ಬೂದು ಕುಂಬಳಕಾಯಿ ಅದ್ಭುತವಾದ ಆರೋಗ್ಯ ಪ್ರಯೋಜನಗಳು!

ಬೂದು ಕುಂಬಳಕಾಯಿ ಅದ್ಭುತವಾದ ಆರೋಗ್ಯ ಪ್ರಯೋಜನಗಳ ಉಗ್ರಾಣವಾಗಿದೆ. ಇದನ್ನು ನೀವು ಸಾಂಬಾರು, ಪಲ್ಯ, ಹಾಗೂ ಸೂಪ್ ರೂಪದಲ್ಲಿ ಸೇವಿಸಬಹುದಾಗಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಇದರ ಮತ್ತಷ್ಟು ಆರೋಗ್ಯಕರ ಪ್ರಯೋಜನಗಳನ್ನು ತಿಳಿಯೋಣ ಬನ್ನಿ..
#ಕರುಳಿನ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿ ಆಮ್ಲೀಯತೆಯ ಪ್ರಭಾವವನ್ನು ತಪ್ಪಿಸುತ್ತದೆ. ಅತಿ ಹೆಚ್ಚು ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ಮತ್ತು ದೀರ್ಘಕಾಲ ಉಪವಾಸ ಮಾಡುವುದರಿಂದ, ನೀರು ಕಡಿಮೆ ಕುಡಿಯುವುದರಿಂದ ಹೊಟ್ಟೆಯಲ್ಲಿ ಹುಣ್ಣುಗಳು ಕಂಡುಬರುತ್ತವೆ
#ಸಿಪ್ಪೆ ಮತ್ತು ಬೀಜಗಳನ್ನು ತೆಗೆದು, ರುಬ್ಬಿ ತಲೆಗೆ ಹಚ್ಚಿಕೊಂಡು ಒಂದು ಘಂಟೆ ಬಿಟ್ಟು ತೊಳೆದುಕೊಂಡರೂ ಸಹ ಒಣ ಮತ್ತು ಒರಟು ತಲೆಕೂದಲಿಗೆ ಮೃದುತ್ವ ನೀಡುತ್ತದೆ. ಇದರ ತಿರುಳಿನಿಂದ ಆಯುರ್ವೇದ ಲೇಹ ಮತ್ತು ತೈಲವನ್ನು ತಯಾರಿಸುತ್ತಾರೆ ( ಕುಶ್ಮಾನ್ಡ ತೈಲ ). ಎಲೆಗಳನ್ನು ಚೆನ್ನಾಗಿ ರುಬ್ಬಿ ಹಚ್ಚಿಕೊಂಡಲ್ಲಿ ಹಲವಾರು ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ.
#ಬೂದುಗುಂಬಳಕಾಯಿಯಲ್ಲಿ ನಾರಿನಂಶ ಅಪಾರ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರ ಜೊತೆಗೆ ನೀರಿನ ಅಂಶ ಕೂಡ ಇರುವುದರಿಂದ ಕ್ಯಾಲೋರಿ ಅಂಶಗಳನ್ನು ಹೆಚ್ಚಾಗಿ ಹೊಂದಿದ ಆಹಾರಗಳಿಗೆ ಪರ್ಯಾಯವಾಗಿ ಬೂದುಗುಂಬಳಕಾಯಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬಹುದು.
#ಬೂದುಗುಂಬಳಕಾಯಿಯಲ್ಲಿ ಕ್ಯಾಲ್ಸಿಯಂ(Calcium), ಸತು, ರಂಜಕ, ಥಯಾಮಿನ್ ಮತ್ತು ರೈಬೋಫ್ಲೇವಿನ್ ನಂತಹ ಜೀವಸತ್ವಗಳು ಸಮೃದ್ಧವಾಗಿವೆ, ಇದು ದೇಹದ ಶಕ್ತಿ ಹೆಚ್ಚಿಸಲು ಮತ್ತು ಆಯಾಸ ನಿವಾರಿಸುವ ಕೆಲಸ ಮಾಡುತ್ತೆ. ಬೂದುಗುಂಬಳಕಾಯಿ ಶಾಂತಗೊಳಿಸುವ ಗುಣ ಸಹ ಹೊಂದಿದೆ, ಇದು ದೇಹವನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತೆ.