟುಕೊಳ್ಳಿ.ಹೀಗೆ ಮಾಡಿ :ಒಂದು ಕಪ್ ಜೇನುತುಪ್ಪವನ್ನು ಅರ್ಧ ಬಕೆಟ್ ಬೆಚ್ಚಗಿನ ನೀರಿಗೆ ಬೆರೆಸಿ. ನಿಮ್ಮ ಪಾದಗಳನ್ನು ಅದರಲ್ಲಿ ಸುಮಾರು 15-20ನಿಮಿಷಗಳ ಕಾಲ ನೆನೆಸಿ. ನಂತರ ನಿಧಾನವಾಗಿ ಸ್ಕ್ರಬ್ ಮಾಡಿ. ನಿಯಮಿತವಾಗಿ ಇದನ್ನು ಅನುಸರಿಸಿದರೆ ಪಾದಗಳ ಬಿರುಕುಗಳು ಬೇಗ ಮುಚ್ಚುತ್ತವೆ.