ಬಾಲ್ಯದಿಂದಲೇ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡುವುದು ಅಂಶಗಳು

ಬಾಲ್ಯದಿಂದಲೇ ಮಕ್ಕಳನ್ನು ತಿದ್ದುವ ಕೆಲಸ ಮಾಡಬೇಕು, ಆತ್ಮವಿಶ್ವಾಸ ಬೆಳೆಸಬೇಕು, ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಬಾಲ್ಯದಿಂದಲೇ ಮಕ್ಕಳಲ್ಲಿ ಭವಿಷ್ಯದಲ್ಲಿ ಸರಿಯಾಗಿ ತುಳಿಯುವಂತೆ ತಿದ್ದುವುದು ಹೇಗೆ? ಇಲ್ಲಿವೆ ಕೆಲವು ಸಲಹೆಗಳು.

#ಅಭ್ಯಾಸ ಮಾಡಿಸಿ:ಮಕ್ಕಳು ತುಂಬಾ ಬುದ್ಧಿವಂತರು. ಅವರು ನಮ್ಮ ನಡವಳಿಕೆಗಳನ್ನು ಗಮನಿಸುತ್ತಾರೆ ಮತ್ತು ಅರಿವಿಲ್ಲದೆ ನಮ್ಮ ನಡವಳಿಕೆಯಿಂದ ಕಲಿಯುತ್ತಾರೆ. ನಿಮ್ಮ ಮಗಳು ನಿಮ್ಮ ಒಳ್ಳೆಯ ಅಭ್ಯಾಸಗಳನ್ನು ಮಾಡಬೇಕೆಂದು ನೀವು ಬಯಸಿದರೆ ನೀವು ಏನು ಬೋಧಿಸುತ್ತೀರೋ ಅದನ್ನು ಅಭ್ಯಾಸ ಮಾಡುವುದು ಮುಖ್ಯವಾಗಿದೆ. ಉದಾಹರಣೆಗೆ: ನಿಮ್ಮ ಮಗಳನ್ನು ವ್ಯಾಯಾಮ ಮಾಡಲು ಹೇಳುವುದು ಅವಳನ್ನು ಪ್ರೇರೇಪಿಸುವುದಿಲ್ಲ ಆದರೆ ನೀವು ಪ್ರತಿದಿನ ವ್ಯಾಯಾಮ ಮಾಡಿದರೆ, ಅವಳು ಸ್ವಯಂಚಾಲಿತವಾಗಿ ನಿಮ್ಮ ಹೆಜ್ಜೆಗಳನ್ನು ಅನುಸರಿಸಬಹುದು

#ಪ್ರಶ್ನೆಗಳಿಗೆ ಉತ್ತರವಾಗಿ:ಚಿಕ್ಕ ಮಕ್ಕಳು ಪ್ರಶ್ನೆಗಳನ್ನು ಕೇಳುವುದು ಸಹಜ. ಕೆಲವೊಮ್ಮೆ ಬೆಳಿಗ್ಗೆ ಹಾಸಿಗೆಯಲ್ಲಿ ಕಣ್ಣು ಬಿಟ್ಟ ಕ್ಷಣದಿಂದ ರಾತ್ರಿ ಮಲಗುವವರೆಗೆ ಒಂದಿಲ್ಲ ಒಂದು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಅವರ ಈ ಕುತೂಹಲ, ಪ್ರಶ್ನಾಭಾವ ನಿಜಕ್ಕೂ ಒಳ್ಳೆಯದು, ಆದರೆ ಇದು ಪೋಷಕರಿಗೆ ಹಿಂಸೆ ಮಾಡುತ್ತದೆ.ಕೆಲವೊಮ್ಮೆ ಮಕ್ಕಳ ಪ್ರಶ್ನೆಗಳಿಗೆ ಪೋಷಕರು ಉತ್ತರ ನೀಡುವುದಿಲ್ಲ, ಅಲ್ಲದೆ ಮಕ್ಕಳ ಮೇಲೆ ಅಸಡ್ಡೆ ತೋರುತ್ತಾರೆ. ಇದು ಸರಿಯಲ್ಲ. ಅದರ ಬದಲು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿ. ಕೆಲವೊಮ್ಮೆ ಅವರ ಪ್ರಶ್ನೆಗೆ ಅವರೇ ಯಾವ ರೀತಿ ಉತ್ತರ ಕಂಡುಕೊಳ್ಳಬಹುದು ಎಂಬುದನ್ನು ಕಲಿಸಿ. ಆದರೆ ಪ್ರಶ್ನೆ ಕೇಳುವ ರೀತಿ, ಬೇರೆಯವರಿಂದ ಉತ್ತರ ಪಡೆಯುವ ಕ್ರಮದ ಬಗ್ಗೆ ಬಾಲ್ಯದಿಂದಲೇ ಕಲಿಸಿ. ಅವರ ಜಿಜ್ಞಾಸೆಯನ್ನು ಪ್ರೋತ್ಸಾಹಿಸುವುದು, ಯಾವುದೇ ವಿಷಯದ ಬಗ್ಗೆ ಮಾತನಾಡಲು ಸಾಕಷ್ಟು ಆತ್ಮವಿಶ್ವಾಸ ತುಂಬುವುದು ಮಾಡುವುದರಿಂದ ಭವಿಷ್ಯದಲ್ಲಿ ಹಾದಿ ಸುಗಮವಾಗುತ್ತದೆ.

#ಮಾತನಾಡುವ ಗುಣ ಬೆಳೆಸಿ:ಇತ್ತೀಚಿನ ಪೋಷಕರಿಗೆ ಮಕ್ಕಳ ಜೊತೆ ಬೆರೆಯಲು ಸಮಯವಿಲ್ಲ. ಮಕ್ಕಳು ಬೇರೆಯವರ ಜೊತೆ ಬೆರೆತರೆ ಎಲ್ಲಿ ಹಾಳಾಗುತ್ತಾರೋ ಎನ್ನುವ ಭಯ. ಆ ಕಾರಣದಿಂದ ಒಂಟಿಯಾಗಿಯೇ ಬೆಳೆಸುತ್ತಾರೆ. ಅಂತಹ ಮಕ್ಕಳು ಹೊಸಬರನ್ನು ಕಂಡಾಗ ಬೆರೆಯುವುದಿಲ್ಲ. ಅಲ್ಲದೆ ಮಾತನಾಡಲು ಹಿಂಜರಿಯುತ್ತಾರೆ. ಅಂತಹ ಮಕ್ಕಳಿಗೆ ಹೊಸಬರನ್ನು ಭೇಟಿ ಮಾಡಿದಾಗ ಅವರ ಪರಿಚಯವನ್ನು ಅವರೇ ಮಾಡಿಕೊಳ್ಳಲು ಬಿಡಬೇಕು. ಹೊಸಬರ ಸ್ನೇಹ ಸಂಪರ್ಕ ಬೆಳೆಸಲು ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳಲ್ಲಿ ಹೊಸಬರನ್ನು ಕಂಡಾಗ ಆತಂಕ ಭಯ ಇರುವುದಿಲ್ಲ, ಅಲ್ಲದೇ ಮಾತನಾಡುವ ಗುಣವೂ ಬೆಳೆಯುತ್ತದೆ.

#ಧನ್ಯವಾದ ಸಮರ್ಪಣೆ:ಕೃತಜ್ಞತೆ ಎನ್ನುವುದು ನಮ್ಮೊಳಗಿನಿಂದ ಬರಬೇಕು. ಆದರೆ ಪೋಷಕರು ಮಕ್ಕಳಲ್ಲಿ ಕೃತಜ್ಞತಾ ಭಾವ ಮೂಡುವಂತೆ ಮಾಡುವುದು ಅವಶ್ಯ. ಕೃತಜ್ಞತೆ ಸಲ್ಲಿಸುವುದರಿಂದ ನಮ್ಮ ವರ್ಚಸ್ಸು, ಘನತೆ ಹೆಚ್ಚುವ ಜೊತೆಗೆ ಮಾನಸಿಕ ಸಂತೋಷಕ್ಕೂ ಕಾರಣವಾಗುತ್ತದೆ ಎನ್ನುತ್ತವೆ ಸಂಶೋಧನೆಗಳು. ಇದು ಆರೋಗ್ಯಕರ ಸಂಬಂಧದ ವೃದ್ಧಿಗೂ ಸಹಾಯ ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group