ತ್ವಚೆ ಸೌಂದರ್ಯ ಹೆಚ್ಚಿಸಲು ಮುಖಕ್ಕೆ ತೆಂಗಿನ ಎಣ್ಣೆ ಹಚ್ಚಿ!

ತ್ವಚೆಯ ರಕ್ಷಣೆಯಲ್ಲ್ಲಿ ಆಂಟಿ ಆಕ್ಸಿಡೆಂಟ್ ನಿರ್ಣಾಯಕ ಪಾತ್ರ ವಹಿಸುತ್ತದೆ ಬಹುತೇಕ ಫೇಸ್ ಕ್ರೀಂಗಳಲ್ಲಿರುವ ಆಂಟಿ ಆಕ್ಸಿಡೆಂಟ್ ತೆಂಗಿನ ಎಣ್ಣೆಯಲ್ಲೂ ಇದೆ. ಹೀಗಾಗಿ ಸೌಂದರ್ಯಪ್ರಿಯರು ಮುಖಕ್ಕೆ ತೆಂಗಿನ ಎಣ್ಣೆ ಹಚ್ಚುವ ಮೂಲಕ ನೈಸರ್ಗಿಕವಾಗಿ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾದ್ರೆ ಮುಖದ ಸೌಂದರ್ಯವರ್ಧನೆಗೆ ತೆಂಗಿನ ಎಣ್ಣೆಯನ್ನು ಹೇಗೆಲ್ಲ ಬಳಸಬಹುದು? ಈಗ ತಿಳಿಯೋಣ.
#ತೆಂಗಿನ ಎಣ್ಣೆ ಚರ್ಮದ ಒಳಭಾಗದಲ್ಲಿ ಒಂದು ತಡೆಗೋಡೆಯನ್ನು ಸೃಷ್ಟಿಸಿ, ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಕೋಲ್ಡ್ ಪ್ರೆಸ್ಡ್ ವರ್ಜಿನ್ ತೆಂಗಿನ ಎಣ್ಣೆಯನ್ನು ಬಳಸಿ. ಏಕೆಂದರೆ, ಅದರಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಾಮ್ಲ ಇದ್ದು, ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡಲು ಸಹಾಯವಾಗುತ್ತದೆ.
#ಒಣ ಚರ್ಮ ಸಮಸ್ಯೆ ಇದ್ದವರು, ತೆಂಗಿನ ಎಣ್ಣೆಯನ್ನು ಮೊದಲ ಆಯ್ಕೆಯಾಗಿ ಉಪಯೋಗ ಮಾಡುವುದು ಒಳ್ಳೆಯದು. ಚರ್ಮದ ಭಾಗದಲ್ಲಿ ವಾಸಿಮಾಡುವ ಪ್ರಕ್ರಿಯೆಯಿಂದ ಹಿಡಿದು ತೇವಾಂಶವನ್ನು ನಿರ್ವಹಣೆ ಮಾಡಿ ನಿರ್ಜಲೀಕರಣದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ.
#ಕಿರಿಕಿರಿ ಉಂಟು ಮಾಡುವ ಚರ್ಮ ನಿಮ್ಮದಾಗಿದ್ದಲ್ಲಿ, ರಾತ್ರಿ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಆ ಸಮಸ್ಯೆ ಶಮನಗೊಳ್ಳಬಹುದು.
#ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ ಕೊಲಾಜೆನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಕೊಲಾಜೆನ್ ಚರ್ಮದ ಇಲಾಸ್ಟಿಸಿಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಬೇಗನೇ ವಯಸ್ಸಿನ ಲಕ್ಷಣಗಳು ಮೂಡುವುದನ್ನು, ಕಪ್ಪು ಕಲೆಗಳನ್ನು ಮತ್ತು ಸುಕ್ಕುಗಳನ್ನು ತಡೆಯುತ್ತದೆ. ಅದು ಫ್ರೀ ರ‍್ಯಾಡಿಕಲ್ಸ್ ವಿರುದ್ಧ ಕೆಲಸ ಮಾಡುತ್ತದೆ ಮತ್ತು ವಯಸ್ಸಾಗುವಿಕೆಯ ಲಕ್ಷಣಗಳಿಂದ ದೂರ ಇಡುತ್ತದೆ.
#ಚಳಿಗಾಲದಲ್ಲಿ ತುಟಿಗಳು ಬೇಗ ತೇವಾಂಶ ಕಳೆದುಕೊಂಡು ಬಿರುಕು ಬಿಡುತ್ತವೆ. ರಾತ್ರಿ ಮಲಗುವ ಮುನ್ನ ತುಟಿಗಳ ಮೇಲೆ ತೆಂಗಿನ ಎಣ್ಣ್ಣೆಯನ್ನು ಹಚ್ಚಿಕೊಳ್ಳಿ. ಇದು ಲಿಪ್ಬಾಮ್ನಂತೆ ನಿಮ್ಮ ತುಟಿಗಳು ಒಡೆಯದಂತೆ ತಡೆಯುತ್ತದೆ. ನಿಮ್ಮ ಲಿಪ್ಬಾಮ್ಗೆ ಕೆಲವು ಹನಿಗಳಷ್ಟು ತೆಂಗಿನ ಎಣ್ಣೆಯನ್ನು ಸೇರಿಸಿ ಅದನ್ನು ಕೂಡ ತುಟಿಗಳಿಗೆ ಹಚ್ಚಬಹುದು.
#ಕರ್ಪೂರ ಹಾಗೂ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ. ಇದ್ರಿಂದ ಮುಖ ಸ್ವಚ್ಛವಾಗಿ ಕಾಣುತ್ತದೆ.