ಕಣ್ಣು ಉರಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಹೀಗೇ ಮಾಡಿ

ಕೆಲವರಿಗೆ ಪದೇ ಪದೇ ಅಲರ್ಜಿಯಾಗುತ್ತದೆ. ಇದರಿಂದ ಕಣ್ಣಿನ ತುರಿಕೆ, ಕಣ್ಣು ಕೆಂಪಾಗುವುದು, ಉರಿ ಕಾಣಿಸಿಕೊಳ್ಳುತ್ತದೆ.ಇದರಿಂದ ಕಿರಿಕಿರಿಯಾಗುವುದು ಸಹಜ. ಕಣ್ಣಿನ ಅಲರ್ಜಿಯಾದಾಗ ಹೆಚ್ಚು ಜಾಗರೂಕತೆವಹಿಸುವುದು ಬಹಳ ಮುಖ್ಯ. ಏಕೆಂದರೆ ಸರಿಯಾಗಿ ಆರೈಕೆ ಮಾಡದೇ ಇದ್ದರೆ ಕಣ್ಣಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ.ಹಾಗಾದರೆ ಕಣ್ಣಿಗೆ ಅಲರ್ಜಿಯಾದಾಗ ಏನು ಮನೆಮದ್ದು ಮಾಡಬಹುದು ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
#ಕಣ್ಣು ಉರಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಉಜ್ಜಿಕೊಂಡರೆ ಉರಿ ಕಡಿಮೆಯಾಗುತ್ತದೆ.
#ಮೊಸರಲ್ಲಿ ಬಾಳೆಹಣ್ಣನ್ನು ಕಿವುಚಿ ಪ್ರತಿದಿನ ತಿನ್ನುವುದು ಸಹ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಹೀಗೆ ನಿರಂತರ ಸೇವಿಸುವುದರಿಂದ ಕಣ್ಣು ಉರಿ ಕೂಡ ಕಡಿಮೆಯಾಗುತ್ತದೆ
#ನಿಮ್ಮ ಮನೆಯಲ್ಲಿ ಸಿಗುವಂತ ಉಪ್ಪಿನ ಹರಳನ್ನು ಎದೆಹಾಲಿನಲ್ಲಿ ಕರಗಿಸಿ ಕಣ್ಣಿಗೆ ಹಚ್ಚಿಕೊಂಡರೆ ಕಣ್ಣುರಿ ಕಡಿಮೆ ಆಗುವುದು.
#ನಿಮ್ಮ ಮನೆಯಲ್ಲಿ ಕೆಂಪು ಮೂಲಂಗಿಯ ಕೋಸಂಬರಿಯ ತುರಿಯನ್ನು ತಯಾರಿಸಿ ತಿನ್ನುವುದರಿಂದ ಕಣ್ಣಿನ ಆರೋಗ್ಯ ಗಣನೀಯ ರೀತಿಯಲ್ಲಿ ನಿವಾರಣೆ ಆಗುವುದು
#ಕೆಲವೊಂದು ಕಣ್ಣಿನ ಸೋಂಕುಗಳು ಬೇಗನೆ ಇತರರಿಗೆ ಹರಡುತ್ತವೆ. ಅಂತಹ ಸಂದರ್ಭದಲ್ಲಿ ಜನರಿಂದ ದೂರ ಉಳಿಯುವುದು ಒಳ್ಳೆಯದು. ವೈದ್ಯರು ಶಿಫಾರಸ್ಸು ಮಾಡಿದ ಕನ್ನಡಕ ಇದ್ದರೆ ಅದನ್ನು ಧರಿಸುವುದು ಸರಿಯಾದ ಕ್ರಮ. ಹೀಗಾಗಿ ಬೇರೆಯವರ ದೃಷ್ಟಿ ನೇರವಾಗಿ ನಿಮ್ಮ ಕಣ್ಣುಗಳಿಗೆ ಬೀಳುವುದು ತಪ್ಪುತ್ತದೆ. ನಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳುವ ಜತೆಗೆ ಬೇರೆಯವರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.