ಖಾಸಗಿ ಅಂಗದಲ್ಲಿ ತುರಿಕೆ ಸಮಸ್ಯೆಯೇ ಹೀಗೇ ಮಾಡಿ!

ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ಟೀ ಟ್ರೀ ಆಯಿಲ್ ಅನ್ನು ಖಾಸಗಿ ಭಾಗದಲ್ಲಿ ಹಚ್ಚಿ ಸ್ವಲ್ಪ ಸಮಯದ ನಂತರ ಶುದ್ಧವಾದ ನೀರಿನಿಂದ ವಾಶ್ ಮಾಡಿ. ಈ ರೀತಿ ಮಾಡುವುದರಿಂದ ಜನನಾಂಗಗಳಲ್ಲಿ ತುರಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
#ಆಯುರ್ವೇದದಲ್ಲಿ ಬೇವಿನ ಸೊಪ್ಪನ್ನು ಔಷಧೀಯ ಗುಣಗಳ ಆಗರ ಎಂದು ಬಣ್ಣಿಸಲಾಗಿದೆ. ಅದರಲ್ಲಿರುವ ಆಂಟಿಫಂಗಲ್ ಗುಣಲಕ್ಷಣಗಳು ಸೋಂಕು ಮತ್ತು ತುರಿಕೆಗೆ ದಿವ್ಯೌಷಧ ಎಂಬುದರಲ್ಲಿ ಅನುಮಾನವೇ ಇಲ್ಲ. ಇದಕ್ಕಾಗಿ, ನೀವು ಸ್ನಾನ ಮಾಡುವ ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಒಂದು ಗಂಟೆ ಬಿಟ್ಟು ಆ ನೀರಿನಿಂದ ಸ್ನಾನ ಮಾಡಿ.
#ಸಾಮಾನ್ಯವಾಗಿ ತೂಕ ಇಳಿಕೆಯಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲ್ಪಟ್ಟಿರುವ ಆಪಲ್ ಸೈಡರ್ ವಿನೆಗರ್ ಕೂಡ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಬಹಳ ಪರಿಣಾಮಕಾರಿ ಆಗಿದೆ. ಇದಕ್ಕಾಗಿ ಒಂದು ಲೋಟ ನೀದಿರಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಹಾಕಿ ಪ್ರತಿ ದಿನ ಈ ನೀರಿನಿಂದ ಖಾಸಗಿ ಅಂಗವನ್ನು ವಾಶ್ ಮಾಡುವುದರಿಂದ ತುರಿಕೆ ಸಮಸ್ಯೆಗೆ ಮುಕ್ತಿ ದೊರೆಯಲಿದೆ.
#ರೋಸ್ಮರಿ ಎನ್ನುವುದು ಒಂದು ಸುವಾಸನಾಭರಿತ, ನಿತ್ಯ ಹರಿದ್ವರ್ಣ ಸಸ್ಯ. ಚೂಪಾದ ಎಲೆ ಹೊಂದಿರುವ ರೋಸ್‌ಮರಿ ಬಿಳಿ, ಗುಲಾಬಿ, ನೀಲಿ ಹಾಗೂ ನೇರಳೆ ಬಣ್ಣದ ಹೂವು ಬಿಡುತ್ತದೆ. ಈ ರೋಸ್‌ಮರಿ ಎಲೆಗಳು ಚರ್ಮದ ಸಮಸ್ಯೆಗಳಿಗೆ ನೈಸರ್ಗಿಕ ಮನೆಮದ್ದಾಗಿದೆ. ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳನ್ನು ಹೊಂದಿರುವ ರೋಸ್ಮರಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದು ತಣ್ಣಗಾದ ನಂತರ ಆ ನೀರಿನಿಂದ ಸ್ನಾನ ಮಾಡುವುದರಿಂದ ತುರಿಕೆ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.
#ಸಾಮಾನ್ಯವಾಗಿ ಯಾವುದೇ ಸಣ್ಣ ಪುಟ್ಟ ಗಾಯವಾದಾಗ ಮೊದಲು ಕೊಬ್ಬರಿ ಎಣ್ಣೆಯನ್ನು ಬಳಸುತ್ತೇವೆ. ಜನನಾಂಗದಲ್ಲಿನ ತುರಿಕೆಗೂ ಕೂಡ ಕೊಬ್ಬರಿ ಎಣ್ಣೆ ಅತ್ಯುತ್ತಮ ಮನೆಮದ್ದಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.