ಹಲ್ಲು ನೋವು ನಿವಾರಣೆಗೆ ಇಲ್ಲಿವೆ ಕೆಲ ಟಿಪ್ಸ್!

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಕೇವಲ ಗಂಟಲ ಕೆರೆತಕ್ಕೆ ಮಾತ್ರವಲ್ಲಿ ಹಲ್ಲು ನೋವಿನ ಮೇಲೂ ಕೂಡ ಪರಿಣಾಮ ಬೀರುತ್ತದೆ. ಉಪ್ಪು ನೀರು ನೈಸರ್ಗಿಕ ಸೋಂಕು ನಿವಾರಕದಂತೆ ಕಾರ್ಯನಿರ್ವಹಿಸುತ್ತದೆ. ಹಲ್ಲುಗಳಲ್ಲಿ ಏನಾದರೂ ಸಿಲುಕಿಕೊಂಡಿದ್ದರೆ ಅಥವಾ ನೋವು ಇದ್ದರೆ ಅಥವಾ ವಸಡುಗಳಲ್ಲಿ ಊತವಿದ್ದರೆ 1 ಗ್ಲಾಸ್ ನೀರಿನಲ್ಲಿ 1/2 ಟೀ ಸ್ಪೂನ್ ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸಿ.

#ಹಲ್ಲು ನೋವು ನಿವಾರಣೆಯಲ್ಲಿ ಲವಂಗ ಎಣ್ಣೆ ಕೂಡ ಮಹತ್ವದ ಪಾತ್ರವಹಿಸುತ್ತದೆ. ಲವಂಗ ಎಣ್ಣೆಯ ಕೆಲ ಹನಿಗಳನ್ನು ಹತ್ತಿಗೆ ಹಾಕಿ ಅಂದನ್ನು ಹಲ್ಲಿನ ನಡುವೆ ಇಡಿ. ವಸಡುಗಳಲ್ಲಿ ಒಂದು ವೇಳೆ ನೋವು ಇದ್ದರೆ ಲವಂಗದ ಎಣ್ಣೆ ತುಂಬಾ ಪರಿಣಾಮಕಾರಿಯಾಗಿದೆ.

#ಒಂದು ವೇಳೆ ನೀವು ಯಾವುದಾದರೊಂದು ಡೆಂಟಲ್ ಟ್ರೀಟ್ ಮೆಂಟ್ ಗೆ ಒಳಗಾಗಿದ್ದರೆ, ವೈದ್ಯರು ನೋವು ಹಾಗೂ ಬಾವಿನಿಂದ ಬಚಾವಾಗಲು ವೈದ್ಯರು, ಐಸ್ ನಿಂದ ಕಾವು ಕೊಡಲು ಸೂಚಿಸುತ್ತಾರೆ. ಕೂಲಿಂಗ್ ಪ್ಯಾಡ್ ಅಥವಾ ಐಸ್ ಪ್ಯಾಕ್ ಅಥವಾ ಟವೆಲ್ ನಲ್ಲಿ ಐಸ್ ಸುತ್ತಿ ನೀವು ಈ ಕೆಲಸ ಮಾಡಬಹುದು.

#ಒಂದು ವೇಳೆ ನಿಮ್ಮ ವಸಡುಗಳು ತುಂಬಾ ಸೆನ್ಸಿಟಿವ್ ಆಗಿದ್ದು, ವಸಡುಗಳು ನೋಯುತ್ತಿದ್ದರೆ ಪುದಿನಾ ಎಣ್ಣೆ ಅಥವಾ ಪೆಪೆರ್ಮೆಂಟ್ ಟೀ ಬ್ಯಾಗ್ ತುಂಬಾ ಪರಿಣಾಮಕಾರಿಯಾಗಿದೆ. ಪೆಪರ್ಮಿಂಟ್ ಎಣ್ಣೆಯ ಕೆಲ ಹನಿಗಳನ್ನು ನೀರಿನಲ್ಲಿ ಹಾಕಿ ಆ ನೀರಿನಿಂದ ಬಾಯಿ ಮುಕ್ಕಳಿಸಿ.

#ಹಲ್ಲು ನೋವು ನಿವಾರಣೆಯಲ್ಲಿ ಬೆಳ್ಳುಳ್ಳಿ ಕೂಡ ಒಂದು ಉಪಯುಕ್ತ ಪದಾರ್ಥವಾಗಿದೆ. ಬೆಳ್ಳುಳ್ಳಿಯ ಪೇಸ್ಟ್ ತಯಾರಿಸಿ ಅದನ್ನು ನೋಯುತ್ತಿರುವ ಹಲ್ಲು ಅಥವಾ ವಸಡಿನ ಮೇಲೆ ಹಚ್ಚಿ. ಬೆಳ್ಳುಳ್ಳಿಯ ಕುಡಿಯನ್ನು ಸಹ ನೀವು ಕಚ್ಚಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group