ಚರ್ಮದ ರಕ್ಷಣೆ ಗ್ಲಿಸರಿನ್ ನಿಂದ ಹೇಗೆ ತಿಳಿಯಿರಿ!

ಗ್ಲಿಸರಿನ್‌ನಲ್ಲಿ ಚರ್ಮಕ್ಕೆ ಉಪಯೋಗವಾಗುವ ಹಲವು ಅಂಶಗಳಿದ್ದು, ಎಣ್ಣೆ ಚರ್ಮದವರು ಇದನ್ನು ಬಳಸುವುದು ಅಂದ ಹೆಚ್ಚಿಸಿಕೊಳ್ಳಬಹುದು. ಇದು ವಾತಾವರಣದ ಮಾಯಿಶ್ಚರೈಸರ್‌ ಅನ್ನು ಹೀರಿಕೊಂಡು ಚರ್ಮದಲ್ಲಿ ಜಿಡ್ಡು ಉಂಟಾಗುವುದನ್ನು ತಡೆಯುತ್ತದೆ. ಆ ಕಾರಣದಿಂದ ಸೌಂದರ್ಯ ಉತ್ಪನ್ನಗಳಲ್ಲಿ ಗ್ಲಿಸರಿನ್‌ ಬಳಕೆಗೆ ಹೆಚ್ಚು ಮಹತ್ವ ನೀಡುತ್ತಾರೆ. ಇದು ಚರ್ಮಕ್ಕೆ ನೈಸರ್ಗಿಕ ಕಾಂತಿ ಒದಗಿಸುತ್ತದೆ. ಹಾಗಾದರೆ ಗ್ಲಿಸರಿನ್‌ನಿಂದ ಚರ್ಮಕ್ಕೆ ಯಾವೆಲ್ಲಾ ರೀತಿಯ ಉಪಯೋಗಗಳಿವೆ ನೋಡಿ.

#ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವುದಿಲ್ಲ:ಗ್ಲಿಸರಿನ್‌ ಬಳಕೆಯಿಂದ ಚರ್ಮವು ಮೃದುವಾಗುತ್ತದೆ. ಸಸ್ಯಜನ್ಯ ಮೂಲದ ಅಂಶಗಳು ಇದರಲ್ಲಿದ್ದು, ದದ್ದು, ತುರಿಕೆ ಹಾಗೂ ಚರ್ಮ ಉರಿಯಾಗುವುದನ್ನು ತಡೆಯುತ್ತದೆ. ಇದರಲ್ಲಿ ಉತ್ಕರ್ಷಣ ಗುಣವಿದ್ದು, ಚರ್ಮ ಉರಿಯುವುದನ್ನು ತಡೆದು, ಬಿರಿಯಾಗುವುದರಿಂದ ರಕ್ಷಿಸುತ್ತದೆ. ಎಕ್ಸಿಮಾ ಹಾಗೂ ಸೋರಿಯಾಸಿಸ್‌ ಸಮಸ್ಯೆ ಇರುವವರು ಇದನ್ನು ಬಳಸಬಹುದು.

#ತೇವಾಂಶ ಒದಗಿಸಲು:ಚರ್ಮದಲ್ಲಿ ತೇವಾಂಶ ಕೊರತೆಯ ಕಾರಣದಿಂದ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಇದು ಚರ್ಮದ ರಂಧ್ರಗಳ ಮುಚ್ಚುವಿಕೆಗೂ ಕಾರಣವಾಗಬಹುದು. ಗ್ಲಿಸರಿನ್‌ನ ನಿರಂತರ ಬಳಕೆಯಿಂದ ಚರ್ಮದ ಪಾಲಿಕಲ್ಸ್‌ಗಳು ತೆರೆದುಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಚರ್ಮ ಒಳಗಿನಿಂದ ತೇವಾಂಶಗೊಳ್ಳಲು ಸಹಾಯವಾಗುತ್ತದೆ.

#ಆ್ಯಂಟಿ ಏಜಿಂಗ್‌ ಗುಣ:ಗ್ಲಿಸರಿನ್‌ನಲ್ಲಿ ಆ್ಯಂಟಿ ಏಜಿಂಗ್‌ ಗುಣವಿದ್ದು, ಇದು ವಯಸ್ಸಾದಂತೆ ಕಾಣಿಸುವ ನೆರಿಗೆ, ಸುಕ್ಕು, ಸಿಪ್ಪೆ ಏಳುವುದು ಇಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಇದರಲ್ಲಿನ ಮಾಯಿಶ್ಚರೈಸಿಂಗ್‌ ಗುಣ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ತೇವಾಂಶ ಕೊರತೆಯು ಚರ್ಮದಲ್ಲಿ ಪ್ರೋಟೀಸ್‌ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಿಪ್ಪೆ ಏಳುತ್ತದೆ. ಅಲ್ಲದೆ ಬೇಗನೆ ವಯಸ್ಸಾದಂತೆ ಕಾಣಿಸುತ್ತದೆ. ಆದ್ದರಿಂದ ಗ್ಲಿಸರಿನ್‌ ಬಳಕೆ ಉತ್ತಮ.

#ಚರ್ಮವನ್ನು ಮೃದುಗೊಳಿಸುತ್ತದೆಪ್ರತಿದಿನ ಗ್ಲಿಸರಿನ್‌ ಹಚ್ಚಿಕೊಳ್ಳುವುದರಿಂದ ಜಿಡ್ಡು, ಎಣ್ಣೆಯಂಶವನ್ನು ಹೋಗಲಾಡಿಸಿ, ಚರ್ಮವನ್ನು ಮೃದುಗೊಳಿಸುತ್ತದೆ. ಚರ್ಮದ ಹೊಳಪು ಹೆಚ್ಚಿಸಿ, ಕಾಂತಿಯಿಂದ ಕೂಡಿರಲು ಸಹಾಯ ಮಾಡುತ್ತದೆ

#ಸ್ಮೂಥ್‌ ಸ್ಕಿನ್‌ : ಆ್ಯಂಟಿ ಏಜಿಂಗ್‌ ಕ್ರೀಂಗಳನ್ನ ಬಳಕೆ ಮಾಡಿ ಸ್ಕಿನ್‌ ರಫ್‌ ಆಗಿದೆಯೆ? ಇದಕ್ಕೆ ಕಾರಣ ಕ್ರೀಂ ನಲ್ಲಿರುವ ಕೆಮಿಕಲ್‌ಗಳು. ನಿಮ್ಮ ಸ್ಕಿನ್‌ ಸ್ಮೂತ್‌ ಆಗಬೇಕೆಂದರೆ ಮುಖಕ್ಕೆ ಗ್ಲಿಸರಿನ್‌ ಹಚ್ಚಿ. ಇದರಿಂದ ಸ್ಕಿನ್‌ ಫ್ರೆಶ್‌ ಮತ್ತು ಯಂಗ್‌ ಆಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group