ತಣ್ಣೀರಿನ ಸ್ನಾನದ ಪ್ರಯೋಜನಗಳೇನು? ತಿಳಿಯಿರಿ:

ಬೇಸಿಗೆ ಮತ್ತು ನಿಮಗೆ ಸೆಖೆ ಉಂಟಾಗಿದ್ದಾಗ ತಣ್ಣೀರು ಸ್ನಾನಕ್ಕೆ ಆದ್ಯತೆ ನೀಡಿ.ಇಂದಿನ ಲೇಖನದಲ್ಲಿ ತಣ್ಣೀರು ಸ್ನಾನದ ಮಹತ್ವಕ್ಕಿರುವ ಕೆಲವೊಂದು ಅಂಶಗಳತ್ತ ಗಮನ ಹರಿಸೋಣ ಮತ್ತು ಅದು ಏಕೆ ಪ್ರಮುಖವಾದುದು ಎಂಬುದನ್ನು ತಿಳಿದುಕೊಳ್ಳೋಣ

#ರಕ್ತ ಪರಿಚಲನೆ ಸುಧಾರಿಸುತ್ತದೆ:ತಣ್ಣೀರು ಸ್ನಾನದಿಂದ ದೇಹದ ಒಳಗೆ ಬೆಚ್ಚಗಿರಿಸುತ್ತದೆ. ಇದು ರಕ್ತವನ್ನು ವಿವಿಧ ಅಂಗಗಳಿಗೆ ವರ್ಗಾಯಿಸುತ್ತದೆ. ಆದರೆ ಬಿಸಿನೀರಿನಲ್ಲಿ ಸ್ನಾನ ಮಾಡಿದಾಗ ಪರಿಣಾಮ ವ್ಯತಿರಿಕ್ತವಾಗಿರುತ್ತದೆ. ಮೇಲಿನ ಚರ್ಮವು ಮಾತ್ರ ಬೆಚ್ಚಗಿರುತ್ತದೆಯಾದರೂ, ರಕ್ತವು ಚರ್ಮದ ಮೇಲ್ಮೈಗೆ ಚಲಿಸುತ್ತದೆ. ಇದು ಶೀತಲ ಸ್ನಾನದ ಪರಿಣಾಮವನ್ನು ಹಿಮ್ಮುಖಗೊಳಿಸುತ್ತದೆ. ಆದರೆ, ತಣ್ಣೀರಿನ ಸ್ನಾನವು ಅಪಧಮನಿಗಳನ್ನು ಬಲಪಡಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನೀವು ಫಿಟ್ ಆಗಬೇಕೆಂದರೆ ತಣ್ಣೀರಿನಿಂದ ಸ್ನಾನ ಮಾಡಿ.

#ತಣ್ಣೀರು ಸ್ನಾನ ಮಾಡುವುದರಿಂದ ಮನಸ್ಸು ಪ್ರಪುಲ್ಲವಾಗುತ್ತದೆ. ಮತ್ತು ಒತ್ತಡ ನಿವಾರಣೆಯಾಗುತ್ತದೆ. ಹಾಗೂ ದೇಹದ ಚಟುವಟಿಕೆಯಿಂದ ಕೂಡಿರುತ್ತದೆ.

#ನಮ್ಮ ನರಮಂಡಲ ವ್ಯವಸ್ಥೆಯಲ್ಲಿ ನಮ್ಮ ದೇಹದಲ್ಲಿ ನರಗಳು ಕೊನೆಗೊಳ್ಳುವ ಅಂಚುಗಳಿಂದ ಹರಿಯುವ ಸಂಕೇತಗಳಿಗೆ ಮಾನಸಿಕ ಖಿನ್ನತೆಯನ್ನು ನಿವಾರಣೆ ಮಾಡುವ ಗುಣ ಲಕ್ಷಣಗಳಿವೆ.

#ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದು : ತಮ್ಮ ತ್ವಚೆಯ ಬಗ್ಗೆ ಎಲ್ಲರಿಗೂ ಕಾಳಜಿ ಇದ್ದೇ ಇರುತ್ತವೆ. ತಣ್ಣೀರು ಸ್ನಾನದಿಂದ ನಿಮ್ಮ ತ್ವಚೆಯ ಹೊಳಪು ಹೆಚ್ಚುತ್ತವೆ ಮತ್ತು ಕೂದಲಿನಲ್ಲಿನ ಎಣ್ಣೆ ಅಂಶವನ್ನು ತೆಗೆದು ಶುದ್ಧಗೊಳಿಸುತ್ತದೆ.

#ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.ವಿಪರೀತಿ ಬೆವರುತ್ತಿದ್ದರೆ ಬೆವರನ್ನು ತಡೆಗಟ್ಟಲು ಕ್ರೀಮ್ ಹೆಚ್ಚುವ ಬದಲು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು ಇದರಿಂದ ತ್ವಚೆ ಕಾಂತಿ ಹೆಚ್ಚುತ್ತದೆ.

#ತುರಿಕೆಯ ಚರ್ಮವನ್ನು ಶಾಂತಗೊಳಿಸುತ್ತದೆ:ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಅಧ್ಯಯನದ ಪ್ರಕಾರ, ನಿಮಗೆ ಚರ್ಮದ ತುರಿಕೆಯ ಸಮಸ್ಯೆಯಿದ್ದರೆ, ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಇದು ದೇಹದಲ್ಲಿ ತುರಿಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತಾರೆ. ಅಲ್ಲದೆ, ತಣ್ಣನೆಯ ಸ್ನಾನವು ಬೆಳಗ್ಗೆ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ. ತಣ್ಣೀರಿನ ಸ್ನಾನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ಕಾಯಿಲೆಯನ್ನು ತಡೆಯಲು ಸಹಾಯ ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group