ಪೀಚ್‌ ಹಣ್ಣಿನ ಆರೋಗ್ಯ ಪ್ರಯೋಜನಗಳು!

ವಿಟಮಿನ್ ಸಿ ಹೇರಳವಾಗಿರುವ ಪೀಚ್‌ ಹಣ್ಣಿನ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಹೃದಯದ ಆರೋಗ್ಯವನ್ನು ಉತ್ತಮವಾಗಿಸುತ್ತದೆ ಅಷ್ಟೇ ಅಲ್ಲದೆ ಕಣ್ಣಿನ ದೃಷ್ಟಿಯನ್ನು ಸಹ ಸುಧಾರಿಸುತ್ತದೆ.

ಇಷ್ಟೆಲ್ಲಾ ಪ್ರಯೋಜನ ಇರುವ ಪೀಚ್‌ ಹಣ್ಣನ್ನು ತಪ್ಪಿಸಲು ಸಾಧ್ಯವೇ?. ಇಲ್ಲ, ಪೀಚ್‌ ಹಣ್ಣು ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೇಗೆ ನೀಡುತ್ತದೆ ಮುಂದೆ ನೋಡೋಣ:

#ಒತ್ತಡ ನಿಯಂತ್ರಣ : ಪೀಚ್​​ ಹಣ್ಣಿನಲ್ಲಿರುವ ಖನಿಜಾಂಶಗಳು ಒತ್ತಡ ನಿವಾರಣೆಗೆ ಸಹಾಯಕವಾಗಿದೆ. ಇದರ ಹೂವುಗಳನ್ನು ಮನಸ್ಸನ್ನು ಶಾಂತಗೊಳಿಸಲು ಬಳಸಲಾಗುತ್ತದೆ.

#ಹೃದಯದ ಆರೋಗ್ಯಕ್ಕೆ:ಆರೋಗ್ಯ ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹೃದ್ರೋಗಕ್ಕೆ ಹಲವು ಕಾರಣಗಳಿವೆ ಕೆಟ್ಟ ಕೊಲೆಸ್ಟ್ರಾಲ್ ಕೂಡ ಒಂದು ಕಾರಣ. ಕೆಟ್ಟ ಕೊಲೆಸ್ಟ್ರಾಲ್ ನಿಂದ ಪಾರ್ಶ್ವವಾಯು ಬರುವ ಅಪಾಯವೂ ಇದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು, ನೀವು ಪ್ರತಿದಿನ ಪೀಚ್ ಅನ್ನು ಸೇವಿಸಬಹುದು. ಇದರ ಬಳಕೆಯಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ಹೃದಯವೂ ಆರೋಗ್ಯವಾಗಿರುತ್ತದೆ.

#ಅಂಟಿ-ಆಕ್ಸಿಡೆಂಟ್​​ಗಳು : ಪೀಚ್​ ಹಣ್ಣಿನ ಸಿಪ್ಪೆಯು ಪಾಲಿಫೆನಾಲ್​ ಎಂಬ ಅಂಶವನ್ನು ಒಳಗೊಂಡಿರುತ್ತದೆ. ಇದು ದೇಹದಲ್ಲಿ ಅಂಟಿ-ಆಕ್ಸಿಡೆಂಟ್​​ಗಳಾಗಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್​ ಸಿ ಗಣನೀಯ ಪ್ರಮಾಣದಲ್ಲಿದ್ದು, ಈ ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನುವುದು ಉತ್ತಮ.

#ದೃಷ್ಟಿ ಉತ್ತಮವಾಗಿಸುತ್ತದೆ:ಪೀಚ್‌ನಲ್ಲಿ ಬೀಟಾ ಕ್ಯಾರೋಟಿನ್ ಅಂಶ ಕಂಡುಬರುತ್ತದೆ. ಬೀಟಾ ಕ್ಯಾರೋಟಿನ್ ಕಣ್ಣುಗಳಿಗೆ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಿಟಮಿನ್ ಎ ಯುಕ್ತ ಆಹಾರ ಸೇವಿಸುವುದರಿಂದ ದೃಷ್ಟಿ ಹೆಚ್ಚಾಗುತ್ತದೆ. ಅಲ್ಲದೆ, ವಿಟಮಿನ್ ಎ ರೆಟಿನಾವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group