ದೇಹದ ಉಷ್ಣಾಂಶವನ್ನ ಕಡಿಮೆಯಾಗಿಸಲು ಇವು ಸಹಾಯಕ..!

ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಕಣ್ಣುಗಳಲ್ಲಿ ಉರಿ, ಬಾಯಲ್ಲಿ ಹುಣ್ಣು, ಅಜೀರ್ಣ, ಮಲಬದ್ಧತೆ, ನಿದ್ರಾಹೀನತೆ, ಆಮ್ಲೀಯತೆ ಅಥವಾ ಕೆಲವೊಮ್ಮೆ ತ್ವರಿತ ಹೃದಯ ಬಡಿತ ಕಂಡು ಬರುತ್ತದೆ. ಇವುಗಳನ್ನು ಗಮನಿಸಬೇಕಾದುದು ತುಂಬಾ ಮುಖ್ಯವಾಗುತ್ತದೆ. ಹಾಗಾಗಿ ದೇಹದ ಉಷ್ಣತೆ ಕಡಿಮೆಗೊಳಿಸುವ ಆಹಾರಗಳು ಇಲ್ಲಿವೆ.
#ಬೇಸಿಗೆಯಲ್ಲಿ ಪ್ರತಿ ದಿನ ಒಂದು ಲೋಟ ಎಳನೀರನ್ನು ಕುಡಿಯುವುದು ಉತ್ತಮ. ಇದರಲ್ಲಿ ಆರೋಗ್ಯಕರ ಜೀವಸತ್ವ, ಖನಿಗಳು ಮತ್ತು ವಿದ್ಯುತ್‍ಚ್ಛೇದನ ಶಕ್ತಿ ಇರುತ್ತದೆ. ಇದು ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇರುವಂತೆ ಮಾಡುವುದು. ಜೊತೆಗೆ ಪುನರ್‍ಚೇತನ ನೀಡುವುದರ ಮೂಲಕ ಚೈತನ್ಯ ಶೀಲರನ್ನಾಗಿ ಮಾಡುವುದು. ಅನಗತ್ಯವಾದ ಆಯಾಸ ಹಾಗೂ ಮಂಕುತನ ಕಾಡದು. ದೇಹದ ಅಂಗಾಂಗಗಳು ಉತ್ತಮ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತವೆ. ಜೊತೆಗೆ ಚರ್ಮ ಹಾಗೂ ಕೇಶರಾಶಿಗಳು ಉತ್ತಮ ಆಕರ್ಷಣೆಯನ್ನು ಪಡೆದುಕೊಳ್ಳುತ್ತವೆ.
#ಹೆಚ್ಚು ನೀರು ಕುಡಿದಷ್ಟು ನಿಮ್ಮ ದೇಹ ಹೆಚ್ಚು ಉಷ್ಣಾಂಶವನ್ನು ಹೊರ ಹಾಕುತ್ತದೆ. ದೇಹ ಆಯಾಸಗೊಳ್ಳುವುದೂ ತಪ್ಪುತ್ತದೆ. ದಿನಕ್ಕೆ 10 ರಿಂದ 12 ಲೋಟ ನೀರು ಮರೆಯದೆ ಕುಡಿಯಿರಿ.
#ಕಲ್ಲಂಗಡಿ ಹಣ್ಣನ್ನು ತಿನ್ನಿ. ಇದರಲ್ಲಿ ನಾರಿನಂಶ ಮತ್ತು ವಿಟಮಿನ್ ಎ, ಸಿ ಗಳು ಹೇರಳವಾಗಿವೆ. ಇವು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪು ನೀಡುತ್ತದೆ.
#ಇದರಂತೆ ಕರಬೂಜ ಹಣ್ಣಿನ ಸೇವನೆಯೂ ಬಹಳ ಒಳ್ಳೆಯದು.ನೀರಿನಂಶ ಹೇರಳವಾಗಿರುವ ಮುಳ್ಳುಸೌತೆ ಸೇವನೆಯೂ ಒಳ್ಳೆಯದೇ. ಇದು ನಿಮ್ಮ ತ್ವಚೆಗೆ ಹೊಳಪು ನೀಡುವ ಜೊತೆಗೆ ಉಷ್ಣಾಂಶದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ
#ನೀರಿನಂಶ ಹೆಚ್ಚಿರುವ ಸೌತೆಕಾಯಿ, ಹಸಿರು ತರಕಾರಿಗಳು, ಮೂಲಂಗಿ, ಉಳ್ಳಾಗಡ್ಡೆ, ಕಲ್ಲಂಗಡಿ ಹಣ್ಣು, ಕರಬೂಜ ಹಣ್ಣು ಇವುಗಳನ್ನು ಹೇರಳವಾಗಿ ನಮ್ಮ ದಿನನಿತ್ಯದ ಆಹಾರದಲ್ಲಿ ಬಳಕೆ ಮಾಡುವುದರಿಂದ ನಮ್ಮ ದೇಹದ ಉಷ್ಣತೆಯು ನಿಯಂತ್ರಣದಲ್ಲಿ ಇರುತ್ತದೆ.
#ಪುದೀನದಲ್ಲಿ ಮೆಂಥಾಲ್ ಇರುವುದರಿಂದ ದೇಹವನ್ನು ತಕ್ಷಣದಲ್ಲಿಯೇ ತಂಪಾಗಿ ಇರಿಸಬಹುದು. ಇದು ಪುದೀನಾ ಸೊಪ್ಪಿಗಿರುವ ವಿಶೇಷ ಔಷಧೀಯ ಗುಣ ಎನ್ನಬಹುದು. ಎರಡು ಹನಿ ಪುದೀನ ರಸವನ್ನು ನವು ಸವಿಯುವ ಪಾನೀಯಗಳಿಗೆ ಸೇರಿಸಿಕೊಳ್ಳಬಹುದು. ಇಲ್ಲವೇ ಪುದೀನ ಎಲೆಯನ್ನು ಪಾನೀಯಗಳಿಗೆ ಸೇರಿಸಿ ಸವಿಯಬಹುದು. ಪುದೀನ ಸೊಪ್ಪಿನ ಚಹಾ ಸವಿಯುವುದರಿಂದ ದೇಹ ಬೆವರುತ್ತದೆಯಾದರೂ ಸೂಕ್ತ ಉಷ್ಣಾಂಶವನ್ನು ನಿಯಂತ್ರಿಸುವುದು. ಪುದೀನ ಸೊಪ್ಪಿನ ಪಾನೀಯಗಳನ್ನು ಸೇವಿಸುವುದರ ಮೂಲಕ ಹಲವು ಗಂಟೆಗಳ ಕಾಲ ಉತ್ತಮ ಸ್ಥಿತಿಯನ್ನು ಹೊಂದಬಹುದು. ಜೊತೆಗೆ ತ್ವಚೆ ಮತ್ತು ಆರೋಗ್ಯವು ಉತ್ತಮವಾಗಿ ಇರುತ್ತವೆ.