ಮೈ-ಕೈ ನೋವಿಗೆ ಇಲ್ಲಿವೆ ಕೆಲವು ಪರಿಹಾರಗಳು!

ಅನೇಕರು ಮೈ-ಕೈ ನೋವು ಎಂದು ಕಾರಣ ನೀಡಿ ಆಫೀಸಿಗೆ ರಜೆ ಹಾಕುತ್ತಾರೆ. ಆದರೆ ನಿಜವಾಗಿ ಎದುರಾಗುವ ಮೈ-ಕೈ ನೋವಿಗೆ ಹಲವು ಕಾರಣಗಳಿವೆ. ನೋವನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲವೆನ್ನುವಷ್ಟು ಪ್ರಬಲವಾಗಿದ್ದರೆ ಮಾತ್ರವೇ ಅನಿವಾರ್ಯವಾಗಿ ಮಾತ್ರೆಗಳ ನೆರವನ್ನು ಪಡೆಯಬಹುದೇ ಹೊರತು ಇತರ ಸಾಮಾನ್ಯ ನೋವುಗಳಿಗೆ ನೈಸರ್ಗಿಕ ಉಪಶಮನವೇ ಸಾಕಷ್ಟಾಗುತ್ತದೆ. ಬನ್ನಿ, ನಿಸರ್ಗ ಈ ನೋವುಗಳನ್ನು ನಿವಾರಿಸಲು ನೀಡಿರುವ ಕೆಲವು ವಿಧಾನಗಳ ಬಗ್ಗೆ ಅರಿಯೋಣ..

#ಪ್ರತಿದಿನ ಬೆಳ್ಳುಳ್ಳಿ ಸೇವಿಸುವುದರಿಂದ ಮತ್ತು ಬೆಳ್ಳುಳ್ಳಿಯಿಂದ ತಯಾರಿಸಿದ ಎಣ್ಣೆಯಿಂದ ದೇಹವನ್ನು ಮಸಾಜ್‌ ಮಾಡಿದರೂ ಮೈಕೈ ನೋವು ನಿವಾರಣೆಯಾಗುತ್ತದೆ.

#ವ್ಯಾಯಾಮ:ನಿಯಮಿತವಾಗಿ ಮಾಡುವ ಯಾವುದೇ ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದರಿಂದ ಹಲವಾರು ಕಾಯಿಲೆಗಳನ್ನು ದೂರವಿಡಬಹುದು. ಇದರಲ್ಲಿ ನೋವು ಸಹಾ ಒಂದು. ನೋವು ನಿವಾರಕವಾಗಿ ಕೆಲವು ಸುಲಭ ವ್ಯಾಯಾಮ ಮತ್ತು ಯೋಗಾಸನಗಳನ್ನು ಅನುಸರಿಸಬಹುದು. ಉದಾಹರಣೆಗೆ ಏರೋಬಿಕ್ಸ್ ವ್ಯಾಯಾಮದ ಮೂಲಕ ದೇಹದ ಸ್ನಾಯುಗಳಿಗೆ ಸಂಬಂಧಿಸಿದ ನೋವು ಕಡಿಮೆಯಾಗುತ್ತದೆ. ಅಲ್ಲದೇ ಈ ಸಮಯದಲ್ಲಿ ಮೆದುಳಿನಲ್ಲಿ ಬಿಡುಗಡೆಯಗುವ ಎಂಡಾರ್ಫಿನ್ ಎಂಬ ರಸದೂತಗಳು ಸಹಾ ನೋವು ಮತ್ತು ಉರಿಯೂತವನ್ನು ಕಡಿಮೆಗೊಳಿಸಬಲ್ಲವು. ದೈಹಿಕ ವ್ಯಾಯಾಮ ಮೈ ಮನಸ್ಸಿಗೆ ಹಿತಕಾರಿ.

#ಮೈ-ಕೈ ನೋವು ಕಾಣಿಸಿಕೊಂಡಾಗ ಉಪ್ಪು ನೀರಿನ ಶಾಖವನ್ನು ಕೊಡಬೇಕು. ಉಪ್ಪುನೀರು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುನೋವನ್ನು ಕಡಿಮೆ ಮಾಡುತ್ತದೆ. ಮಸಾಜ್ ಮಾಡುವ ಮೂಲಕ ಮೈ-ಕೈ ನೋವು ನಿವಾರಣೆ ಮಾಡಬಹುದು. ಸರಿಯಾದ ಕ್ರಮದಲ್ಲಿ ಮಸಾಜ್​ ಮಾಡಿದರೆ ಕೊಂಚ ಆರಾಮದಾಯಕ ಅನಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

#ಮೈ-ಕೈಗೆ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಮೈ-ಕೈ ನೋವು ನಿವಾರಣೆ ಆಗುತ್ತದೆ

#ಅರಿಶಿನನಮ್ಮ ಅಡುಗೆಯಲ್ಲಿ ರುಚಿಕಾರಕ ಮಸಾಲೆ ವಸ್ತುವಾಗಿ ಬಳಸಲಾಗುವ ಅರಿಶಿನ ಹಲವಾರು ಕಾಯಿಲೆಗಳಿಗೆ ಸಿದ್ಧರೂಪದ ಔಷಧಿಯೂ ಆಗಿದೆ. ಸಾಮಾನ್ಯ ಫ್ಲೂ ಜ್ವರದಿಂದ ತೊಡಗಿ ಚರ್ಮವ್ಯಾಧಿಗಳ ಚಿಕಿತ್ಸೆಯೂ ಅರಿಶಿನ ಬಳಕೆಯಾಗುತ್ತದೆ. ಅರಿಶಿನವನ್ನು ಸೇವಿಸುವ ಹಾಗೂ ನೋವಿರುವ ಭಾಗಕ್ಕೆ ಲೇಪದ ರೂಪದಲ್ಲಿ ಹಚ್ಚಿಕೊಳ್ಳುವ ಮೂಲಕವೂ ಚಿಕಿತ್ಸೆ ಪಡೆಯಬಹುದು. ಇದರ ಪ್ರಬಲ ಉರಿಯೂತ ನಿವಾರಕ ಗುಣಗಳು ದೇಹದ ವಿವಿಧ ಭಾಗಗಳಲ್ಲಿ ಎದುರಾದ ಉರಿಯೂತವನ್ನು ಶಮನಗೊಳಿಸುವ ಮೂಲಕ ನೋವನ್ನೂ ನಿವಾರಿಸುತ್ತದೆ.

#ಬಾಳೆಹಣ್ಣು , ಚೆರ್ರಿ ಹಣ್ಣು , ಸೇಬು, ಬಾದಾಮಿ, ಒಣದ್ರಾಕ್ಷಿಗಳನ್ನು ಪ್ರತಿ ದಿನ ಸೇವಿಸಿದರೆ ನೋವು ಕಡಿಮೆಯಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group