ಕೈ ಅಥವಾ ಕಾಲು ಉಳುಕಿದಾಗ ಈ ಮನೆಮದ್ದು!

ಆಟ ಆಡುವಾಗ, ವೇಗವಾಗಿ ನಡೆಯುವಾಗ ದೇಹದ ವಿವಿಧ ಅಂಗಗಳು ಟ್ವಿಸ್ಟ್ ಆದಾಗ ಅಂಗಗಳಲ್ಲಿರುವ ಲಿಗಾಮೆಂಟ್‌ಗಳು ಹರಿದುಹೋಗುತ್ತವೆ. ಹೀಗಾಗಿ ಈ ಉಳುಕು ಸಂಭವಿಸುತ್ತದೆ. ಲಿಗಾಮೆಂಟ್ ಎಂದರೆ ಅದು ಮೂಳೆಗಳನ್ನು ಪರಸ್ಪರ ಸಂಪರ್ಕಿಸುವ ಎಲಾಸ್ಟಿಕ್ ರೀತಿಯ ಬ್ಯಾಂಡ್‌ಗಳಾಗಿವೆ. ಇದು ಮೂಳೆಗಳ ಜಾಯಿಂಟ್‌ಗೆ ಸ್ಥಿರತೆ ಮತ್ತು ಬಲವನ್ನು ಒದಗಿಸುತ್ತದೆ. ಅಂಗಗಳು ಟ್ವಿಸ್ಟ್ ಆದಾಗ ಇದು ಹರಿದು ಹೋಗುತ್ತದೆ. ಇದರಿಂದಾಗಿ ಹೆಚ್ಚು ನೋವು ಕಾಡುತ್ತದೆ.ಈ ರೀತಿ ಆದಾಗ ಏನು ಮಾಡಬೇಕು, ನೋವನ್ನು ಗುಣಪಡಿಸುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
#ಮೆಣಸಿನ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಶೀತ ಬಂದಾಗ ಹಾಲಿಗೆ ಮೆಣಸಿನ ಪುಡಿಯನ್ನು ಮಿಶ್ರಮಾಡಿ ಕುಡಿಯುತ್ತಾ ಬನ್ನಿ ನಿಮ್ಮ ಶೀತಾ ಎಷ್ಟು ಬೇಗ ನಿವಾರಣೆಯಾಗುತ್ತೆ ಹಾಗೆ ಉಳುಕು ಬಂದಾಗ ಮೆಣಸಿನ ಕಾಳುಗಳನ್ನು ದಪ್ಪದಾಗಿ ಕುಟ್ಟಿ ಪುಡಿ ಮಾಡಿಕೊಂಡು ಅದಕ್ಕೆ ನೀರನ್ನು ಮಿಶ್ರ ಮಾಡಿಕೊಂಡು ಸ್ವಲ್ಪ ದಪ್ಪಗೆ ಪೇಸ್ಟ್ ಮಾಡಿಕೊಳ್ಳಬೇಕು ಅದನ್ನು ಉಳುಕು ಆದ ಭಾಗಕ್ಕೆ ಲೇಪನ ಮಾಡಬೇಕು.
#ಹುಣಸೆ ಹಣ್ಣು ನಮ್ಮ ಜಾಯಿಂಟ್ ಪೇನ್ ಗು ಕೂಡ ಬಹಳನೇ ಒಳ್ಳೆಯದು ಹುಣಸೆ ಹಣ್ಣಿನ ಬೀಜಗಳ ಬಗ್ಗೆ ನೀವು ಕೇಳಿರಬಹುದು ಈ ಬೀಜಗಳನ್ನು ಮಂಡಿ ನೋವಾದಾಗ ಕೀಲು ನೋವಾದಾಗ ಬಳಸುತ್ತಾರೆ ಹುಣಸೆ ಹಣ್ಣಿನಲ್ಲಿ ವಿಟಮಿನ್ ಬಿ ಇರುವುದರಿಂದ ಇದು ನಮ್ಮ ನಗರಗಳಿಗೂ ಸಹ ಒಳ್ಳೆಯದು ಮತ್ತೆ ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಇರುವುದರಿಂದ ನಮ್ಮ ಮೂಳೆಗಳಿಗೆ ನಮ್ಮ ಜಾಯಿಂಟ್ಸ್ ಗಳಿಗೆ ಇದು ಬಹಳನೇ ಒಳ್ಳೆಯದು.
#ಉಳುಕಿರುವ ಜಾಗಕ್ಕೆ ಐಸ್ ನಿಂದ ಕೂಡ ಮಸಾಜ್ ಮಾಡಿಕೊಳ್ಳಬಹುದು. ಒಂದು ಐಸ್ ಕ್ಯೂಬ್ ಅನ್ನು ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಇಪ್ಪತ್ತು ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ. ಕುತ್ತಿಗೆ ಉಳುಕಿದಾಗ ಕೆಲವರಿಗೆ ರಾತ್ರಿ ತಲೆ ದಿಂಬು ಇರದೇ ನಿದ್ರೆ ಬರುವುದಿಲ್ಲ. ತಲೆ ದಿಂಬು ತೆಗೆದುಕೊಂಡರು ಕೂಡ ತುಂಬಾ ನೋವು ಉಂಟಾಗುತ್ತದೆ. ಅಂಥವರು ಒಂದು ಚೀಲದಲ್ಲಿ ಅಕ್ಕಿಯನ್ನು ತೆಗೆದುಕೊಳ್ಳಬೇಕು. ಒಂದು ಚಿಕ್ಕ ಗಂಟು ರೂಪದಲ್ಲಿ ಮಾಡಿಕೊಂಡು ಇದರ ಮೇಲೆ ಮಲಗಿಕೊಂಡಾಗ ಕುತ್ತಿಗೆಗೆ ಸರಿಯಾಗಿ ಬೆಂಬಲ ಸಿಗುತ್ತದೆ. ಹಾಗೂ ನೋವು ಕೂಡ ಕಡಿಮೆಯಾಗಿದೆ ಎಂದು ಭಾಸವಾಗುತ್ತದೆ. ಹಾಗೂ ಕುತ್ತಿಗೆ ನೋವು ನಿವಾರಣೆಯಾಗುತ್ತದೆ.