ಹಸಿ ಹಾಲು ಹಾಗೂ ಕುದಿಸಿದ ಹಾಲು ಇವುಗಳಲ್ಲಿ ಯಾವುದು ಉತ್ತಮ?

ಹಾಲು ಅನೇಕ ಆರೋಗ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳು ಇದರಲ್ಲಿ ಲಭ್ಯವಿದೆ. ಉತ್ತಮ ಆರೋಗ್ಯಕ್ಕಾಗಿ ಹಾಲು ಕುಡಿಯಲು ವೈದ್ಯರು ಸಲಹೆ ನೀಡಲಾಗುತ್ತದೆ. ಆದರೆ ಕೆಲವರು ಹಸಿ ಹಾಲು ಕುಡಿಯುತ್ತಾರೆ. ಕೆಲವರು ಕುದಿಸಿದ ಹಾಲು ಕುಡಿಯುತ್ತಾರೆ. ಈ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತದೆ.
ಈ ವಿಷಯದ ಬಗ್ಗೆ ವೈದ್ಯಕೀಯ ತಜ್ಞರು ಹೇಳುವುದೇನೆಂದರೆ ಹಸಿ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯುಎಸ್ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ನ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಹಸಿ ಹಾಲಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುತ್ತದೆ. ಎಕೋಲಿ, ಲಿಸ್ಟೇರಿಯಾ ಮತ್ತು ಸಾಲ್ಮೊನೆಲ್ಲಾ ಮುಂತಾದ ಬ್ಯಾಕ್ಟೀರಿಯಾಗಳು ಹಸಿ ಹಾಲಿನಲ್ಲಿ ಇರುವ ಸಾಧ್ಯತೆಯಿದೆ.
ಅದಕ್ಕಾಗಿಯೇ ಹಸಿ ಹಾಲು ಕುಡಿಯುವುದರಿಂದ ಆಹಾರ ವಿಷವಾಗುವ ಸಾಧ್ಯತೆಗಳಿವೆ. ಹೀಗಾಗಿ ಹಸಿ ಹಾಲನ್ನು ಕುಡಿಯುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಇದರಿಂದ ಅತಿಸಾರ ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ಆಮ್ಲದ ಪ್ರಮಾಣವೂ ಹೆಚ್ಚಾಗುತ್ತದೆ. ಹಾಲು ಕರೆಯುವ ಸಮಯದಲ್ಲಿ ಕೆಚ್ಚಲು ಕುಲುಷಿತಗೊಳ್ಳುವ ಸಾಧ್ಯತೆ ಹೆಚ್ಚು.
ಅತಿ ಕಡಿಮೆ ಪ್ರಮಾಣದ ಪಶು ಸಂಗೋಪನೆದಾರರು ಹಾಲು ಕರೆಯುವ ಯಂತ್ರಗಳನ್ನು ಬಳಸುತ್ತಾರೆ. ಬಹುತೇಕ ಮಂದಿ ಕೈಯಿಂದಲೇ ಹಾಲು ಕರೆಯುತ್ತಾರೆ. ಆಗ ಹಾಸುವಿನ ಕೆಚ್ಚಲು ಭಾಗದಲ್ಲಿನ ದೂಳುಹಾಲಿಗೆ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಅದಕ್ಕಾಗಿಯೇ ಹಾಲನ್ನು ಶೋಧಿಸಿ ಚೆನ್ನಾಗಿ ಕುದಿಸಿದ ನಂತರ ಕುಡಿಯುವುದು ಉತ್ತಮ.
ವಾಂತಿ, ಭೇದಿ ಮತ್ತು ಹೊಟ್ಟೆ ನೋವು ಜ್ವರ, ತಲೆನೋವು ಮತ್ತು ಮೈ-ಕೈ ನೋವು, ಜ್ವರ ತರಹದ ಲಕ್ಷಣಗಳು ಕಾಣಿಸಿಕೊಳ್ಳಬಹುದು.ಹೆಚ್ಚಿನ ಆರೋಗ್ಯವಂತ ಜನರು ಹಸಿ ಹಾಲಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾದಿಂದ ಉಂಟಾಗುವ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಾರೆ – ಅಥವಾ ಹಸಿ ಹಾಲಿನಿಂದ ಮಾಡಿದ ಆಹಾರಗಳು – ಅಲ್ಪಾವಧಿಯಲ್ಲಿ, ಕೆಲವರು ದೀರ್ಘಕಾಲದ, ತೀವ್ರ ಅಥವಾ ಮಾರಣಾಂತಿಕ ರೋಗಲಕ್ಷಣಗಳನ್ನು ಹೊಂದಬಹುದು.